ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೇಷ್ಮೆ ಸೀರೆಗೆ ಹಾಲ್ಟರ್ ನೆಕ್ ಬ್ಲೌಸ್! ಹೌದು. ಇದೀಗ ಈ ಪ್ರಯೋಗಾತ್ಮಕ ಡಿಸೈನ್‌ನ ಬ್ಲೌಸ್ ಅನ್ನು ರೇಷ್ಮೆ ಸೀರೆಗೆ ಮ್ಯಾಚ್ ಮಾಡಿ ಧರಿಸಿರುವ ನಟಿ ಸಪ್ತಮಿಗೌಡ (Star Fashion), ರೇಷ್ಮೆ ಸೀರೆಗೆ ಹಾಲ್ಟರ್ ನೆಕ್ ಬ್ಲೌಸ್ ಟ್ರೆಂಡಿಯಾಗಿಸಿದ್ದಾರೆ.
ರೇಷ್ಮೆ ಸೀರೆಯಲ್ಲಿ ಬೊಂಬೆ
ನಟಿ ಸಪ್ತಮಿ ಗೌಡ ಟ್ರೆಡಿಷನಲ್ ಔಟ್‌ಫಿಟ್ ಮಾತ್ರವಲ್ಲ, ಸೀರೆಯಲ್ಲೂ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಇದಕ್ಕೆ ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಸೀರೆಯುಟ್ಟ ಫೋಟೊಗಳ ಕಾಮೆಂಟ್‌ಗಳೇ ಸಾಕ್ಷಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ರೇಷ್ಮೆ ಸೀರೆ ಎಂದಾಕ್ಷಣ ಅದಕ್ಕೆ ಹೆವಿ ಡಿಸೈನ್‌ನ ಬ್ಲೌಸ್ ಧರಿಸಲೇ ಬೇಕೆಂದಿಲ್ಲ! ಪಕ್ಕಾ ಟ್ರೆಡಿಷನಲ್ ಲುಕ್ ನೀಡಬೇಕೆಂದಿಲ್ಲ! ಸಿಂಪಲ್ ಆಗಿ ಕಾಣುವಂತೆಯೂ ಆಕರ್ಷಕವಾಗಿಸಬಹುದು ಎಂಬುದು ಫ್ಯಾಷನಿಸ್ಟ್‌ಗಳ ಅಭಿಪ್ರಾಯ. ಇನ್ನು ಸಪ್ತಮಿ ಗೌಡ, ಈ ಬಾರಿ ರೇಷ್ಮೆ ಸೀರೆಗೆ ಸೆಲೆಬ್ರೆಟಿ ಡಿಸೈನರ್ ಡಿಸೈನ್ ಮಾಡಿದ ಕ್ಯಾಶುವಲ್ ಲುಕ್ ನೀಡುವಂತಹ ಹಾಲ್ಟರ್ ನೆಕ್ ಡಿಸೈನ್‌ನ ಝರಿ ಬ್ಲೌಸ್ ಧರಿಸಿದ್ದಾರೆ. ಇದು ಸಿಂಪಲ್ ಲುಕ್‌ನೊಂದಿಗೆ ಕಂಪ್ಲೀಟ್ ಡಿಫರೆಂಟ್ ಆಗಿ ಬಿಂಬಿಸಿದೆ. ವೆಸ್ಟರ್ನ್ ಕಾನ್ಸೆಪ್ಟ್ ಅನ್ನು ಈ ಸ್ಲೀವ್‌ಲೇಸ್ ಬ್ಲೌಸ್‌ಗೆ ಹಾಲ್ಟರ್ ನೆಕ್ ಡಿಸೈನ್ ನೀಡಿರುವುದು ಜ್ಯುವೆಲರಿಯನ್ನು ಮಿನಿಮಲ್ ಆಗಿಸಿದೆ. ಅದರೊಂದಿಗೆ ಎಲಿಗೆಂಟ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇನ್ನು ಇದ್ಯಾವುದೇ ಸಿನಿಮಾ ಪ್ರಮೋಷನ್ ಕೂಡ ಅಲ್ಲ! ಕ್ಯಾಶುವಲ್ ಆಗಿ ಈ ಪೋಸ್ಟ್ ಮಾಡಿರುವ ನಟಿ ಸಪ್ತಮಿ ಗೌಡ, ತಮ್ಮನ್ನು ತಾವು ಹಾಡಿ ಹೊಗಳಿಕೊಂಡಿದ್ದಾರೆ. ಇದು ಅವರ ಸೆಲ್ಫ್ ಲವ್ ತೋರ್ಪಡಿಸುತ್ತದೆ. ಜೊತೆಗೆ ಸೀರೆ ಪ್ರೇಮವನ್ನು ಎತ್ತಿ ಹಿಡಿಯುವಂತಿದೆ.
ಸೀರೆಯಲ್ಲಿ ಇಷ್ಟಪಡುವ ಅಭಿಮಾನಿಗಳು
ನನಗಂತೂ ಟ್ರೆಡಿಷನಲ್ ಫ್ಯಾಷನ್ ಮೊದಲಿನಿಂದಲೂ ಇಷ್ಟ. ಇನ್ನು ಕಾಂತಾರ ನಂತರ ಅಭಿಮಾನಿಗಳು ಕೂಡ ನನ್ನನ್ನು ಆದಷ್ಟೂ ಟ್ರೆಡಿಷನಲ್ ಔಟ್‌ಫಿಟ್ ಅಥವಾ ಸೀರೆಯಲ್ಲಿ ಹೆಚ್ಚೆಚ್ಚು ನೋಡಲು ಬಯಸುತ್ತಾರೆ ಎನ್ನುವ ಸಪ್ತಮಿ ಗೌಡ, ಇದೀಗ ಸಾಕಷ್ಟು ಫ್ಯಾಷನ್ ಪೇಜೆಂಟ್‌ಗಳಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ, ನಟಿ ಸಪ್ತಮಿ ಗೌಡ ಅವರ ಈ ಹಾಲ್ಟರ್ ನೆಕ್ ಬ್ಲೌಸ್ ಟ್ರೆಂಡಿಯಾಗಿರುವುದು ಮಾತ್ರವಲ್ಲ, ಬ್ಲೌಸ್‌ಗೆ ಸಾವಿರಾರು ಖರ್ಚು ಮಾಡುವ ಮಾನಿನಿಯರಿಗೆ ಸಿಂಪಲ್ಲಾಗಿ ಹೇಗೆ ಹೊಸ ಲುಕ್ ನೀಡಬಹುದು ಎಂಬುದಕ್ಕೆ ಐಡಿಯಾ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Footwear Fashion: ವೆಡ್ಡಿಂಗ್ ಸೀಸನ್ ಟ್ರೆಂಡ್; ಜಗಮಗಿಸುವ ಶಿಮ್ಮರ್ ಫುಟ್‌ವೇರ್ಸ್