ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ಮೇಘಾ ಶ್ರೀ, (Star Fashion) ಸೀಸನ್ ಟ್ರೆಂಡ್‌ನಲ್ಲಿರುವ ಪ್ಲೇ ಸೂಟ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ, ತಮಿಳು ಹಾಗೂ ಭೋಜ್‌ಪುರಿ ಸಿನಿಮಾಗಳಲ್ಲೂ ನಟಿಸಿರುವ ಮೇಘಾ ಶ್ರೀ, ಸಾಕಷ್ಟು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಅಷ್ಟೇಕೆ! ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸಕ್ರಿಯರಾಗಿದ್ದಾರೆ. ಇನ್ನು ಅವರು ಧರಿಸಿರುವ ರಾಂಪರ್ ಶೈಲಿಯ ಪ್ರಿಂಟೆಡ್ ಪ್ಲೇ ಸೂಟ್ ಅವರ ಕ್ಯೂಟ್‌ನೆಸ್ ಅನ್ನುಇಮ್ಮಡಿಗೊಳಿಸಿದೆ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು.
ಮೇಘಾ ಶ್ರೀಗೂ ಇಷ್ಟವಾದ ಡ್ರೆಸ್
ನನಗೆ ಟ್ರೆಂಡಿ ಉಡುಪುಗಳನ್ನು ಧರಿಸುವುದು ಮಾತ್ರವಲ್ಲ, ಆರಾಮದಾಯಕ ಎನಿಸುವ ಇಂತಹ ಸ್ಟೈಲಿಶ್ ಔಟ್‌ಫಿಟ್‌ಗಳು ನನ್ನ ಆಲ್‌ಟೈಮ್ ಫ್ಯಾಷನ್ ಲಿಸ್ಟ್‌ನಲ್ಲಿ ಸೇರಿವೆ. ಎಂತಹ ಸಂದರ್ಭಕ್ಕೂ ಇವು ಮ್ಯಾಚ್ ಆಗುತ್ತವೆ. ನನಗೂ ಪ್ರಿಯವಾಗಿದೆ. ಪ್ಲೇ ಸೂಟ್ ಮೇಲೆ ಲವ್ ಆಗಿದೆ ಎನ್ನುತ್ತಾರೆ ನಟಿ ಮೇಘಾ ಶ್ರೀ.
ಏನಿದು ಪ್ಲೇ ಸೂಟ್?
ಅಂದಹಾಗೆ, ಸಿಂಗಲ್ ಪೀಸ್ ಉಡುಪಾದ ಇದನ್ನು ರಾಂಪರ್ಸ್ ಎಂದೂ ಕೂಡ ಕರೆಯಲಾಗುತ್ತದೆ. ಟೀನೇಜ್ ಹುಡುಗಿಯರು, ಯುವತಿಯರು ಪ್ಲೇ ಸೂಟ್ ಎನ್ನುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊದಲು ರಾಂಪರ್ ಅನ್ನು ಮಕ್ಕಳಿಗಾಗಿ ಬಳಸಲಾಗುತ್ತಿತ್ತು. ಬರಬರುತ್ತಾ ಈ ಡ್ರೆಸ್ ಒಂದಿಷ್ಟು ಹೊಸ ಲುಕ್ ಪಡೆದು ಟೀನೇಜ್ ಹಾಗೂ ಯುವತಿಯರು ಧರಿಸುವ ಉಡುಪಾಯಿತು. ಔಟಿಂಗ್ ಹಾಗೂ ಟ್ರಾವೆಲಿಂಗ್‌ನಲ್ಲೂ ಬಳಸುವುದು ಹೆಚ್ಚಾಯಿತು. ಕಾಲಕಳೆದಂತೆ ಇವುಗಳಲ್ಲೆ ಪ್ರಿಂಟೆಡ್, ಸ್ಟ್ರಾಪ್, ಬಾರ್ಡಟ್, ಆಫ್ ಶೋಲ್ಡರ್, ಸ್ಲೀವ್‌ಲೆಸ್ ಹಾಗೂ ನಾನಾ ವಿನ್ಯಾಸದ ಎಕ್ಸ್‌ಟ್ರಾ ಡಿಸೈನ್‌ಗಳು ಸೇರಿಕೊಂಡು, ಪ್ಲೇ ಸೂಟ್ ರೂಪುಗೊಂಡಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಈ ಉಡುಪು ಬಾಲಿವುಡ್ ಸೆಲೆಬ್ರೆಟಿಗಳ ಫೆವರೇಟ್ ಔಟ್‌ಫಿಟ್ ಕೂಡ ಇದಾಗಿದೆ ಎನ್ನುವ ಫ್ಯಾಷನಿಸ್ಟಾ ನಮಿತಾ ಪ್ರಕಾರ, ಈ ಔಟ್‌ಫಿಟ್ ಇದೀಗ ಕೇವಲ ಕಳೆದ ಸೀಸನ್‌ನಲ್ಲಿ ಮಾತ್ರವಲ್ಲ, ಈ ಸೀಸನ್‌ನಲ್ಲೂ ಮುಂದುವರೆದಿದೆ. ಇದಕ್ಕೆ ಕಾರಣ ಆರಾಮದಾಯಕ ಎಂದೆನಿಸುವುದು. ಹಾಗಾಗಿ, ಜೆನ್ ಜಿ ಹುಡುಗಿಯರು ಕೂಡ ಈ ಪ್ಲೇ ಸೂಟ್‌ಗಳನ್ನು ಹೆಚ್ಚಾಗಿ ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ.
ಪ್ಲೇ ಸೂಟ್ ಪ್ಯಾಟನ್ರ್ಸ್
ಸ್ಟೈಲಿಸ್ಟ್ ಶ್ರಾಫ್ ಹೇಳುವಂತೆ, ಫ್ಯಾಬ್ರಿಕ್‌ಗೆ ತಕ್ಕಂತೆ ಸಾಕಷ್ಟು ಪ್ಲೇ ಸೂಟ್‌ಗಳ ಲುಕ್ ಕೂಡ ಬದಲಾಗುತ್ತದೆ. ಡೆನಿಮ್, ಲೆನಿನ್, ಕಾಟನ್, ಕ್ರೇಪ್ ಹೀಗೆ ಫ್ಯಾಬ್ರಿಕ್ ಇಡೀ ಡ್ರೆಸ್‌ನ ಲುಕ್ ಬದಲಿಸುತ್ತದೆ. ಇದೀಗ ಮಾನೋಕ್ರೋಮ್ ಶೇಡ್ ಹಾಗೂ ಪ್ರಿಂಟೆಡ್ ನವು ಎರಡೂ ಕೂಡ ಟ್ರೆಂಡಿಯಾಗಿದೆ ಎನ್ನುತ್ತಾರೆ.
ಒಟ್ಟಾರೆ, ನಟಿ ಮೇಘಾ ಶ್ರೀ, ಈ ಪ್ಲೇ ಸೂಟ್‌ನಲ್ಲಿ ಕ್ಯೂಟ್ ಆಗಿ ಕಾಣಿಸುವುದರೊಂದಿಗೆ ಈ ಫ್ಯಾಷನನ್ನು ಮುಂದಿನ ಸೀಸನ್‌ಗೂ ಕೊಂಡೊಯ್ದಿದ್ದಾರೆ ಎಂದು ವಿಮರ್ಶಿಸುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Star Fashion: ಬದಲಾಯ್ತು ರಾಮಾಚಾರಿ ಸೀರಿಯಲ್ ಖ್ಯಾತಿಯ ನಟ ಋತ್ವಿಕ್ ಲುಕ್!