Site icon Vistara News

Star Fashion: ವೈಟ್‌ ಕಟೌಟ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ರಚನಾ ಇಂದರ್‌ ಗ್ಲಾಮರಸ್‌ ಲುಕ್‌

#image_title

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟಿ ರಚನಾ ಇಂದರ್, ವೈಟ್‌ ಕಟೌಟ್‌ ಡಿಸೈನರ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮೀ ಕೃಷ್ಣ ಅವರ ಡಿಸೈನಿಂಗ್‌ ಹಾಗೂ ಸ್ಟೈಲಿಂಗ್‌ನ ಈ ಔಟ್‌ಫಿಟ್‌ನಲ್ಲಿ ರಚನಾ ಇಂದರ್‌ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದು, ಜೆನ್‌ ಜಿ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಏನಿದು ಕಟೌಟ್‌ ಡ್ರೆಸ್‌?

ಕಟೌಟ್‌ ಡ್ರೆಸ್‌ಗಳು ಸಮ್ಮರ್‌ನ ಹಾಟ್‌ ಫ್ಯಾಷನ್‌ ಹಾಗೂ ಹೈ ಫ್ಯಾಷನ್‌ನಲ್ಲಿ ಸೇರಿವೆ. ಸಾಮಾನ್ಯವಾಗಿ ಬಿಂದಾಸ್‌ ಫ್ಯಾಷನ್‌ ಪ್ರಿಯರ ಚಾಯ್ಸ್‌ನಲ್ಲಿ ಹೆಚ್ಚಾಗಿ ಕಾಣಬಹುದು. ಹಾಲಿವುಡ್‌ನಲ್ಲಿದ್ದ ಈ ಫ್ಯಾಷನ್‌ ಬಾಲಿವುಡ್‌ಗೂ ಎಂಟ್ರಿ ನೀಡಿ ಇದೀಗ ನಮ್ಮ ಸ್ಯಾಂಡಲ್‌ವುಡ್‌ಗೂ ಪ್ರವೇಶ ಪಡೆದಿದೆ. ಟೆಲಿವುಡ್‌ನ ತಾರೆಯರೂ ತಮ್ಮ ಫ್ಯಾಷನ್‌ ಸ್ಟೈಲ್‌ಸ್ಟೇಟ್‌ಮೆಂಟಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ. ಆದರೆ, ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ನಿಧಾನಗತಿಯಲ್ಲಿ ಟ್ರೆಂಡಿಯಾಗುತ್ತಿದೆ.

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮೀ ಕೃಷ್ಣ ಅವರ ಪ್ರಕಾರ, ಕಟೌಟ್‌ ಡ್ರೆಸ್‌ಗಳು ಸಮ್ಮರ್‌ ಹಾಟ್‌ ಫ್ಯಾಷನ್‌ನ ಮೊದಲ ಲಿಸ್ಟ್‌ನಲ್ಲಿರುತ್ತವೆ. ಇದೀಗ ವೈಟ್‌ ಡ್ರೆಸ್‌ಗಳು ಟ್ರೆಂಡಿಯಾಗಿದ್ದು, ಸೀಸನ್‌ಗೆ ತಕ್ಕಂತೆ ಗ್ಲಾಮರಸ್‌ ಔಟ್‌ಫಿಟ್‌ಗಳಾಗಿ ಬದಲಾಗಿವೆ. ಇನ್ನು, ರಚನಾ ಧರಿಸಿರುವ ಕಟೌಟ್‌ ಡ್ರೆಸ್‌ ಪಫ್‌ ಪ್ಲೈಡ್‌ ಹೊಂದಿದ್ದು, ಆಕರ್ಷಕವಾಗಿ ಕಾಣಿಸುತ್ತಿದೆ ಎಂದಿದ್ದಾರೆ. ಸೆಲೆಬ್ರೆಟಿ ಫೋಟೋಗ್ರಾಫರ್‌ ಕೃಷ್ಣ ನುನ್ನಿ ಅವರ ಫೋಟೋಗ್ರಫಿಯಲ್ಲಿ ರಚನಾ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ

ಬಾಲಿವುಡ್‌ ತಾರೆಯರ ನೆಚ್ಚಿನ ಔಟ್‌ಫಿಟ್‌

ಬಾಲಿವುಡ್‌ ತಾರೆಯರ ನೆಚ್ಚಿನ ಔಟ್‌ಫಿಟ್‌ಗಳಲ್ಲಿ ಕಟೌಟ್‌ ಡ್ರೆಸ್‌ಗಳು ಮೊದಲ ಸ್ಥಾನ ಪಡೆದಿವೆ. ನಾನಾ ಶೈಲಿಯ ವಿನ್ಯಾಸದ ಕಟೌಟ್‌ ಡ್ರೆಸ್‌ಗಳು ತಾರೆಯರ ವಾರ್ಡ್ರೋಬ್‌ ಸೇರಲು ಕಾರಣ. ಇನ್ನು ಜೆನ್‌ ಜಿ ಹುಡುಗಿಯರ ಫೇವರಿಟ್ ಲಿಸ್ಟ್‌ನಲ್ಲೂ ಈ ಶೈಲಿಯ ಕಟೌಟ್‌ ಡ್ರೆಸ್‌ಗಳು ಸೇರಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ರಚನಾ ಇಂದರ್‌ ವೈಟ್‌ ಡ್ರೆಸ್‌ ಲವ್

“ಇತ್ತೀಚೆಗೆ ಶ್ವೇತ ವರ್ಣದ ಔಟ್‌ಫಿಟ್‌ಗಳು ನನ್ನ ಲಿಸ್ಟ್‌ಗೆ ಹೆಚ್ಚೆಚ್ಚು ಸೇರುತ್ತಿವೆ” ಎನ್ನುವ ನಟಿ ರಚನಾ ಇಂದರ್‌, ಗ್ಲಾಮರಸ್‌ ಕಟೌಟ್‌ ಔಟ್‌ಫಿಟ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಈ ಡ್ರೆಸ್ಸನ್ನು ಟ್ರೆಂಡಿಯಾಗಿಸಿದ್ದಾರೆ..

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ರೇಷ್ಮೆ ಸೀರೆಗೆ ಪ್ರಯೋಗಾತ್ಮಕ ಹಾಲ್ಟರ್ ನೆಕ್ ಬ್ಲೌಸ್ ಫ್ಯಾಷನ್; ಟ್ರೆಂಡಿಯಾಗಿಸಿದ ನಟಿ ಸಪ್ತಮಿ ಗೌಡ

Exit mobile version