ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಶುಭಾ ಪೂಂಜಾ ಧರಿಸಿರುವ ಪ್ರಿಂಟೆಡ್ ಮಿಡಿ ಸ್ಕರ್ಟ್ (Star Fashion) ಅವರನ್ನು ಕ್ಯೂಟ್ ಆಗಿ ಬಿಂಬಿಸಿದೆ. ಹೌದು. ಇದೀಗ ಕಳೆದ ಸೀಸನ್‌ನಿಂದ ಈ ಸೀಸನ್‌ಗೂ ಲಗ್ಗೆ ಇಟ್ಟಿರುವ ಫ್ಲೋರಲ್ ಹಾಗೂ ಟ್ರಾಪಿಕಲ್ ಪ್ರಿಂಟೆಡ್‌ನ ಕೋ -ಆರ್ಡ್ ಮಿಡಿ ಸ್ಕರ್ಟ್ ಶುಭಾ ಅವರಿಗೆ ಮತ್ತಷ್ಟು ಯಂಗ್ ಲುಕ್ ನೀಡುವುದರೊಂದಿಗೆ ಚಿಕ್ಕ ಹುಡುಗಿಯಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಪ್ರವರಾ ಡಿಸೈನ್ ಸ್ಟುಡಿಯೋ ವಿನ್ಯಾಸದ ಈ ಮಿಡಿ ಸ್ಕರ್ಟ್‌ನಲ್ಲಿ, ಸಿನಿಮಾ ವೊಂದರ ಪ್ರಮೋಷನ್‌ಗಾಗಿ ಈ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ಶುಭಾ ಪೂಂಜಾ ಅವರ ಈ ಕ್ಯೂಟ್ ಸಿಂಪಲ್ ಫ್ಯಾಷನ್ ನಿಮ್ಮದಾಗಿಸಿಕೊಳ್ಳಲು ನೀವೂ ಕೂಡ ಹೀಗೆ ಸ್ಟೈಲಿಂಗ್ ಟ್ರೈ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕೋ –ಆರ್ಡ್ ಸೆಟ್ ಸೆಲೆಕ್ಷನ್
ಒಂದೊಂದು ಬಗೆಯ ಕೋ ಆರ್ಡ್ ಸೆಟ್‌ಗಳು ಒಂದೊಂದು ಲುಕ್ ನೀಡುತ್ತವೆ. ಯಂಗ್ ಲುಕ್ ಬೇಕಾದಲ್ಲಿ ಆದಷ್ಟೂ ಫ್ರಾಕ್ ಹಾಗೂ ಮಿಡಿ ಆಯ್ಕೆ ಮಾಡಿ. ಧರಿಸಿದಾಗ ಚಿಕ್ಕ ಹುಡುಗಿಯಂತೆ ಇವು ಬಿಂಬಿಸುತ್ತವೆ.
ಆಕರ್ಷಕವಾದ ಬಣ್ಣ ಸೆಲೆಕ್ಟ್ ಮಾಡಿ
ಯಾವುದೇ ಔಟ್‌ಫಿಟ್ ಆಯ್ಕೆ ಮಾಡುವಾಗ ಅದರ ಶೇಡ್ಸ್ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಅದರಲ್ಲೂ ಮುಖ ಬ್ರೈಟ್ ಆಗಿ ಕಾಣುವಂತಹ ಬಣ್ಣದ್ದು ಸೆಲೆಕ್ಟ್ ಮಾಡಿ.
ಮೇಕಪ್ ಸಿಂಪಲ್ ಆಗಿರಲಿ
ಯಂಗ್ ಲುಕ್‌ಗಾಗಿ ಸದಾ ಸಿಂಪಲ್ ಮೇಕಪ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮೆಚ್ಯೂರ್ಡ್ ಲುಕ್ ನಿಮ್ಮದಾಗಬಹುದು. ಟ್ರೆಂಡಿ ಕ್ಯಾಶುವಲ್ ಲುಕ್‌ಗೆ ಮೈಲ್ಡ್ ಮೇಕಪ್ ಮಾಡಿ .
ಸಿಂಪಲ್ ಹೇರ್‌ಸ್ಟೈಲ್
ಮಿಡಿ ಸ್ಕರ್ಟ್‌ಗೆ ಮ್ಯಾಚ್ ಆಗುವಂತಹ ಹೇರ್‌ಸ್ಟೈಲ್ ನಿಮ್ಮ ಇಡೀ ಮುಖದ ಲುಕ್ ಬದಲಿಸುವ ಚಾನ್ಸ್ ಇದೆ. ಹಾಗಾಗಿ ಆದಷ್ಟೂ ಕ್ಯೂಟ್ ಆಗಿ ಕಾಣಿಸುವ ಹೇರ್‌ಸ್ಟೈಲ್ ಮಾಡಿ. ಉದಾಹರಣೆಗೆ., ಶುಭಾ ಪೂಂಜಾರ ಹಣೆಯ ಮೇಲಿನ ಫ್ರಿಂಝ್ ಕಟ್ ಚಿಕ್ಕ ಹುಡುಗಿಯಂತೆ ಬಿಂಬಿಸಿದೆ. ಇಂತವನ್ನು ಟ್ರೈ ಮಾಡಿ.
ಟ್ರೆಂಡ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ
ಇನ್ನು ಇಡೀ ಲುಕ್ ಸ್ಟೈಲಿಂಗ್ ಮೇಲೆ ಅವಲಂಬಿತವಾಗಿರುತ್ತೆ. ಆಕ್ಸೆಸರೀಸ್‌ನಿಂದಿಡಿದು, ಮೇಕಪ್, ಸ್ಯಾಂಡಲ್ಸ್ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಇವೆಲ್ಲವೂ ಒಂದಕ್ಕೊಂದು ಮ್ಯಾಚ್ ಆದಾಗ ಮಾತ್ರ ಕ್ಯೂಟ್ ಆಗಿ ಕಾಣಿಸಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ನಟಿ ಮೋಕ್ಷಿತಾ ಪೈ ಕ್ಯಾಶುವಲ್ ಲುಕ್ ನಿಮ್ಮದಾಗಿಸಿಕೊಳ್ಳಬೇಕೇ? ಹೀಗೆ ಮಿಕ್ಸ್ ಮ್ಯಾಚ್ ಮಾಡಿ!