Site icon Vistara News

Star Hairstyle | ಫ್ಯಾಷನ್‌ ಪ್ರಿಯರನ್ನು ಸೆಳೆಯುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಡ್ರೆಡ್‌ಲಾಕ್‌ ನ್ಯೂ ಹೇರ್‌ಸ್ಟೈಲ್‌

Star Hairstyle

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೊಸ ಹೇರ್‌ಸ್ಟೈಲ್‌ ಬ್ರೈಡೆಡ್‌ ಡ್ರೆಡ್‌ಲಾಕ್‌, ಇದೀಗ ಫ್ಯಾಷನ್‌ ಪ್ರಿಯರ ಗಮನ ಸೆಳೆಯಲಾರಂಭಿಸಿದೆ. ಮೂಲತಃ ಹೈದ್ರಾಬಾದ್‌ನ ಹೇರ್‌ಸ್ಟೈಲಿಸ್ಟ್‌ ಅಲೆಕ್ಸ್‌ ವಿಜಯ್‌ಕಾಂತ್‌, ಯಶ್‌ ಅವರಿಗೆ ಈ ಹೇರ್‌ಸ್ಟೈಲ್‌ ಮಾಡುವ ಮೂಲಕ ರಗಡ್‌ ಲುಕ್‌ ನೀಡಿದ್ದಾರೆ. ಇದು ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚಿತ್ರದಲ್ಲಿ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್‌ ಅಲೆಕ್ಸ್‌ ವಿಜಯ್‌ಕಾಂತ್‌ ಜೊತೆ ನಟ ಯಶ್‌.

ಹೇರ್‌ಸ್ಟೈಲಿಸ್ಟ್‌ ಅಲೆಕ್ಸ್ ವಿಜಯ್‌ ಚಮತ್ಕಾರ

ಇಂಡಿಯಾ ಟುಡೇ ಕಾರ್ಯಕ್ರಮ ಸೇರಿದಂತೆ ಹೈದ್ರಾಬಾದ್‌ನಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಶ್‌ ತೆರಳಿದ್ದಾಗ ಈ ಹೊಸ ಹೇರ್‌ಸ್ಟೈಲ್‌ಗೆ ಸೈ ಎಂದಿದ್ದಾರೆ. ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್‌ ಅಲೆಕ್ಸ್‌ ವಿಜಯ್‌ ಅವರ ಅಲೆಕ್ಸಾಂಡರ್‌ ಸಲೂನ್‌ಗೆ ತೆರಳಿ ತಮ್ಮ ಹಳೆಯ ಲುಕ್‌ಗೆ ತಾತ್ಕಲಿಕವಾಗಿ ನ್ಯೂ ಟಚ್‌ ನೀಡಿದ್ದಾರೆ. ಅಲೆಕ್ಸ್‌ ವಿಜಯಕಾಂತ್‌ ಈ ಕುರಿತ ವಿಡಿಯೋ ಕೂಡ ಶೇರ್‌ ಮಾಡಿದ್ದು, ಕೆಜಿಎಫ್‌ ನಟ ಯಶ್‌, ಈ ಹೇರ್‌ಸ್ಟೈಲ್‌ ಮಾಡಿಸಿಕೊಂಡಿರುವುದು ತಮಗೆ ಸಂತೋಷ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಈ ಡ್ರೆಡ್‌ಲಾಕ್‌ ಹೇರ್‌ಸ್ಟೈಲ್‌ ಯಶ್‌ಗೆ ಸಖತ್‌ ಆಗಿ ಸೂಟ್‌ ಆಗುತ್ತಿದೆ ಎಂದಿದ್ದಾರೆ.

ಇನ್ನು ಯಶ್‌, ವಿನ್ಯಾಸಗೊಂಡ ಡ್ರೆಡ್‌ಲಾಕ್‌ಹೇರ್‌ಗೆ ಹಾಫ್‌ ಪೋನಿಟೇಲ್‌ ಹಾಕುವ ಮೂಲಕ ತಮ್ಮದೇ ಆದ ಹೇರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಸೆಟ್‌ ಮಾಡಿದ್ದಾರೆ. ಇನ್ನುಳಿದ ಹಾಫ್‌ ಕೂದಲನ್ನು ಹಾಗೆಯೇ ಬಿಟ್ಟಿದ್ದಾರೆ.

ನಟ ಯಶ್‌ ಡ್ರೆಡ್ಲಾಕ್‌ ಹೇರ್‌ಸ್ಟೈಲ್‌ನ ಝಲಕ್‌ಗಳು

ರಗಡ್‌ ಲುಕ್‌ಗೆ ಬ್ರೈಡೆಡ್‌ ಡ್ರೆಡ್‌ಲಾಕ್‌ ಸಾಥ್‌

ಅಂದಹಾಗೆ, ಡ್ರೆಡ್‌ಲಾಕ್‌ ಹೇರ್‌ಸ್ಟೈಲ್‌ ಕಾಮನ್‌ ಹೇರ್‌ಸ್ಟೈಲ್‌ ಅಲ್ಲವೇ ಅಲ್ಲ! ಇದು ಎಲ್ಲರಿಗೂ ಸೂಟ್‌ ಆಗುವುದಿಲ್ಲ ಕೂಡ. ಡ್ರೆಡ್‌ಲಾಕ್‌ ಹೇರ್‌ಸ್ಟೈಲ್‌ ಮಾಡಲು ಕನಿಷ್ಠ ಶೋಲ್ಡರ್‌ ತನಕ ಕೂದಲು ಉದ್ದವಿರಬೇಕು. ಅಲ್ಲದೇ, ಇದನ್ನು ಸರಿಯಾಗಿ ಮೆಂಟೇನ್‌ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪರ್ಸನಾಲಿಟಿ ಪರ್ಫೆಕ್ಟ್‌ ಆಗಿರುವವರಿಗೆ ಮಾತ್ರ ಇದು ಸೂಟ್‌ ಆಗುತ್ತದೆ ಎನ್ನುತ್ತಾರೆ ಸೆಲೆಬ್ರಿಟಿ ಹೇರ್‌ ಸ್ಪೆಷಲಿಸ್ಟ್‌ ಬಾಬೂ.

ಏನಿದು ಬ್ರೈಡೆಡ್‌ ಡ್ರೆಡ್‌ಲಾಕ್‌ ಹೇರ್‌ಸ್ಟೈಲ್‌

ಡ್ರೆಡ್‌ಲಾಕನ್ನು ಲಾಕ್‌ ಅಥವಾ ಡ್ರೆಡ್‌ ಹೀಗೂ ಕರೆಯುತ್ತಾರೆ. ವಿದೇಶದಲ್ಲಿ ಖ್ಯಾತಿ ಪಡೆದಿರುವ ಈ ಹೇರ್‌ಸ್ಟೈಲ್‌ ಇದೀಗನಮ್ಮಲ್ಲೂ ಸಿನಿಮಾಗಳಲ್ಲಿ ಹಾಗೂ Ramp ಶೋಗಳಲ್ಲಿ ಕಾಣಬಹುದು. ಇದೊಂದು ತಾತ್ಕಾಲಿಕ ಹೇರ್‌ಸ್ಟೈಲ್‌. ಉದ್ದ ಕೂದಲಿನವರಿಗೆ ಮಾತ್ರ ಈ ಹೇರ್‌ಸ್ಟೈಲ್‌ ಮಾಡಲು ಸಾಧ್ಯ. ಇನ್ನು ಡ್ರೆಡ್‌ಲಾಕ್‌ನಲ್ಲಿ ಕ್ಲಾಸಿಕ್‌, ಲೋ ಪೋನಿಟೇಲ್‌, ಟ್ವಿಸ್ಟ್‌ , ಕರ್ಲಿ, ಲಾಂಗ್‌, ಕ್ರಿಸ್‌ಕ್ರಾಸ್‌ ಸೇರಿದಂತೆ ನಾನಾ ವಿಧಗಳಿವೆ. ಇದೀಗ ನಟ ಯಶ್‌ ಅವರದ್ದು ಬ್ರೈಡೆಡ್‌ ಸಿಂಪಲ್‌ ಡ್ರೆಡ್‌ಲಾಕ್‌ ಹೇರ್‌ಸ್ಟೈಲ್‌.

ಈ ಹೇರ್‌ಸ್ಟೈಲ್‌ ಯಾವಾಗ ಬೇಕಾದರೂ ತೆಗೆಯಬಹುದು. ಕೂದಲಿಗೆ ಹಾನಿಯಾಗುವುದಿಲ್ಲ. ತಲೆಗೂದಲಿನ ಮುಂಭಾಗ ಚಿಕ್ಕ ಚಿಕ್ಕ ಜಡೆ ಹೆಣೆದಂತೆ ಹೆಣೆದು ಬೀಡ್ಸ್‌ನಿಂದ ಲಾಕ್‌ ಮಾಡಲಾಗಿರುತ್ತದೆ ಎಂದು ವಿವರಿಸುತ್ತಾರೆ ಬೆಂಗಳೂರಿನ ಹೇರ್‌ಸ್ಟೈಲಿಸ್ಟ್‌ ಜಾನಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion | ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಪುರುಷರ ಗ್ರ್ಯಾಂಡ್‌ ಡಿಸೈನರ್‌ವೇರ್ಸ್‌

Exit mobile version