Site icon Vistara News

Star Lehenga : ಹಂಗಾಮಾ ಎಬ್ಬಿಸಿದ ಹಾಲಿವುಡ್ ನಟಿ ಜೆನ್ನಿಫರ್‌ ಅನಿಸ್ಟನ್‌ ಲೆಹೆಂಗಾ!

star fashion

star fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಅಂತರ್ಜಾಲದಲ್ಲಿ ಎಲ್ಲಿ ನೋಡಿದರೂ ಹಾಲಿವುಡ್‌ ನಟಿ ಜೆನ್ನಿಫರ್‌ ದೇಸಿ ಲೆಹೆಂಗಾದ್ದೇ ಸುದ್ದಿ (Jennifer Aniston Lehenga). ಹೌದು, ಆ ಮಟ್ಟಿಗೆ ಆಕೆ ಧರಿಸಿದ ಲೆಹೆಂಗಾ ನೆಟ್ಟಿಗರನ್ನು ಸೆಳೆದಿದ್ದು, ಹಂಗಾಮಾ ಎಬ್ಬಿಸಿದೆ.

ಅಂದಹಾಗೆ, ಜೆನ್ನಿಫರ್‌ ಅನಿಸ್ಟನ್‌ (Jennifer Aniston) ಯಾರಿಗೆ ಗೊತ್ತಿಲ್ಲ! ವಯಸ್ಸು ಐವತ್ತಾದರೂ ಇಂದಿಗೂ ಹಾಟ್‌ ನಟಿ ಎಂದೇ ಗುರುತಿಸಿಕೊಳ್ಳುವ ಹಾಲಿವುಡ್‌ ನಟಿ. ಇದೀಗ ಇವರ ಹೊಸ ಹಾಲಿವುಡ್‌ ಕಾಮಿಡಿ ಥ್ರಿಲ್ಲರ್‌ ಮರ್ಡರ್‌ ಮಿಸ್ಟರಿ ೨ರ ಟ್ರೈಲರ್‌ ಬಿಡುಗಡೆಗೊಂಡಿದೆ. ಈ ಟ್ರೈಲರ್‌ನಲ್ಲಿ ನಟಿ ಜೆನ್ನಿಫರ್‌ ಹಾಗೂ ನಾಯಕ ನಟ ಆಡಮ್‌ ಸ್ಯಾಂಡ್ಲರ್‌ ಧರಿಸಿರುವ ಇಂಡಿಯನ್‌ ಅಟೈರ್‌ಗಳು ಎಲ್ಲರ ಕಣ್ಮನ ಸೆಳೆದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರಿಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಅವರ ಕೈಚಳಕದಲ್ಲಿ ಸಿದ್ಧಗೊಂಡ ನಟಿ ಜೆನ್ನಿಫರ್‌ ಧರಿಸಿದ ಐವರಿ ಲೆಹೆಂಗಾ (Jennifer Aniston Lehenga) ಆಕೆಯ ಕೋಟಿಗಟ್ಟಲೇ ಅಭಿಮಾನಿಗಳನ್ನು ಸೆಳೆದಿದೆ.

star fashion

ಟ್ರೈಲರ್‌ನಲ್ಲಿ ಲೆಹೆಂಗಾ ಕಮಾಲ್‌

ಮಾರ್ಚ್ ೩೧ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಜೆನ್ನಿಫರ್‌ ಅನಿಸ್ಟನ್‌ ನಟಿಸಿದ ಈ ಮರ್ಡರ್‌ ಮಿಸ್ಟರಿ ೨ರಲ್ಲಿ ನಾಯಕ-ನಾಯಕಿ ಇಬ್ಬರು ಡಿಟೆಕ್ಟಿವ್‌ ಪಾತ್ರದಲ್ಲಿ ಅಭಿನಯಿಸಿದ್ದು, ಭಾರತೀಯ ಮೂಲದ ಯುವರಾಜನೊಬ್ಬನ ಮದುವೆಗೆಂದು ಒಂದು ದ್ವೀಪಕ್ಕೆ ಬಂದಿಳಿಯುತ್ತಾರೆ. ಈ ಸನ್ನಿವೇಶದಲ್ಲಿ ಭಾಗವಹಿಸಿರುವವರೆಲ್ಲರೂ ಕೂಡ ಭಾರತೀಯ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡಿರುತ್ತಾರೆ. ಇವರೆಲ್ಲರ ಮಧ್ಯೆ ನಾಯಕಿ ಜೆನ್ನಿಫರ್‌ ಬ್ಯೂಟಿಫುಲ್‌ ದೇಸಿ ಲೆಹೆಂಗಾದಲ್ಲಿ (Jennifer Aniston Lehenga) ನಾಯಕ ಆಡಮ್‌ ಸ್ಯಾಂಡ್ಲರ್‌ ಇಂಡಿಯನ್‌ ಮೆನ್ಸ್‌ ಅಟೈರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿಂದ ಇಡೀ ಸಿನಿಮಾ ಟ್ವಿಸ್ಟ್‌ ತೆಗೆದುಕೊಳ್ಳುತ್ತದೆ. ಹಾಗಾಗಿ ಈ ಟ್ರೈಲರ್‌ನಲ್ಲಿ ನಮ್ಮ ದೇಸಿ ಲೆಹೆಂಗಾ ಹೈಲೈಟ್‌ ಆಗಿದೆ. ಸದಾ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ ಜೆನ್ನಿಫರ್‌ಗೆ ಲೆಹೆಂಗಾ ನಯಾ ಲುಕ್‌ ನೀಡಿದೆ. ಸದ್ಯಕ್ಕೆ ಅಂತರ್ಜಾಲದಲ್ಲಿ ಫ್ಯಾಷನ್‌ ಪ್ರಿಯರನ್ನು ಮಾತ್ರವಲ್ಲ, ಆಕೆಯ ಅಭಿಮಾನಿಗಳನ್ನು ಸೆಳೆದಿದೆ. ಕುತೂಹಲ ಹುಟ್ಟು ಹಾಕಿದೆ.

star fashion

ಮನೀಶ್‌ ಮಲ್ಹೋತ್ರಾ ಡಿಸೈನ್‌ ಮಾಡಿದ ಲೆಹೆಂಗಾ

ಕೇವಲ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಹಾಲಿವುಡ್‌ನಲ್ಲೂ ಮನೀಶ್‌ ಮಲ್ಹೋತ್ರಾ ವಿನ್ಯಾಸದ ಇಂಡಿಯನ್‌ ಅಟೈರ್‌ಗಳು ಸಾಕಷ್ಟು ಬಾರಿ ಕಾಣಿಸಿಕೊಂಡಿವೆ. ಈ ಸಿನಿಮಾದಲ್ಲಿ ಜೆನ್ನಿಫರ್‌ ಧರಿಸಿದ ಲೆಹೆಂಗಾ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಐವರಿ ಶೇಡ್‌ನ ಲೆಹೆಂಗಾ, ಗೋಲ್ಡನ್‌ ಎಂಬಾಲಿಶ್‌ಮೆಂಟ್‌ ಜತೆಗೆ ಬೀಡ್ಸ್ ಟ್ಯಾಸೆಲ್‌ ಒಳಗೊಂಡಿದೆ. ರೌಂಡ್‌ ನೆಕ್‌ನ ಕ್ರಾಪ್‌ ಟಾಪ್‌ ಶೈಲಿಯ ಬ್ಲೌಸನ್ನು ಸಿಂಗರಿಸಿದೆ. ಇನ್ನು ಇದಕ್ಕೆ ಮ್ಯಾಚ್‌ ಆಗುವಂತಿರುವ ಚಾಂದ್‌ಬಾಲಿ ಬಿಗ್‌ ಇಯರಿಂಗ್ಸ್‌ ಹಾಗೂ ಬನ್‌ ಹೇರ್‌ಸ್ಟೈಲ್‌, ಕೈಗಳಿಗೆ ಧರಿಸಿರುವ ಫಿಂಗರ್‌ ರಿಂಗ್‌ ಹ್ಯಾಂಡ್‌ ಚೈನ್‌ ಜ್ಯುವೆಲ್‌ ನಟಿ ಜೆನಿಫರ್‌ಗೆ ಇಂಡಿಯನ್‌ ರಾಯಲ್‌ ಲುಕ್‌ ನೀಡಿದೆ.

ಇಡೀ ಸಿನಿಮಾದ ಹೈಲೈಟ್‌ ಆಗಿರುವ ಇಂಡಿಯನ್‌ ಅಟೈರ್‌ ಧರಿಸಿರುವ ಈ ಟ್ರೈಲರ್‌ ಸದ್ಯಕ್ಕೆ ಇಂಡಿಯನ್‌ ಲೆಹೆಂಗಾವನ್ನು (Jennifer Aniston Lehenga) ಜಗತ್ತಿನಾದ್ಯಂತ ಟ್ರೆಂಡಿಯಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನು ಓದಿ: Fashion News : ಮನಗೆದ್ದ ಸ್ಮೃತಿ ಸಾಧನಾ ವರ್ಷದ ಮೊದಲ ಫ್ಯಾಷನ್‌ ಶೋ

FAQʼs

1. ಜೆನ್ನಿಫರ್ ಅನಿಸ್ಟನ್ ಏಕೆ ಜನಪ್ರಿಯರಾಗಿದ್ದಾರೆ?

Ans: ಜೆನ್ನಿಫರ್ ಅನಿಸ್ಟನ್ ಟಿವಿ ಶೋ ಫ್ರೆಂಡ್ಸ್ನಲ್ಲಿ ರಾಚೆಲ್ ಗ್ರೀನ್ ಪಾತ್ರಕ್ಕಾಗಿ ಜನಪ್ರಿಯರಾಗಿದ್ದಾರೆ, ಇದು ಅವರಿಗೆ ವಿಶ್ವಾದ್ಯಂತ ಮನ್ನಣೆಯನ್ನು ತಂದುಕೊಟ್ಟಿತು ಮತ್ತು ಪ್ರೈಮ್ಟೈಮ್ ಎಮ್ಮಿ, ಗೋಲ್ಡನ್ ಗ್ಲೋಬ್ ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ನಂತಹ ಪ್ರಶಸ್ತಿಗಳನ್ನು ತಂದಿತು.

2. ಜೆನ್ನಿಫರ್ ಅನಿಸ್ಟನ್ ರಾತ್ರಿಯಲ್ಲಿ ಏನು ಮಾಡುತ್ತಾರೆ?

Ans: ಇತ್ತೀಚಿನ ಸಂದರ್ಶನವೊಂದರ ಪ್ರಕಾರ, ಅನಿಸ್ಟನ್ ಕೇವಲ ಐದು ನಿಮಿಷಗಳ ಕಾಲ ಮಲಗುವ ಮುನ್ನ ಧ್ಯಾನ ಮತ್ತು ಪ್ರಾರ್ಥನೆಗೆ ಸಮಯವನ್ನು ನೀಡುತ್ತಾನೆ.

3. Friends ಧಾರಾವಾಹಿ ಸಮಯದಲ್ಲಿ ಜೆನ್ನಿಫರ್ ಅನಿಸ್ಟನ್ ಅವರ ಆಹಾರಕ್ರಮ ಹೇಗಿತ್ತು?

Ans: friends ಧಾರಾವಾಹಿ ಸಮಯದಲ್ಲಿ, ಜೆನ್ನಿಫರ್ ಅನಿಸ್ಟನ್ ಅವರ ಆಹಾರವು ಬುಲ್ಗರ್ ಗೋಧಿ ಅಥವಾ ಕ್ವಿನೋವಾ, ಗಜ್ಜರಿ, ಸೌತೆಕಾಯಿಗಳು, ಕೆಂಪು ಈರುಳ್ಳಿ, ತಾಜಾ ಗಿಡಮೂಲಿಕೆಗಳು, ಫೆಟಾ ಚೀಸ್ ಮತ್ತು ಪಿಸ್ತಾಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ, ಅವರು ಚಿತ್ರೀಕರಣದ ಸಮಯದಲ್ಲಿ ಹತ್ತು ವರ್ಷಗಳ ಕಾಲ ಪ್ರತಿದಿನ ತಿನ್ನುತ್ತಿದ್ದರು.

Exit mobile version