Site icon Vistara News

Star Pregnancy Fashion: ಸಮ್ಮರ್‌ ಸೀಸನ್‌ನ ಕ್ಯೂಟ್‌ ಪ್ರೆಗ್ನೆನ್ಸಿ ಔಟ್‌ಫಿಟ್ಸ್‌ ಟ್ರೆಂಡಿಯಾಗಿಸಿದ ನಟಿ ಇಶಿತಾ ದತ್ತಾ

Star Pregnancy Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಇಶಿತಾ ದತ್ತಾ ಧರಿಸಿರುವ ಸಮ್ಮರ್ ಸೀಸನ್‌ನ ಕ್ಯೂಟ್‌ಪ್ರೆಗ್ನೆನ್ಸಿ ಫ್ಯಾಷನ್‌ (Star Pregnancy Fashion) ಔಟ್‌ಫಿಟ್‌ಗಳು ಇದೀಗ ಟ್ರೆಂಡಿಯಾಗಿವೆ. ಹೌದು. ಹಿಂದಿ ದೃಶ್ಯಂ ಚಿತ್ರದ ಮೂಲಕ ಗಮನ ಸೆಳೆದ ಇಶಿತಾ, ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಧರಿಸುತ್ತಿರುವ ಔಟ್‌ಫಿಟ್‌ಗಳು, ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದು, ಪ್ರೆಗ್ನೆಂಟ್‌ ವುಮೆನ್‌ಗಳ ವಾರ್ಡ್ರೋಬ್‌ ಸೇರುತ್ತಿವೆ. ಪರಿಣಾಮ, ಇದೀಗ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ನೋಡಲು ಮುದ್ದು ಮುದ್ದಾಗಿ ಕಾಣಿಸುವಂತಹ ಈ ವಿನ್ಯಾಸದ ಔಟ್‌ಫಿಟ್‌ಗಳು ಹೆಚ್ಚು ಡಿಮ್ಯಾಂಡ್‌ ಸೃಷ್ಟಿಸಿಕೊಂಡಿವೆ.

ಬದಲಾದ ಪ್ರೆಗ್ನೆನ್ಸಿ ಔಟ್‌ಫಿಟ್ಸ್‌ ಕಾನ್ಸೆಪ್ಟ್‌

ಪ್ರೆಗ್ನೆನ್ಸಿ ಎಂದಾಕ್ಷಾಣ ನೋಡಲು ಹಿರಿಯರಂತೆ ಬಿಂಬಿಸುವ ಔಟ್‌ಫಿಟ್‌ಗಳು, ದೊಗಲೆ ಉಡುಪುಗಳು ಎಂಬ ಕಾನ್ಸೆಪ್ಟ್ ಇದುವರೆಗೂ ಇತ್ತು. ಇದೀಗ ಈ ಹಳೆಯ ಕಾನ್ಸೆಪ್ಟ್‌ಗೆ ಇತಿ ಶ್ರೀ ಬಿದ್ದಿದೆ. ಸೀಸನ್‌ಗೆ ಹೊಂದುವಂತಹ ಪ್ರೆಗ್ನೆನ್ಸಿ ಔಟ್‌ಫಿಟ್‌ಗಳು ಫ್ಯಾಷನ್‌ ಲೋಕದ ಡಿಸೈನರ್‌ಗಳ ಕೈಗಳಲ್ಲಿ ವಿನ್ಯಾಸಗೊಂಡು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಹೀಗೆ ನಾನಾ ದೃಷ್ಟಿಕೋನ ಇರಿಸಿಕೊಂಡು ಬಿಡುಗಡೆಯಾಗಿರುವ ಔಟ್‌ಫಿಟ್‌ಗಳು ಇಂದಿನ ಜನರೇಷನ್‌ನ ಪ್ರೆಗ್ನೆಂಟ್‌ ವುಮೆನ್‌ಗಳನ್ನು ಸೆಳೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಯಾವ್ಯಾವ ಔಟ್‌ಫಿಟ್ಸ್‌ಗೆ ಬೇಡಿಕೆ ಹೆಚ್ಚು

ನೋಡಲು ಮುದ್ದು ಮುದ್ದಾಗಿ ಕಾಣಿಸುವಂತಹ ಕಲರ್‌ಫುಲ್‌ ಹಾಗೂ ಸಾಫ್ಟ್‌ ಫ್ಯಾಬ್ರಿಕ್‌ನ ಸಮ್ಮರ್‌ ಸೀಸನ್‌ಗೆ ಮ್ಯಾಚ್‌ ಆಗುವಂತಹ ಸೆಕೆಯಾಗದ ಮೆಶ್‌ ಡಿಸೈನ್‌ನವು, ಶೀರ್‌ ಕಫ್ತಾನ್ಸ್, ಮ್ಯಾಕ್ಸಿ, ಸ್ಟ್ರೆಚಬಲ್‌ ಫ್ರಾಕ್ಸ್‌, ಸಿಂಪಲ್‌ ಸ್ಲಿವ್‌ಲೆಸ್‌ , ಸ್ಟ್ರಾಪ್‌ ಕುರ್ತಾ, ಕೇಪ್ರೀಸ್‌, ಲೆಯರ್‌ ಲುಕ್‌ ಇಲ್ಲದ ಉಡುಪುಗಳು ಇದೀಗ ಟ್ರೆಂಡಿಯಾಗಿವೆ. ಇನ್ನು ಕಾಟನ್‌ನ ಫ್ರಾಕ್ಸ್‌, ಸ್ಟ್ರಾಪ್‌ ಕುರ್ತಾಗಳು ಹಾಗೂ ದೊಗಲೆ ಸ್ಟ್ರೇಟ್‌ ಪ್ಯಾಂಟ್ಸ್‌, ಹಾಫ್‌ ಪ್ಯಾಂಟ್ಸ್‌, ಪಲ್ಹಾಜ್ಹೋ ಸೆಟ್ಸ್‌ ಚಾಲ್ತಿಯಲ್ಲಿವೆ. ಇನ್ನು ಕ್ಯಾಶುವಲ್‌ನಲ್ಲಿ ಟ್ಯಾಂಕ್‌ ಟಾಪ್ಸ್‌, ಹಾಲ್ಟರ್‌ ನೆಕ್‌ ಲಾಂಗ್‌ ಟಾಪ್‌ಗಳು, ಕಟೌಟ್‌ ಟಾಪ್‌, ಶೀರ್‌ ವಿಂಗ್‌, ಫೆದರ್‌, ಬಲೂನ್‌ ಸ್ಲೀವ್ಸ್‌ ಟಾಪ್‌ ಪ್ರಚಲಿತದಲ್ಲಿವೆ. ಎಥ್ನಿಕ್‌ ಶೈಲಿಯಲ್ಲಿ ಇದೀಗ ಕಾಟನ್‌ ಹಾಗೂ ಗಾಳಿಯಾಡುವಂತಹ ಫ್ಯಾಬ್ರಿಕ್‌ನ ಕುರ್ತಾಗಳು ಹಾಗೂ ಕಫ್ತಾನ್‌ಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಸಮ್ಮರ್‌ ಪ್ರೆಗ್ನೆಂಟ್‌ ಔಟ್‌ಫಿಟ್ಸ್ ಆಯ್ಕೆ ಹೀಗಿರಲಿ

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Fashionable Mothers : ಸ್ಯಾಂಡಲ್‌ವುಡ್‌ನ 5 ಸ್ಟೈಲಿಶ್‌ ಅಮ್ಮಂದಿರಿವರು

Exit mobile version