ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ವೇತ ವರ್ಣದ ಸೀರೆಯಲ್ಲಿ (Star Saree Fashion) ನಟಿ ಮೋಕ್ಷಿತಾ ಪೈ ಮಲಯಾಳಿ ಕುಟ್ಟಿಯಂತೆ ಕಾಣಿಸಿಕೊಂಡಿದ್ದಾರೆ. ಕಂಪ್ಲೀಟ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರ ಈ ಲುಕ್ ಅಭಿಮಾನಿಗಳನ್ನು ಸೆಳೆದಿದೆ. ಪಕ್ಕಾ ಟಿಪಿಕಲ್ ಹುಡುಗಿಯಂತೆ ಸಿಂಗರಿಸಿಕೊಂಡಿರುವ ಇವರ ಸೀರೆ ಲವ್ ಕಂಡು ಅಭಿಮಾನಿಗಳು ಪ್ರಶಂಸೆಯ ಸುರಿಮಳೆಯನ್ನೇಗೈದಿದ್ದಾರೆ.
ಫ್ಯಾಷನ್ ವಿಮರ್ಶಕರ ಮೆಚ್ಚುಗೆ
ಅಂದಹಾಗೆ, ಪಾರು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೋಕ್ಷಿತಾಗೆ ಮೊದಲಿನಿಂದಲೂ ಸೀರೆ ಎಂದರೇ ಸಖತ್ ಪ್ರೀತಿ. ಅದರಲ್ಲೂ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದೆಂದರೇ ಎಲ್ಲಿಲ್ಲದ ಖುಷಿಯ ವಿಚಾರ. ಸದಾ ಒಂದಲ್ಲ ಒಂದು ಟ್ರೆಡಿಷನಲ್ ಉಡುಪುಗಳಲ್ಲಿ ಕಾಣಿಸಿಕೊಳ್ಳುವ ಇವರು, ಸೀರೆಗಳಲ್ಲೂ ಆಗಾಗ್ಗೆ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆಲ್ಲುತ್ತಿರುತ್ತಾರೆ. ಇನ್ನು ಪಕ್ಕಾ ಸಂಪ್ರಾದಾಯಿಕ ಹುಡುಗಿಯಂತೆ ಎಲ್ಲರನ್ನು ಸೆಳೆಯುತ್ತಿರುತ್ತಾರೆ. ಅವರು ಮಾಡುವ ಪಾತ್ರಕ್ಕೂ ಅವರ ಈ ಸೀರೆ ಲುಕ್‌ಗೂ ಎರಡಕ್ಕೂ ಸಾಮ್ಯತೆ ಇದೆ. ಸೀರೆ ಅವರಿಗೆ ಹೇಳಿ ಮಾಡಿಸಿದಂತೆ ಕಾಣುತ್ತದೆ. ನೋಡಲು ಮಲಯಾಳಿ ಹುಡುಗಿಯಂತೆ ಕಾಣುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಮೋಕ್ಷಿತಾಗೆ ಸೀರೆ ಬಹಳ ಚೆನ್ನಾಗಿ ಒಪ್ಪುತ್ತದೆ. ಫುಲ್ ಮಾಕ್ರ್ಸ್ ನೀಡಬಹುದು ಎನ್ನುತ್ತಾರೆ.
ಮೋಕ್ಷಿತಾ ಸೀರೆ ಲವ್
ಸೀರೆ ಎಂದರೇ ನನಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಟ್ರೆಡಿಷನಲ್ ಲುಕ್ ನೀಡುವ ಸೀರೆಗಳಂತೂ ಸಖತ್ ಇಷ್ಟ. ಫೆಸ್ಟಿವ್ ಸೀಸನ್ ಮಾತ್ರವಲ್ಲ, ಇತರೆ ಸಮಯದಲ್ಲೂ ಸೀರೆ ಉಡುವುದೆಂದರೇ ಇಷ್ಟಪಡುತ್ತೇನೆ. ಇದು ನನ್ನ ಅಭಿಮಾನಿಗಳಿಗೂ ಪ್ರಿಯವಾಗುತ್ತದೆ ಎನ್ನುವ ನಟಿ ಮೋಕ್ಷಿತಾ ಪೈ ವಿಸ್ತಾರದೊಂದಿಗೆ ತಮ್ಮ ಸೀರೆ ಲವ್ ಬಗ್ಗೆ ಪ್ರೀತಿ ವ್ಯಕ್ತಪಡಿಸಿದರು.
ಶ್ವೇತ ವರ್ಣದ ಸೀರೆಯಲ್ಲಿ ಟ್ರೆಡಿಷನಲ್ ಲುಕ್
ಶ್ವೇತ ವರ್ಣದ ಗೋಲ್ಡನ್ ಪ್ರಿಂಟ್ಸ್ ಇರುವ ಸೀರೆಯಲ್ಲಿ ಮೋಕ್ಷಿತಾ ಅವರ ಟ್ರೆಡಿಷನಲ್ ಲುಕ್‌ಗೆ ಮುತ್ತಿನ ಜುಮಕಿ ಸಾಥ್ ನೀಡಿದೆ. ಆಂಟಿಕ್ ನೆಕ್ಲೇಸ್ ಮತ್ತಷ್ಟು ಆಕರ್ಷಕವಾಗಿಸಿದೆ. ಇನ್ನು ಹಣೆಗೆ ಇಟ್ಟ ಬಿಂದಿ ಕೇರಳ ಕುಟ್ಟಿಯನ್ನು ನೆನಪಿಸುವಂತಿದೆ. ಕರ್ಲಿ ಹೇರ್‌ಸ್ಟೈಲ್ ನೋಡಲು ಸುಂದರವಾಗಿಸಿದೆ ಎಂದು ವಿಮರ್ಶಿಸಿರುವ ಫ್ಯಾಷನ್ ವಿಮರ್ಶಕರು ಮೋಕ್ಷಿತಾರ ಈ ಲುಕ್‌ಗೆ ಫುಲ್ ಮಾಕ್ರ್ಸ್ ನೀಡಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Chessboard Pants Fashion: ಕಾಲೇಜು ಹುಡುಗಿಯರ ಬಿಂದಾಸ್ ಫ್ಯಾಷನ್‌ಗೆ ಸೇರಿದ ರೆಟ್ರೊ ಚೆಸ್ ಬೋರ್ಡ್ ಪ್ಯಾಂಟ್