Site icon Vistara News

Star Saree Fashion: ಸಮ್ಮರ್‌ ಸೀಸನ್‌ನ ಟ್ರೆಂಡಿ ಯೆಲ್ಲೋ ಸೀರೆಯಲ್ಲಿ ನಟಿ ಮೋಕ್ಷಿತಾ ಪೈ

Star Saree Fashion

ಶೀಲಾ ಸಿ, ಶೆಟ್ಟಿ, ಬೆಂಗಳೂರು

ಕಿರುತೆರೆಯ ಪ್ರಸಿದ್ಧ ನಟಿ ಮೋಕ್ಷಿತಾ ಪೈ, ಬೇಸಿಗೆ ಸನ್‌ ಕಲರ್‌ ಎಂದೇ ಟ್ರೆಂಡಿಯಾಗಿರುವ ಯೆಲ್ಲೋ ಶೇಡ್‌ನ ಸೀರೆಯಲ್ಲಿ ಕಾಣಿಸಿಕೊಂಡು, ಸಮ್ಮರ್‌ ಎಥ್ನಿಕ್‌ ಸೀರೆ ಫ್ಯಾಷನ್‌ಗೆ (Star Saree Fashion) ಸೈ ಎಂದಿದ್ದಾರೆ. ಸದಾ ಒಂದಲ್ಲ ಒಂದು ಫ್ಯಾಷೆನಬಲ್‌ ಔಟ್‌ಫಿಟ್‌, ಸೀರೆ ಹಾಗೂ ಎಥ್ನಿಕ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ ಮೋಕ್ಷಿತಾ, ಫ್ಯಾಷನ್‌ ಲವರ್‌ ಎಂದೇ ಹೇಳಬಹುದು. ಆಗಾಗ್ಗೆ ಟ್ರಾವೆಲ್‌ ಫ್ಯಾಷನ್‌ನಲ್ಲೂ ಎಂಜಾಯ್‌ ಮಾಡುತ್ತಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿರುವ ಈ ನಟಿಗೆ ಎಥ್ನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಸಖತ್‌ ಇಷ್ಟವಂತೆ. ಹಾಗೆಂದು ಅವರೇ ಬಹಳಷ್ಟು ಬಾರಿ ಹೇಳಿಕೊಂಡಿದ್ದಾರೆ. ಇನ್ನು ಕ್ಯಾಶುವಲ್‌ ಫ್ಯಾಷನ್‌ಗೂ ಸೈ, ಎಥ್ನಿಕ್‌ ಫ್ಯಾಷನ್‌ಗೂ ಸೈ ಎನ್ನುವ ಮೋಕ್ಷಿತಾರ ಈ ಸನ್‌ ಕಲರ್‌ನ ಸೀರೆ ಮೋಹಕ್ಕೆ ಫ್ಯಾಷನ್‌ ಸ್ಟೈಲಿಸ್ಟ್‌ಗಳು ಫುಲ್‌ ಮಾಕ್ರ್ಸ್ ನೀಡಿದ್ದಾರೆ. ಇನ್ನು ಫ್ಯಾಷನ್‌ ವಿಮರ್ಶಕರು ಎಥ್ನಿಕ್‌ ಲುಕ್‌ನ ಟ್ರೆಂಡಿ ಕಲರ್‌ ಎಂದು ಹೇಳಿದ್ದಾರೆ.

ಸಮ್ಮರ್‌ಗೆ ಸನ್‌ ಕಲರ್‌ ಸೀರೆಗಳು ಟ್ರೆಂಡ್‌

ಫ್ಯಾಷನ್‌ ವಿಮರ್ಶಕರು ಹೇಳುವಂತೆ, ಸಮ್ಮರ್‌ನಲ್ಲಿ ಎಥ್ನಿಕ್‌ ಶೇಡ್‌ಗಳಲ್ಲಿ ಸಾಕಷ್ಟು ಬಣ್ಣಗಳು ಟ್ರೆಂಡಿಯಾಗುತ್ತವೆ. ಅದರಲ್ಲೂ ರೇಷ್ಮೆ ಹಾಗೂ ಎಥ್ನಿಕ್‌ ಲುಕ್‌ ನೀಡುವ ಸೀರೆಗಳು ಬ್ರೈಟ್‌ ಇರುವಂತವು ಎಲ್ಲರ ಮನ ಸೆಳೆಯುತ್ತವೆ. ಅವುಗಳಲ್ಲಿ ಸನ್‌ ಕಲರ್‌ ಶೇಡ್‌ಗಳಲ್ಲಿ ಒಂದಾದ ಯೆಲ್ಲೋ ಅಂದರೆ, ಹಳದಿ ಬಣ್ಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದು ಕೇವಲ ಲುಕ್ಸ್‌ ಬದಲಿಸುವುದಲ್ಲ! ಜೊತೆಗೆ ಮುಖದ ಅಂದವನ್ನು ಇಮ್ಮಡಿಗೊಳಿಸುತ್ತದೆ. ಜೊತೆಗೆ ಫ್ರೆಶ್‌ ಲುಕ್‌ ನೀಡುತ್ತದೆ. ಗುಂಪಿನಲ್ಲೂ ಎಲ್ಲರ ಮಧ್ಯೆ ಇದ್ದರೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಈ ಸೀಸನ್‌ನಲ್ಲಿ ಯೆಲ್ಲೋ ಶೇಡ್‌ ಸೀರೆಗಳು ಮರುಕಳಿಸಿವೆ. ನಾನಾ ವಿನ್ಯಾಸದಲ್ಲಿ ಅದರಲ್ಲೂ ಸಾಫ್ಟ್‌ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಅವರು.

ಯೆಲ್ಲೋ ಶೇಡ್‌ ಆಯ್ಕೆಗೂ ಮುನ್ನ

ಇನ್ನು ಯೆಲ್ಲೋ ಶೇಡ್‌ನ ಪ್ರಿಯರು ಆದಷ್ಟೂ ಈ ಸೀರೆಗಳನ್ನು ಚೂಸ್‌ ಮಾಡುವಾಗ ಆದಷ್ಟೂ ಸಾಫ್ಟ್‌ ಫ್ಯಾಬ್ರಿಕ್‌ಗೆ ಪ್ರಾಮುಖ್ಯತೆ ನೀಡಬೇಕು. ಡಿಸೈನ್‌ ಕೂಡ ಹೆವ್ವಿ ಇರಕೂಡದು. ಆದಷ್ಟೂ ನೋಡಲು ಮನಮೋಹಕವಾಗಿರಬೇಕು. ಆಗಷ್ಟೇ ಈ ಕಲರ್‌ ಚೆನ್ನಾಗಿ ಕಾಣಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Resort Wear Fashion: ಸಮ್ಮರ್ ಹಾಲಿಡೇ ಫ್ಯಾಷನ್‌ನಲ್ಲಿ ಬಂತು ಕಲರ್‌ಫುಲ್‌ ರೆಸಾರ್ಟ್‌ವೇರ್‌

Exit mobile version