Site icon Vistara News

Star Saree Fashion : ಲೆನಿನ್‌ ಕಲಾಂಕಾರಿ ಮಿಕ್ಸ್‌ ಮ್ಯಾಚ್‌ ಸೀರೆಯಲ್ಲಿ ಮನಸೆಳೆದ ನಟಿ ಪಾವನಾ

Star Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟಿ ಪಾವನಾ ಅವರ ಸೀರೆ ಮೇಲಿನ ಪ್ರೇಮ (Star Saree Fashion) ಇದೀಗ ಸೀರೆ ಪ್ರಿಯರನ್ನು ಸೆಳೆಯತೊಡಗಿದೆ. ಆಗಾಗ್ಗೆ ನಾನಾ ಬಗೆಯ ಸೀರೆಗಳಲ್ಲಿ ಕಾಣಿಸಿಕೊಳ್ಳುವ ಪಾವನಾ ತಮ್ಮ ಸಾಕಷ್ಟು ಸಿನಿಮಾಗಳಲ್ಲೂ ಕೂಡ ನಾನಾ ಬಗೆಯ ಸೀರೆಗಳಲ್ಲೆ ಮಿಂಚಿದ್ದಾರೆ. ಇದೀಗ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಸ್ಟೈಲಿಂಗ್‌ನಲ್ಲಿ ರಿಕ್ರಿಯೇಟ್‌ ಮಾಡಿದ ಲೆನಿನ್‌ ಹಾಗೂ ಕಲಾಂಕಾರಿ ಫ್ಯಾಬ್ರಿಕ್‌ ಮಿಕ್ಸ್‌ ಮಾಡಿದ ಹಾಫ್‌ ಆಂಡ್‌ ಹಾಫ್‌ ಸೀರೆಯಲ್ಲಿ ಚಿದು ಅವರ ಫೋಟೋಗ್ರಾಫಿಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯ ಮಾನಿನಿಯರನ್ನು ಸೆಳೆದಿದೆ.

ಪಾವನಾ ಸೀರೆ ಮಾತು

ನಟಿ ಪಾವನಾಗೆ ಮೊದಲಿನಿಂದಲೂ ಸೀರೆಗಳೆಂದರೇ ಸಖತ್‌ ಇಷ್ಟವಂತೆ. ಯಾವುದೇ ಸಭೆ ಸಮಾರಂಭಗಳಲ್ಲೂ ಸೀರೆಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವ ಅವರಿಗೆ ಸೀರೆ ಎಂದರೇ ನಮ್ಮತನವನ್ನು ಅದರಲ್ಲೂ ನಮ್ಮ ಕಲ್ಚರ್‌ ಪ್ರತಿಬಿಂಬಿಸುವ ಧಿರಿಸಂತೆ. ಅಷ್ಟೇಕೆ! ತಾನು ನಟಿಸಿದ ಬಹುತೇಕ ಸಿನಿಮಾಗಳಲ್ಲೂ ಕೂಡ ಸೀರೆಗಳಲ್ಲೆ ಕಾಣಿಸಿಕೊಂಡಿದ್ದೇನೆ. ಅಭಿಮಾನಿಗಳು ಕೂಡ ನನ್ನನ್ನು ಸೀರೆಯಲ್ಲಿ ಇಷ್ಟಪಡುತ್ತಾರೆ. ನ್ಯಾಚುರಲ್‌ ಆಗಿ ಕಾಣಿಸುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಧನ್ಯವಾದ ತಿಳಿಸಿದ್ದಾರೆ.

ಸೀರೆ ನನಗಿಷ್ಟ ಎನ್ನುವ ಪಾವನಾ

“ಸೀರೆ ನನಗಿಷ್ಟ! ಅದರಲ್ಲೂ ನನ್ನ ಎವರ್‌ಗ್ರೀನ್‌ ಟ್ರೆಡಿಷನಲ್‌ ಫ್ಯಾಷನ್‌ನಲ್ಲಿ ಸ್ಥಾನ ಪಡೆದುಕೊಂಡಿದೆ” ಎನ್ನುವ ಪಾವನಾ ಸೋಷಿಯಲ್‌ ಮೀಡಿಯಾದಲ್ಲೂ ತಮ್ಮ ಸೀರೆಯ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ಗೆ ಸಖತ್‌ ಅಭಿಮಾನಿಗಳನ್ನು ಗಳಿಸಿದ್ದಾರೆ.

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ರಿಕ್ರಿಯೇಷನ್‌

ಇನ್ನು ಈ ಬಾರಿ ಪಾವನಾ ಧರಿಸಿರುವ ಮನಮೋಹಕ ಸೀರೆಯನ್ನು ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ, ರಿಕ್ರಿಯೇಟ್‌ ಮಾಡಿದ್ದು ಎರಡು ಬಗೆಯ ಫ್ಯಾಬ್ರಿಕ್‌ ಟಚ್‌ ನೀಡಿದ್ದಾರೆ. ಮಿಕ್ಸ್‌ ಮ್ಯಾಚ್‌ ಕಾನ್ಸೆಪ್ಟ್‌ನ ಈ ಸೀರೆ ಜೊತೆಗೆ ಪಾವನಾ ಧರಿಸಿರುವ ಬ್ಲಾಕ್‌ ಮೆಟಲ್‌ ಜುಮಕಿ, ಬಿಂದಿ ಇದಕ್ಕೊಂದುವಂತಹ ವೆವ್ವಿ ಫ್ರೀ ಹೇರ್‌ಸ್ಟೈಲ್‌ ಅವರನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಒಟ್ಟಾರೆ ಪಾವನಾ ಅವರ ಸೀರೆ ಸ್ಟೈಲ್‌ ಸ್ಟೇಟ್‌ಮೆಂಟ್‌ ಮಾನಿನಿಯರನ್ನು ಸೆಳೆದಿದೆ.

(ಲೇಖಕಿ : ಫ್ಯಾಷನ್‌ಪತ್ರಕರ್ತೆ)

ಇದನ್ನೂ ಓದಿ: Star Beach Fashion: ಗ್ಲಾಮರಸ್‌ ಬೀಚ್‌ ಕಫ್ತಾನ್‌ನಲ್ಲಿ ನಟಿ ದೀಪಿಕಾ ದಾಸ್‌ ಮಸ್ತಿ

Exit mobile version