ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಇಂಡೋ-ವೆಸ್ಟರ್ನ್ ಲುಕ್ ನೀಡುವ ಡೈ ಮಾಡಿದ ನೀಲಿ ಡಿಸೈನರ್ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡು, ಸೀರೆ ಪ್ರಿಯರ ಹುಬ್ಬೇರಿಸಿದ್ದಾರೆ. ಈ ಸೀರೆಗೆ ಮ್ಯಾಚ್ ಮಾಡಿರುವ ಬಿಕಿನಿ ಶೈಲಿಯ ಎಂಬ್ರಾಯ್ಡರಿ ಬ್ಲೌಸ್ ಅವರ ಈ ಹಾಟ್ ಲುಕ್‌ಗೆ ಸಾಥ್ ನೀಡಿದೆ.
ಕಂಟೆಂಪರರಿ ವಿನ್ಯಾಸದ ಡಿಸೈನ್‌ಗಳಿಗೆ ಹೆಸರಾದ ಕ್ಯೂಬಿಐಕೆ ಬ್ರಾಂಡ್‌ನ ಡಿಸೈನರ್ ಸೀರೆ ಇದಾಗಿದ್ದು, ಸ್ಟೈಲಿಸ್ಟ್ ಮನಿಶಾ ಮೆಲ್ವಾನಿ ಭೂಮಿಗೆ ತಮ್ಮ ಟೀಮ್ ಜೊತೆ ಸೇರಿ ಸ್ಟೈಲಿಂಗ್ ಮಾಡಿದ್ದಾರೆ. ಇನ್ನು ಇದಕ್ಕೊಪ್ಪುವ ವಿಂಟೆಜ್ ಜ್ಯುವೆಲರಿಗಳು ನಾನಾ ಬ್ರಾಂಡ್‌ಗಳಾದ್ದಾಗಿದೆ. ಇಯರಿಂಗ್ಸ್ ಹಾಗೂ ಕೈಗಳಿಗೆ ಹಾಕುವ ಕಫ್ ಶೈಲಿಯ ಬ್ಯಾಂಗಲ್ ಅಪಾಲ ಬ್ರಾಂಡ್‌ನದ್ದಾಗಿದ್ದು, ನೆಕ್ಲೇಸ್ ಶ್ವೇತಾ ಗುಪ್ತಾ ಲೆಬೆಲ್‌ನದ್ದಾಗಿದೆ.
ಏನಿದು ಡೈ ಬ್ಲ್ಯೂ ಸೀರೆ?
ವೆಜಿಟೆಬಲ್ ಕಲರ್‌ನಿಂದ ಮಾಡಲಾಗುವ ಡೈ ಸೀರೆ ಇದಾಗಿದ್ದು, ಮಧ್ಯೆ ಮಧ್ಯೆ ಗೋಲ್ಡನ್ ಮೊಟಿಫ್ ಪ್ರಿಂಟ್ ಡಿಸೈನ್ ಒಳಗೊಂಡಿದೆ. ಇದು ಕಂಪ್ಲೀಟ್ ಸೀರೆಯ ಲುಕ್ ಆಕರ್ಷಕವಾಗಿ ಬಿಂಬಿಸಲು ಕಾರಣವಾಗಿದೆ. ಗ್ರ್ಯಾಂಡ್ ಲುಕ್ ನೀಡಿದೆ. ಇನ್ನು ಈ ಸೀರೆಗೆ ಧರಿಸಿರುವ ಬಿಕಿನಿ ಶೈಲಿಯ ಡೀಪ್ ನೆಕ್ ಕ್ಲಿವೇಜ್ ತೋರ್ಪಡಿಸುವ ರೆಡ್ ಬ್ಲೌಸ್ ಫ್ಲೋರಲ್ ಎಂಬ್ರಾಯ್ಡರಿ ಒಳಗೊಂಡಿದೆ. ಈ ಡಿಸೈನರ್ ಗ್ಲಾಮರಸ್ ಬ್ಲೌಸ್, ಸೀರೆಗೆ ಇಂಡೋ-ವೆಸ್ಟರ್ನ್ ಲುಕ್ ನೀಡಿದೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ಅಮಿತ್. ಅವರ ಪ್ರಕಾರ, ಯಾವುದೇ ಸೀರೆಯ ಬ್ಲೌಸ್, ಇಡೀ ಸೀರೆಯ ಲುಕ್ ಬದಲಾಯಿಸಬಹುದಂತೆ. ಹಾಗಾಗಿ ಸೀರೆಯ ಲುಕ್ ನಿರ್ಧಾರವಾಗುವುದೇ ಬ್ಲೌಸ್ ಡಿಸೈನ್‌ಗಳಿಂದ ಎನ್ನುತ್ತಾರೆ ಅವರು.
ಸ್ಟೈಲಿಂಗ್‌ನಿಂದಲೂ ಇಂಡೋ-ವೆಸ್ಟರ್ನ್ ಲುಕ್
ಸೀರೆಗೆ ಇಂಡೋ ವೆಸ್ಟರ್ನ್ ಲುಕ್ ಸಿಗುವುದು ಬ್ಲೌಸ್‌ನಿಂದ ಮಾತ್ರವಲ್ಲ, ಅದರ ಡ್ರೆಪಿಂಗ್ ಸ್ಟೈಲಿಂಗ್‌ನಿಂದಲೂ ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್ ಅಜಯ್. ಅವರ ಪ್ರಕಾರ, ಸೀರೆಯನ್ನು ಧರಿಸಿದಾಗ ನೋಡಲು ಇಂಡಿಯನ್ ಲುಕ್ ಇದ್ದರೂ, ಅದಕ್ಕೆ ಮ್ಯಾಚ್ ಮಾಡುವ ಬ್ಲೌಸ್ ವೆಸ್ಟರ್ನ್ ವಿನ್ಯಾಸವಿದ್ದಲ್ಲಿ ಅಥವಾ ಡಿಫರೆಂಟ್ ಡ್ರೆಪ್ ಮಾಡಿದಲ್ಲಿ ಕಂಪ್ಲೀಟ್ ಲುಕ್ ಬದಲಾಗುತ್ತದೆ. ಇನ್ನು, ಬಿಂದಿರಹಿತ ಹಣೆ, ವೆಸ್ಟರ್ನ್ ಹೇರ್‌ಸ್ಟೈಲ್ ಮಾಡಿದಾಗಲೂ ಇಂಡೋ-ವೆಸ್ಟರ್ನ್ ಲುಕ್‌ಗೆ ಪರಿವರ್ತನೆಯಾಗುತ್ತದೆ ಎನ್ನುತ್ತಾರೆ ಅವರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Celebrity Fashion Corner | ಉದ್ಯಾನನಗರಿಯ ಫ್ಯಾಷನ್ ಲೋಕ ವಿಸ್ತರಿಸುತ್ತಿದೆ ಎನ್ನುವ ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ