ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಸ್ಟರ್ನ್ ಹಾಗೂ ಎಥ್ನಿಕ್‌ವೇರ್ ಹೀಗೆ ಎಲ್ಲಾ ಬಗೆಯ ಔಟ್‌ಫಿಟ್‌ಗಳಲ್ಲೂ ಎಲ್ಲರಿಗೂ ಗ್ಲಾಮರಸ್ ಆಗಿ ಕಾಣಲು ಸಾಧ್ಯವಿಲ್ಲ. ಪ್ರತಿಯೊಂದು ಉಡುಪಿನಲ್ಲೂ ಗ್ಲಾಮರಸ್ ಆಗಿ ಕಾಣಲು ಕೆಲವರಿಗೆ ಮಾತ್ರ ಸಾಧ್ಯ. ಈ ಎಲ್ಲಾ ಬಗೆಯ ಉಡುಪುಗಳಲ್ಲೂ ವಾವ್! ಎನ್ನುವಷ್ಟರ ಮಟ್ಟಿಗೆ ಸೈ ಎನಿಸಿಕೊಳ್ಳುವ ನಟಿಯರಲ್ಲಿ ಶುಭಾ ರಕ್ಷಾ ಕೂಡ ಒಬ್ಬರು.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶುಭಾ ಸಿನಿಮಾ ನಟಿ ಮಾತ್ರವಲ್ಲ, ಮಾಡೆಲ್ ಕೂಡ. ಆಗಾಗ್ಗೆ ತಮ್ಮ ಔಟ್‌ಫಿಟ್‌ಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ.
ನನ್ನ ಫ್ಯಾಷನ್ ಸ್ಟೇಟ್‌ಮೆಂಟ್ ಆಲ್‌ಟೈಮ್ ಆನ್ ಆಗಿರುತ್ತದಂತೆ ಹಾಗೆಂದು ಅವರೇ ನಕ್ಕು ಹೇಳುತ್ತಾರೆ. ಈ ಬಾರಿಯ ಸ್ಟಾರ್ ಸ್ಟೈಲ್ ಕಾಲಂನಲ್ಲಿ ಮಾತನಾಡಿರುವ ಅವರು ಧರಿಸುವ ಉಡುಪುಗಳು ಅವರಿಗೆ ಆತ್ಮ ವಿಶ್ವಾಸ ನೀಡುತ್ತದಂತೆ. ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುತ್ತದಂತೆ.
ಚಾಲ್ತಿಯಲ್ಲಿರುವ ಫ್ಯಾಷನ್ ನನ್ನದು
“ನಾನು ಫ್ಯಾಷನ್ ಫಾಲೋ ಮಾಡುವುದಕ್ಕಿಂತ ಇಂದು ಯಾವುದು ಚಾಲ್ತಿಯಲ್ಲಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳುತ್ತೇನೆ. ನಂತರ ಅದಕ್ಕೆ ತಕ್ಕಂತೆ ಟ್ರೆಂಡ್‌ಗೆ ಹೊಂದಿಕೊಳ್ಳುತ್ತೇನೆ. ಯಾವತ್ತೂ ಧರಿಸುವ ಔಟ್‌ಫಿಟ್ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ. ನನಗೆ ನಾನೇ ಟ್ರೆಂಡ್ ಸೆಟ್ಟರ್ ಆಗುತ್ತೇನೆ ಎಂದರೂ ಅತಿಶಯೋಕ್ತಿಯಾಗದು” ಎನ್ನುತ್ತಾರೆ ಶುಭಾರಕ್ಷಾ.
ಫ್ಯಾಷನ್ ಮಾಡೆಲ್ ಹಾಗೂ ನಟಿಯಾಗಿರುವುದರಿಂದ ಎಲ್ಲಾ ಬಣ್ಣಗಳನ್ನು ಇಷ್ಟಪಡಬೇಕಾಗುತ್ತದೆ. ಆದರೆ, ನನಗೆ ಬ್ಲಾಕ್ ಹಾಗೂ ರೆಡ್‌ನ ಎಲ್ಲಾ ಶೇಡ್‌ಗಳು ನನಗಿಷ್ಟ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ಸೀಸನ್‌ಗೆ ತಕ್ಕಂತೆ ಲೆಕ್ಕವಿಲ್ಲದಷ್ಟು ಬಗೆಯ ಗ್ಲಾಮರಸ್ ಔಟ್‌ಫಿಟ್‌ಗಳನ್ನು ಧರಿಸಬೇಕಾಗುತ್ತದೆ. ಖುಷಿಯ ವಿಚಾರವೆಂದರೆ ವೆಸ್ಟರ್ನ್ ಔಟ್‌ಫಿಟ್ ಮಾತ್ರವಲ್ಲ ಟ್ರೆಡಿಷನಲ್‌ವೇರ್‌ನಲ್ಲೂ ಆಕರ್ಷಕವಾಗಿ ಕಾಣುತ್ತೇನೆಂಬ ಕ್ರೆಡಿಟ್ ನನಗೆ ದೊರಕಿರುವುದರಿಂದ ಎಲ್ಲಾ ಡಿಸೈನರ್‌ವೇರ್‌ಗಳಿಗೂ ಸೈ ಎನ್ನುವ ಶುಭಾರಕ್ಷಾ ಈಗಾಗಲೇ ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾರೆ.
ಕಟ್ ಗೌನ್‌ಗಳೆಂದರೆ ನನಗಿಷ್ಟ
ರ್ಯಾಂಪ್‌ನಲ್ಲಿ ಇತರೇ ಔಟ್‌ಫಿಟ್‌ಗಳಿಗಿಂತ ಗೌನ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಕೆಲವೊಮ್ಮೆ ಭಾರಿ ವಿನ್ಯಾಸದ ಗೌನ್‌ಗಳನ್ನು ಧರಿಸಬೇಕಾಗುತ್ತದೆ. ಆದರೆ ನನಗೆ ಲೈಟ್‌ವೇಟ್ ಹಾಗೂ ಕಟ್ಸ್, ಸ್ಲೀಟ್ಸ್ ಇರುವ ಲಾಂಗ್ ಗೌನ್‌ಗಳು ಪ್ರಿಯವಾಗುತ್ತದೆ ಎನ್ನುತ್ತಾರೆ.
ಫೆಸ್ಟೀವ್ ಸೀಸನ್‌ಗೆ ಸೀರೆ
ಸಾಕಷ್ಟು ಸೀರೆ ಬ್ರಾಂಡ್‌ಗಳಲ್ಲಿ ಕಾಣಿಸಿಕೊಂಡಿರುವ ಶುಭಾ ರಕ್ಷಾಗೆ ಸೀರೆ ಆಲ್‌ಟೈಮ್ ಇಷ್ಟದ ಟ್ರೆಡಿಷನಲ್‌ವೇರ್. ಸೀರೆಯಲ್ಲಿ ಯಾವುದೇ ಹುಡುಗಿಯಾದರೂ ಸುಂದರವಾಗಿ ಕಾಣುತ್ತಾಳೆ. ಅದರಲ್ಲೂ ಶ್ರಾವಣ ಸೀರೆ ಪ್ರಿಯರಿಗೆ ಸಾಲು ಸಾಲು ಹಬ್ಬವನ್ನು ತರುತ್ತದೆ. ನಾನು ಕೂಡ ಹಬ್ಬಗಳಲ್ಲಿ ಸೀರೆ ಉಟ್ಟು ಸಂಭ್ರಮಿಸುತ್ತೇನೆ” ಎನ್ನುತ್ತಾರೆ ಶುಭಾ.
ಲೇಖಕಿ : ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ | Season Fashion: ಮಾನಿನಿಯರ ಮನಗೆದ್ದ ಮನಮೋಹಕ ಶೀರ್ ದುಪಟ್ಟಾ