Site icon Vistara News

Star Style | ಸಾಧನಾ ಹೇರ್‌ಸ್ಟೈಲ್‌ನಲ್ಲಿ ಖುಷಿ ಕಪೂರ್‌ ನಯಾ ಲುಕ್‌

Star Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಾಹ್ನವಿ ಕಪೂರ್‌ ತಂಗಿ ಖುಷಿ ಕಪೂರ್‌ ಸಾಧನಾ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಸದ್ಯಕ್ಕೆ ಬದಲಾಗಿದೆ. ಇದು ಅವರಿಗೆ ನಯಾ ಲುಕ್‌ ನೀಡಿದೆ.

ಸದ್ಯಕ್ಕೆ ವಿದೇಶದಿಂದ ಮರಳಿರುವ ಖುಷಿ, ತನ್ನ ಅಕ್ಕ ಜಾಹ್ನವಿ ಕಪೂರ್‌ರೊಂದಿಗೆ ಸಿನಿಮಾ ಹಾಗೂ ಪೇಜ್‌ ತ್ರೀ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಈಗಾಗಲೇ ಜೋಯಾ ಅಕ್ತರ್‌ರ ನೆಟ್‌ಫ್ಲಿಕ್ಸ್‌ ಪ್ರಾಯೋಜಿತ ದಿ ಆರ್ಚಿಸ್‌ ಸಿನಿಮಾದಲ್ಲೂ ಇವರು ನಟಿಸಿದ್ದು, ಸದ್ಯದಲ್ಲೆ ಬಿಡುಗಡೆಯಾಗಲಿದೆ. ಹಾಗಾಗಿ ಖುಷಿ ಕಪೂರ್‌ ತಮ್ಮ ಲುಕ್ಸ್‌ ಬಗ್ಗೆ ಅಕ್ಕನಂತೆಯೇ ಸಾಕಷ್ಟು ಕಾಳಜಿ ವಹಿಸಲಾರಂಭಿಸಿದ್ದಾರೆ. ತಾವು ನಟಿಸಿರುವ ಸಿನಿಮಾದಲ್ಲಿನ ಲುಕ್‌ ಅನ್ನು ಸಿನಿಮಾ ಪ್ರಮೋಷನ್‌ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದುವರಿಸಿದ್ದಾರೆ. ಹಾಗಾಗಿ ಫ್ರಂಟ್‌ ಕಟ್‌ ಇರುವ ಸಾಧನಾ ಹೇರ್‌ಸ್ಟೈಲ್‌ಗೆ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳು.

ಏನಿದು ಸಾಧನಾ ಹೇರ್‌ಸ್ಟೈಲ್‌?

ಅಂದ ಹಾಗೆ, ಸಾಧನಾ ಹೇರ್‌ಸ್ಟೈಲ್‌ ಹೊಸತೇನಲ್ಲ! ಇದು ಬಹಳ ಹಳೆಯ ಹೇರ್‌ಸ್ಟೈಲ್‌. ಕೂದಲನ್ನು ಕಟ್‌ ಮಾಡುವ ಮೂಲಕ ಮುಖಕ್ಕೆ ಹೊಸ ಲುಕ್‌ ನೀಡಲಾಗುವ ಹೇರ್‌ಸ್ಟೈಲ್‌ ಇದು. ಇತ್ತೀಚಿನ ದಿನಗಳಲ್ಲಿ ಈ ಹೇರ್‌ಸ್ಟೈಲ್‌ ಮಾಡುವವರು ತೀರಾ ಕಡಿಮೆಯಾಗಿದೆ. ಅಂದಹಾಗೆ, ಈ ಹೇರ್‌ಕಟ್‌ ನಲವತ್ತು, ಐವತ್ತರ ದಶಕಗಳಿಂದಲೂ ಬಾಲಿವುಡ್‌ನಲ್ಲಿದೆ. ಹಳೆಯ ಸಿನಿಮಾ ತಾರೆಯರು ಈ ಹೇರ್‌ಕಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಿನ ಸಿನಿಮಾಗಳಲ್ಲಿ ಅತಿ ಹೆಚ್ಚಾಗಿ ಈ ಹೇರ್‌ಕಟ್‌ನಲ್ಲಿ ಕಾಣಿಸಿಕೊಂಡ ಹಳೆಯ ನಟಿ ಸಾಧನಾ ಈ ಸ್ಟೈಲನ್ನು ಟ್ರೆಂಡಿಯಾಗಿಸಿದರು. ಹಾಗಾಗಿ ಈ ಹೇರ್‌ಕಟ್‌ ಅಥವಾ ವಿನ್ಯಾಸವನ್ನು ಸಾಧನಾ ಹೇರ್‌ಕಟ್‌ ಅಥವಾ ಹೇರ್‌ಸ್ಟೈಲ್‌ ಎನ್ನಲಾಗುತ್ತದೆ. ಕೆಲವರು ಸ್ಟೈಲ್ ಬದಲಿಸಲು ಈ ಹೇರ್‌ಸ್ಟೈಲ್‌ ಮಾಡಿದರೆ, ಮತ್ತೆ ಕೆಲವರು ಅಗಲವಾದ ಹಣೆಯನ್ನು ಮುಚ್ಚಲು ಈ ಹೇರ್‌ಸ್ಟೈಲ್‌ ಮಾಡುತ್ತಿದ್ದರು ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ರಾಕಿ.

ಸಾಧನಾ ಹೇರ್‌ಕಟ್‌ನಲ್ಲಿ ಸೆಲೆಬ್ರಿಟಿಗಳು

ಅಷ್ಟೇ ಏಕೆ? ನಟಿ ಐಶ್ವರ್ಯಾ ರೈ ಮಗಳು ಆರಾಧ್ಯಳದ್ದು ಕೂಡ ಇದೇ ಹೇರ್‌ಕಟ್‌. ಇನ್ನು ನಟಿ ಚಿತ್ರಾಂಗದಾ ಸಿಂಗ್‌, ಅನುಷ್ಕಾ ಶರ್ಮಾ ಕೂಡ ಸೇರಿದಂತೆ ಸಾಕಷ್ಟು ಕಿರುತೆರೆ ನಟಿಯರು ಈ ಹೇರ್‌ಕಟ್‌ನಲ್ಲಿ ಕೆಲಕಾಲ ಕಾಣಿಸಿಕೊಂಡಿದ್ದರು. ಇದು ನೋಡಲು ಮುಖವನ್ನು ಕ್ಯೂಟ್‌ ಆಗಿ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಮುಂಭಾಗದ ಕೂದಲಿಗೆ ಕತ್ತರಿ

ಹಣೆಯ ಮೇಲ್ಭಾಗದ ಕೂದಲಿಗೆ ಕತ್ತರಿ ಹಾಕಿ ಮಾಡುವ ಸಾಧನಾ ಹೇರ್‌ಕಟ್‌ ಅಂದರೆ, ಫ್ರಿಂಝ್‌ ಹೇರ್‌ಕಟ್‌ ಎಂತಹವರಿಗೂ ಕೂಡ ನಯಾ ಲುಕ್‌ ನೀಡುತ್ತದೆ ಎನ್ನುತ್ತಾರೆ ಹೇರ್‌ ಸ್ಪೆಷಲಿಸ್ಟ್‌ ರಾಗ ಶ್ರೀ. ಒಮ್ಮೆ ಹಣೆ ಮುಂಭಾಗದ ಕೂದಲಿಗೆ ಕತ್ತರಿ ಹಾಕಿದಲ್ಲಿ ಸುಮಾರು ಒಂದೂವರೆ ತಿಂಗಳವರೆಗೆ ಹೇರ್‌ಸ್ಟೈಲ್‌ ಬದಲಿಸಲು ಸಾಧ್ಯವಾಗದು. ಹಾಗಾಗಿ ಈ ಹೇರ್‌ಸ್ಟೈಲ್‌ಗೆ ಮೊರೆ ಹೋಗುವ ಮುನ್ನ ಯೋಚಿಸಿ ನಂತರ ಬದಲಿಸುವುದು ಉತ್ತಮ ಎನ್ನುತ್ತಾರವರು. (ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Belt Fashion | ಟ್ರೆಡಿಷನಲ್‌ ಡಿಸೈನರ್‌ವೇರ್ರ್‌ಗೂ ಬಂತು ಬೆಲ್ಟ್ ಫ್ಯಾಷನ್‌

Exit mobile version