ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ತಾರೆ ಸಂಜನಾ ಆನಂದ್ ದುಬೈನ ಡೆಸರ್ಟ್ ಸಫಾರಿಗೆ ತಕ್ಕಂತೆ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬದಲಿಸಿಕೊಂಡಿದ್ದು, ಸಿಂಪಲ್ ಕ್ರಾಪ್ ಟಾಪ್ ಹಾಗೂ ಕಾರ್ಗೋ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಬಿಸಿಲು ಹಾಗೂ ತಣ್ಣನೆ ಗಾಳಿಯ ಬದಲಾಗುವ ಹವಮಾನಕ್ಕೆ ತಕ್ಕಂತೆ ಟ್ರಾವೆಲ್ ಟೈಮ್ ಸಿಂಪಲ್ ಔಟ್‌ಫಿಟ್‌ಗೆ (Star Travel Fashion) ಸೈ ಎಂದಿದ್ದಾರೆ.
ಈ ಲೈಟ್‌ವೈಟ್ ಔಟ್‌ಫಿಟ್ ಕ್ಯಾಶುವಲ್ ಟ್ರಾವೆಲ್ ಪ್ರಿಯರನ್ನು (Star Travel Fashion) ಸೆಳೆದಿದ್ದು, ಸಂಜನಾ ಡೆಸರ್ಟ್ ಸಫಾರಿಯ ಮೋಜನ್ನು ಎಕ್ಸ್‌ಪಿರಿಯನ್ಸ್ ಮಾಡಲು ಸಾಥ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಸಂಜನಾ ಆನಂದ್ ಕ್ರಾಪ್ ಟಾಪ್-ಕಾರ್ಗೋ ಪ್ಯಾಂಟ್ ಲುಕ್
ದುಬೈ ಮರುಭೂಮಿಗಳಲ್ಲಿ ಸಿಟಿಗಳಲ್ಲಿ ಇದ್ದ ಹಾಗೆ ಹವಾಮಾನ ಇರುವುದಿಲ್ಲ! ನೋಡಲು ಬಿಸಿಲು ಇದ್ದರೂ ತಣ್ಣನೆಯ ಗಾಳಿ ಬೀಸುತ್ತಿರುತ್ತಿದೆ. ಕೆಲವೊಮ್ಮೆ ಈ ಗಾಳಿ ಬಿರುಗಾಳಿಯಂತೆ ಬದಲಾಗುತ್ತಿರುತ್ತದೆ. ಹಾಗಾಗಿ ಈ ಡೆಸರ್ಟ್ ಸಫಾರಿಯಲ್ಲಿ ಹೋಗುವವರು ಹಾಗೂ ಅದನ್ನು ಖುಷಿಯಿಂದ ಎಂಜಾಯ್ ಮಾಡಲು ಬಯಸುವವರು ಆದಷ್ಟೂ ಇದಕ್ಕೆ ಹೊಂದುವಂತಹ ಔಟ್‌ಫಿಟ್ ಧರಿಸುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಹೊಂದುವಂತೆ ಜಂಪ್‌ಸೂಟ್ಸ್, ಪ್ಯಾಂಟ್ ಸೆಟ್, ಪ್ಯಾಂಟ್ ಸೂಟ್, ಜೀನ್ಸ್ ಸೇರಿದಂತೆ ನಾನಾ ಉಡುಪುಗಳು ಬೆಸ್ಟ್ ಎನ್ನುವ ಫ್ಯಾಷನ್ ವಿಮರ್ಶಕರು, ಸಂಜನಾ ಧರಿಸಿರುವ ಈ ಉಡುಪು ಸಂದರ್ಭಕ್ಕೆ ತಕ್ಕಂತೆ ಮ್ಯಾಚ್ ಆಗಿದೆ ಎನ್ನುತ್ತಾರೆ.
ಇನ್ನು ಡೆಸರ್ಟ್ ಸಫಾರಿಗಳಲ್ಲಿ ಆದಷ್ಟೂ ಸ್ಕರ್ಟ್ಸ್, ಲಾಂಗ್ ಫ್ರಾಕ್, ಗೌನ್, ಮ್ಯಾಕ್ಸಿಗಳನ್ನು ಆವಾಯ್ಡ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ಅಲ್ಲಿನ ಗಾಳಿ-ಬಿರುಗಾಳಿಗೆ ನಿಲ್ಲದೇ ಹಾರಬಹುದು. ಮುಜುಗರಕ್ಕೆ ಈಡಾಗಬಹುದು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ.
ದುಬೈ ಸ್ಟ್ರೀಟ್ ಸ್ಟೈಲ್
ಇನ್ನು ಸಂಜನಾ ಆನಂದ್ ದುಬೈ ಸ್ಟ್ರೀಟ್‌ಗಳಲ್ಲಿ ಸ್ಯಾಟಿನ್ ಸ್ಪೆಗೆಟಿ ಸ್ಟ್ರಾಪ್ ಮಿಡಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ಅವರನ್ನು ಮನಮೋಹಕವಾಗಿ ಬಿಂಬಿಸಿದೆ ಎಂದಿದ್ದಾರೆ ಸ್ಟೈಲಿಸ್ಟ್‌ಗಳು. ದುಬೈ ಮಾಲ್‌ಗಳಿಂದಿಡಿದು ಎಲ್ಲೆಡೆ ಕೂಲ್ ಔಟ್‌ಫಿಟ್‌ಗಳಲ್ಲಿ ಸಂಜನಾ ತಿರುಗಾಡುತ್ತಾ ಫೋಟೋಗಳಿಗೂ ಪೋಸ್ ನೀಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾ, ತಮ್ಮ ಅಭಿಮಾನಿಗಳನ್ನು ಸೆಳೆದಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Travel Fashion: ಸ್ವಿಟ್ಜರ್‌ಲ್ಯಾಂಡ್ ಸ್ಟ್ರೀಟ್ ಸ್ಟೈಲ್ ಟ್ರಾವೆಲ್ ಫ್ಯಾಷನ್‌ಗೆ ಸೈ ಎಂದ ನಟಿ ಅದಿತಿ ಪ್ರಭುದೇವ