ದೀಪಾವಳಿ ಬಂತೆಂದರೆ ಬಾಲಿವುಡ್ ಅಂಗಳದಲ್ಲಿ ಪಾರ್ಟಿಗಳದ್ದೇ ಕಾರುಬಾರು. ಭಿನ್ನ ಭಿನ್ನ ಉಡುಗೆಗಳಲ್ಲಿ ಬಾಲಿವುಡ್ ತಾರೆಯರು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗುತ್ತಾರೆ. ಈ ಬಾರಿ ಬಚ್ಚನ್ ಮತ್ತು ಶಾರುಖ್ ಕುಟುಂಬಗಳು ಹಾಗೂ ಕರಣ್ ಜೋಹರ್ ಪಾರ್ಟಿ ಅರೇಂಜ್ ಮಾಡದಿದ್ದರೂ ಕೂಡ ಬಾಲಿವುಡ್‌ನಲ್ಲಿ ಪಾರ್ಟಿಗಳಿಗೇನು ಕೊರತೆಯಿಲ್ಲ. ರಮೇಶ ತೌರಾನಿ, ಮನೀಷ್ ಮಲ್ಹೋತ್ರಾ ಹಾಗು ಕೃತಿ ಸೇನನ್ ಏರ್ಪಡಿಸಿದ್ದ ಪಾರ್ಟಿಗಳಲ್ಲಿ ಸ್ಟಾರ್‌ಗಳು ಮಿಂಚಿದ್ದು ಹೀಗೆ.
ಕೃತಿ ಸೇನನ್
ಈ ಬಾರಿ ತನ್ನದೇ ಪಾರ್ಟಿ ಏರ್ಪಡಿಸಿದ್ದ ಕೃತಿ, ಬಾಟಲ್ ಗ್ರೀನ್ ಅನಾರ್ಕಲಿಯಲ್ಲಿ ಕಾಣಿಸಿಕೊಂಡರು. ಝರಿ, ಬೀಡ್ ಹಾಗು ಸಿತಾರಾ ವರ್ಕ್ ಇದ್ದ ಉದ್ದನೆಯ ತೋಳಿನ ಕುರ್ತಾದ ದುಪಟ್ಟಾ ಕೂಡ ಅಷ್ಟೇ ಸುಂದರವಾಗಿತ್ತು. ಮೇಕ್‌ಅಪ್‌ಗೆ ಪೀಚ್ ಲಿಪ್‌ಸ್ಟಿಕ್, ಕಾಜಲ್ ಹಾಗು ಮಸ್ಕಾರ ಬಳಸಿದ್ದ ಕೃತಿ, ವೇವಿ ಹೇರ್‌ಸ್ಟೈಲ್ ಮಾಡಿದ್ದರು. ಸಿಂಪಲ್ ಆದ ಈ ಲುಕ್‌ಗೆ ಸರ್ಕ್ಯುಲರ್ ಕಿವಿಯೋಲೆ ಹಾಗು ಉಂಗುರಗಳನ್ನು ಧರಿಸಿದ್ದರು.
ಅನನ್ಯಾ ಪಾಂಡೆ
ಕೃತಿ ಸೇನನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ಲೆಹೆಂಗಾದಲ್ಲಿ ಅನನ್ಯಾ ಮಿಂಚಿದರು. ಹೈ ವೇಸ್ಟೆಡ್ ಫ್ಲೇಯ್ಡ್ ಸ್ಕರ್ಟ್‌ಗೆ ಕ್ವೀನ್ ಆನ್ ನೆಕ್‌ಲೈನ್, ಸೈಡ್ ಕಟ್ ಇರುವ ಬ್ಲೌಸ್, ಒರ್ಗಾಂಜಾ ದುಪಟ್ಟಾ ಪೇರ್ ಮಾಡಲಾಗಿತ್ತು.
ನೋರಾ ಫತೇಹಿ
ಹೆವಿ ಎಂಬ್ರಾಯ್ಡರಿ ಇರುವ ಫ್ಲೋರಲ್ ಪೇಸ್ಟಲ್ ಪಿಂಕ್ ಲೆಹೆಂಗಾದಲ್ಲಿ ನೋರಾ ಫತೇಹಿ ಅವರು ರಮೇಶ್ ತೌರಾನಿ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಇದಕ್ಕೆ ಸ್ಲೀವ್‌ಲೆಸ್ ಬ್ಲೌಸ್ ಹಾಗು ಶಿಯರ್ ದುಪಟ್ಟಾವನ್ನು ನೋರಾ ತೊಟ್ಟಿದ್ದರು. ಈ ಉಡುಗೆಗೆ ಸಿಲ್ವರ್ ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು ಹಾಗು ರಿಂಗ್‌ಗಳನ್ನು ಧರಿಸಿದ್ದ ನೋರಾ, ತಮ್ಮ ಸಿಗ್ನೇಚರ್ ಸೈಡ್ ಪಾರ್ಟಿಂಗ್ ಹೇರ್ ಸ್ಟೈಲ್ ನಲ್ಲಿ ಕಣ್ಸೆಳೆದರು. ಲುಕ್ ಅನ್ನು ಕಂಪ್ಲೀಟ್ ಮಾಡಲು ಸಿಲ್ವರ್ ಐ ಶಾಡೋ ಜತೆಗೆ ಸಿಲ್ವರ್ ಕ್ಲಚ್ ಅನ್ನು ಕೂಡ ನೋರಾ ಅಳವಡಿಸಿಕೊಂಡಿದ್ದರು.
ಶೆಹೆನಾಜ್ ಗಿಲ್
ಸಿನಿಮಾ ತಾರೆಯರಿಗಿಂತ ತಾವೇನು ಕಡಿಮೆ ಇಲ್ಲ ಎಂದು ಹಲವು ಕಿರುತೆರೆಯ ಸ್ಟಾರ್ ಗಳು ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಹಿಂದಿಯ ಬಿಗ್ ಬಾಸ್ 13ರ ಖ್ಯಾತಿಯ ಶೆಹೆನಾಜ್ ಗಿಲ್ ಕೂಡ ಒಬ್ಬರು. ಕಪ್ಪು ಸೀಕ್ವಿನ್ ಸೀರೆ ಹಾಗೂ ಸ್ಲೀವ್ ಲೆಸ್ ಬ್ಲೌಸ್ ಜತೆಗೆ ಸ್ಟೇಟ್ ಮೆಂಟ್ ಇಯರ್ ರಿಂಗ್, ಬ್ರೇಸ್ ಲೆಟ್ ಹಾಗು ಸ್ಲೀಕ್ ಬನ್ ನಲ್ಲಿ ಶಹೆನಾಜ್ ಮಿಂಚಿದರು. ಅಲ್ಲದೇ ಮೇಕ್ ಅಪ್ ಅನ್ನು ಮಿನಿಮಲ್ ಆಗಿ ವಿಂಗ್ಡ್ ಐಲೈನರ್‌ಗೆ ಸೀಮಿತವಾಗಿರಿಸಿದ್ದ ಶೆಹೆನಾಜ್ ಸುಂದರವಾಗಿ ಕಾಣಿಸುತ್ತಿದ್ದರು.
ಶಿಲ್ಪಾ ಶೆಟ್ಟಿ
ರಮೇಶ್ ತೌರಾನಿ ಪಾರ್ಟಿಯಲ್ಲಿ ಶಿಲ್ಪಾ ಶೆಟ್ಟಿ ನದೀಮಾ ಸಾಖಿಬ್ ರಫಲ್ ಸೀರೆಯಲ್ಲಿ ಕಂಗೊಳಿಸಿದರು. ಚಾಕೊಲೇಟ್ ಬಣ್ಣದ, ಗೋಲ್ಡ್ ಬಾರ್ಡರ್ ಇರುವ ಜಾರ್ಜೆಟ್ ಸೀರೆಗೆ ಸ್ಲೀವ್ ಲೆಸ್, ಎಂಬ್ರಾಯ್ಡರ್ಡ್ ಬ್ಲೌಸ್ ಅನ್ನು ಧರಿಸಿದ್ದ ಶಿಲ್ಪಾ, ಅಂಕಿತ್ ಖುಲ್ಲರ್ ಅವರ ಪೂರಬ್ ಪಶ್ಚಿಮ್ ಜ್ಯುವೆಲರಿ ಹಾಗೂ ಲೆದರ್ ಬೆಲ್ಟ್ ನಿಂದ ಅಕ್ಸೆಸರೈಸ್ ಮಾಡಿ ಸಿಂಪಲ್ ಸ್ಮೋಕಿ ಮೇಕ್ ಅಪ್ ಮಾಡಿದ್ದರು.
ಕತ್ರಿನಾ ಕೈಫ್
ಮದುವೆಯ ನಂತರ ಮೊದಲ ದೀಪಾವಳಿ ಆಚರಿಸುತ್ತಿರುವ ಕತ್ರಿನಾ ಅವರು ರಮೇಶ್ ತೌರಾನಿ ಪಾರ್ಟಿಯಲ್ಲಿ ಅನಿತಾ ಡೋಂಗ್ರೆ ಸಿಗ್ನೇಚರ್ ಫ್ಲೋರಲ್ ಪ್ರಿಂಟ್, ಸೀಕ್ವಿನ್ ಘರಾರಾದಲ್ಲಿ ಪತಿ ವಿಕ್ಕಿ ಕೌಶಲ್ ಜತೆ ಕಾಣಿಸಿಕೊಂಡರು. ಝುಮಕಿ ಹಾಗು ಸಿಂಪಲ್ ಆದ ಡ್ಯೂವಿ ಮೇಕ್ ಅಪ್ ನಲ್ಲಿ ಕಂಗೊಳಿಸಿದರು.
ರಕುಲ್ ಪ್ರೀತ್ ಸಿಂಗ್
ಕೃತಿ ಸೇನನ್ ಪಾರ್ಟಿಯಲ್ಲಿ ಆಕಾಂಕ್ಷಾ ಗಜ್ರಿಯಾ ಡಿಸೈನ್ ಮಾಡಿರುವ ಹಳದಿ ಮತ್ತು ಆರೆಂಜ್ ಟೈ ಡೈ ಸೀರೆಯಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡರು. ಸಿಂಪಲ್ ಆದ ಸೀರೆಗೆ ಸಿಲ್ವರ್ ಬಣ್ಣದ ಸೀಕ್ವಿನ್ ಬ್ಲೌಸ್ ಧರಿಸಿದ್ದರು. ಸಿಲ್ವರ್ ಝುಮಕಿಗಳು ಹಾಗು ಉಂಗುರಗಳನ್ನು ಧರಿಸಿದ್ದ ರಕುಲ್ ಗೋಲ್ಡನ್ ಹೀಲ್‌ಗಳಲ್ಲಿ ಎಲ್ಲರ ಕಣ್ಸೆಳೆದರು. ಅಲ್ಲದೇ, 2000 ಶಾಂಪೇನ್ ರೈನ್ ಸ್ಟೋನ್ ಇರುವ ಔಟ್ ಹೌಸ್ ಜ್ಯವೆಲರಿಯವರ ಸಣ್ಣ ಬ್ಯಾಗ್ ಅನ್ನು ರಕುಲ್ ಹಿಡಿದಿದ್ದರು.
ಇದನ್ನೂ ಓದಿ : Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ