ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾಷಿಂಗ್ಟನ್ನಲ್ಲಿ ನಟಿ ನೇಹಾ ಶೆಟ್ಟಿ, ಕ್ಲಾಸಿ ವಿಂಟರ್ ಫ್ಯಾಷನ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದು, ಫ್ಯಾಷನ್ ಪ್ರಿಯರ ಮನ ಗೆದ್ದಿದ್ದಾರೆ. ಸದಾ ಒಂದಲ್ಲ ಒಂದು ವಿಂಟರ್ ಔಟ್‌ಫಿಟ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ನೇಹಾ, ಮೊದಲಿನಿಂದಲೂ ತಮ್ಮ ಡ್ರೆಸ್ಸಿಂಗ್ ಹಾಗೂ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡುತ್ತಲೇ ಬಂದಿದ್ದಾರೆ. ಅಲ್ಲದೇ, ಸೀಸನ್‌ಗೆ ತಕ್ಕಂತೆ ತಮ್ಮ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಆಗಾಗ್ಗೆ ಬದಲಿಸುತ್ತಿರುತ್ತಾರೆ.
ಫ್ಯಾಷನ್ ಐಕಾನ್ ನೇಹಾ
ಅಂದಹಾಗೆ, ನಟಿ ನೇಹಾ ಶೆಟ್ಟಿ ಮುಂಗಾರು ಮಳೆ ೨ ನಲ್ಲಿಯೇ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ನೋಡಲು ಬ್ಯೂಟಿಫುಲ್ ಆಗಿರುವ ನೇಹಾ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ಮೊದಲಿನಿಂದಲೂ ಪಕ್ಕಾ ಚಾಯ್ಸ್ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲದೇ ಫ್ಯಾಷನ್ ಫಾಲೋವರ್ ಎನ್ನುವುದಕ್ಕಿಂತ ಅವರದ್ದೇ ಆದ ಫ್ಯಾಷನ್ ಹುಟ್ಟುಹಾಕುತ್ತಿರುತ್ತಾರೆ. ಅಲ್ಲದೇ ತಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟನ್ನು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಪ್ರಸ್ತುತ ಪಡಿಸುತ್ತಾರೆ. ಈ ಬಗ್ಗೆ ಅವರೇ ಮಾಧ್ಯಮದೊಂದಿಗೆ ಫ್ಯಾಷನ್ ಕುರಿತ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ನೇಹಾ ಕ್ಲಾಸಿ ಲುಕ್
ಇನ್ನು ನೇಹಾ ಶೆಟ್ಟಿಯ ಒಂದೊಂದು ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಕೂಡ ಸಖತ್ ಫ್ಯಾಷೆನಬಲ್ ಆಗಿವೆ. ನೋಡಲು ಮನಮೋಹಕವಾಗಿವೆ. ಪ್ರತಿ ಉಡುಪುಗಳು ಕ್ಲಾಸಿ ಲುಕ್ ನೀಡುವುದರೊಂದಿಗೆ ಹಾಲಿವುಡ್ ಶೈಲಿಯ ವೆಸ್ಟರ್ನ್ ವಿಂಟರ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ನೆನಪಿಸುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ರಚಿತಾ. ಅವರ ಪ್ರಕಾರ, ವಿಂಟರ್ ಸೀಸನ್‌ನಲ್ಲಿ ಕ್ಲಾಸಿ ಫ್ಯಾಷನ್‌ನಲ್ಲಿ ಕಾಣುವುದು ಸುಲಭವೇನಲ್ಲ. ಇದಕ್ಕಾಗಿ ಸಾಕಷ್ಟು ಬದಲಾಗಬೇಕಾಗುತ್ತದೆ ಎನ್ನುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ, ನೇಹಾ ವಾಷಿಂಗ್ಟನ್ನಲ್ಲಿ ಕಾಣಿಸಿಕೊಂಡ ತ್ರೀ ಪೀಸ್ ಡ್ರೆಸ್, ಫ್ರೆಂಚ್ ಸ್ಕರ್ಟ್, ಟಾಪ್ ಅದರ ಮೇಲೊಂದು ಕೋಟ್, ಜತೆಗೆ ಬ್ಲಾಕ್ ಬೂಟ್ಸ್ ಹಾಗೂ ಬ್ಲಾಕ್ ಸ್ಟಾಕಿಂಗ್ಸ್ ಎಲ್ಲವೂ ಹಾಲಿವುಡ್ ಲೆವೆಲ್‌ನ ವೆಸ್ಟರ್ನ್ ವಿಂಟರ್ ಲುಕ್‌ಗೆ ಸಾಥ್ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇನ್ನು ಫರ್ ಶಿಯರ್ಲಿಂಗ್ ಕೋಟ್ ಜೊತೆಗೆ ಪರ್ಲ್ ಸ್ವೆಟರ್ ಹಾಗೂ ಸ್ಕರ್ಟ್ ಜೊತೆಗೆ ವೈಟ್ ಬೂಟ್ಸ್‌ನಲ್ಲಿ ಕಾಣಿಸಿಕೊಂಡಿರುವ ವಿಂಟರ್‌ಡ್ರೆಸ್‌ಕೋಡ್ ಇಂಟರ್‌ನ್ಯಾಷನಲ್ ಬ್ರಾಂಡ್‌ನದ್ದಾಗಿದ್ದು, ಸೀಸನ್‌ಗೆ ತಕ್ಕಂತೆ ಮ್ಯಾಚ್ ಆಗಿದೆ. ವಾಷಿಂಗ್‌ಟನ್‌ನ ಸ್ಟ್ರೀಟ್ ಫ್ಯಾಷನ್‌ಗೆ ಸಾಥ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
( ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| New year Fashion | ಹೊಸ ವರ್ಷದ ನ್ಯೂ ಲುಕ್‌ಗೆ ಸಾಥ್ ನೀಡುವ 5 ಸ್ಟೈಲ್ ಸ್ಟೇಟ್‌ಮೆಂಟ್ಸ್