ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮವನ್ನು ಕಂಪ್ಲೀಟ್ ಸಾಂಪ್ರದಾಯಿಕ ಉಡುಪಿನಲ್ಲಿ (Stars Dasara Celebration) ತಾರೆಯರು ಆಚರಿಸಿದರು. ರೇಷ್ಮೆ ಸೀರೆಯಲ್ಲಿ ಕೆಲವು ತಾರೆಯರು ಕಾಣಿಸಿಕೊಂಡರೇ, ಇನ್ನು ಕೆಲವರು ಲೆಹೆಂಗಾ, ಗಾಗ್ರಾ, ಹಾಫ್ ಸೀರೆ ಹೀಗೆ ವೈವಿಧ್ಯಮಯ ಔಟ್‌ಫಿಟ್‌ಗಳಲ್ಲಿ ಸ್ಯಾಂಡಲ್‌ವುಡ್, ಬಾಲಿವುಡ್ ಹಾಗೂ ಕಿರುತೆರೆ ತಾರೆಯರು ಆಚರಿಸಿದರು. ಇನ್ನು ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ಕೂಡ ತಮ್ಮದೇ ಆದ ಸ್ಟೈಲ್‌ನಲ್ಲಿ ವಾರದಾದ್ಯಂತ ನಡೆದ ದಾಂಡಿಯಾ ಹಾಗೂ ಗರ್ಬಾದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸಂಸ್ಕೃತಿ ಬಿಂಬಿಸುವ ದೇಸಿ ಲುಕ್
ಒಟ್ಟಿನಲ್ಲಿ, ಎಂದಿನಂತೆ ಈ ಬಾರಿಯೂ ದಸರಾ ಹಾಗೂ ನವರಾತ್ರಿಯ ಹಬ್ಬದ ಹೆಸರಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಸಾಂಪ್ರದಾಯಿಕ ಸೀರೆ ಹಾಗೂ ಉಡುಪಿಗೆ ಮಾನ್ಯತೆ ದೊರೆಯಿತು. ಇದರಿಂದ ದೇಸಿ ಅಪರೆಲ್ ಕ್ಷೇತ್ರದ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರಾದ ವಿದ್ಯಾ. ಅವರ ಪ್ರಕಾರ, ನಮ್ಮ ರಾಷ್ಟ್ರದಲ್ಲಿ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಧರಿಸುವ ಸೀರೆ ಹಾಗೂ ಎಥ್ನಿಕ್ ಉಡುಪುಗಳು ಬದಲಾಗುತ್ತಾ ಹೋಗುತ್ತವೆ.
ಆದರೆ, ನವರಾತ್ರಿಯಂತಹ ಹಬ್ಬಗಳು ಬಂದಾಗ ಎಲ್ಲರೂ ಅವರದ್ದೇ ಆದ ದೇಸಿ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನಮ್ಮ ದೇಸಿ ಸಂಸ್ಕೃತಿಯನ್ನು ಪ್ರಮೋಟ್ ಮಾಡುವಲ್ಲಿ ಸಹಕರಿಸುತ್ತದೆ. ಇನ್ನು ಸೆಲೆಬ್ರೆಟಿಗಳು ಹಾಗೂ ತಾರೆಯರು ಪಕ್ಕಾ ಟ್ರೆಡಿಷನಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಾಗ ಸಾಮಾನ್ಯ ಜನರು ಇದರಿಂದ ಸ್ಪೂರ್ತಿಗೊಳ್ಳುತ್ತಾರೆ. ಅವರನ್ನು ಫಾಲೋ ಮಾಡುತ್ತಾರೆ. ಪರಿಣಾಮ, ಸ್ಥಳೀಯ ಕಲಾತ್ಮಕ ಹಾಗೂ ದೇಸಿ ಉಡುಪುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದು ಪ್ರಶಂಸನೀಯ ಎಂದಿದ್ದಾರೆ.
ಸ್ಯಾಂಡಲ್‌ವುಡ್ ತಾರೆಯರ ಸಾಂಪ್ರದಾಯಿಕ ಲುಕ್
ನಟಿಯರಾದ ಪ್ರಿಯಾಂಕಾ ಉಪೇಂದ್ರ, ಕಾರುಣ್ಯ, ಅಶಿಕಾ, ರಚಿತಾ, ನಿಮಿಕಾ, ರಾಧಿಕಾ, ತೇಜಸ್ವಿನಿ, ಮೋಕ್ಷಿತಾ ಪೈ, ಭೂಮಿಕಾ ಸೇರಿದಂತೆ ಹಿರಿ ತೆರೆ ಹಾಗೂ ಕಿರುತೆರೆ ಕಲಾವಿದರು ದಸರಾ ಹಬ್ಬದ ಸಂಭ್ರಮದಲ್ಲಿ ಸೀರೆ ಹಾಗೂ ದೇಸಿ ಔಟ್‌ಫಿಟ್‌ಗಳಲ್ಲಿ ಮನಮೋಹಕವಾಗಿ ಕಾಣಿಸಿಕೊಂಡು ಸಂಭ್ರಮಿಸಿದರು. ಇನ್ನು ನಟರು ಅಷ್ಟೇ, ಸಾಂಪ್ರದಾಯಿಕ ಔಟ್‌ಫಿಟ್‌ಗಳಲ್ಲಿ ಹಬ್ಬ ಆಚರಿಸಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.
ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸುಶ್ಮಿತಾ ಸೇನ್, ಜಯಾ ಬಚ್ಚನ್, ಕಾಜೋಲ್, ಕತ್ರೀನಾ, ಶ್ರದ್ಧಾ ಕಪೂರ್, ರಾಖಿ ಸಾವಂತ್, ರಾಣಿ ಮುಖರ್ಜಿ ಸೇರಿದಂತೆ ಸಾಕಷ್ಟು ತಾರೆಯರು ಪಶ್ಚಿಮ ಬಂಗಾಳದ ದುರ್ಗಾ ಹಾಗೂ ಕಾಳಿ ಮಾತಾ ಜೀ ಕಿ ಚೌಕಿ ಹಾಗೂ ಪೆಂಡಾಲ್‌ಗಳಲ್ಲಿನ ಪೂಜಾ ಕಾರ್ಯಕ್ರಮಗಳಲ್ಲಿ, ಕಂಪ್ಲೀಟ್ ಜರತಾರಿ ಸೀರೆಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಇಂಡಿಯನ್ ಡಿಸೈನರ್ಸ್ ಲೀಗ್‌ನಲ್ಲಿ ಮಾಡೆಲ್‌ಗಳೊಂದಿಗೆ ಸೆಲೆಬ್ರಿಟಿ ಡಾಗ್ ಹೈದರ್ ರ‍್ಯಾಂಪ್ ವಾಕ್