Site icon Vistara News

Independence Day 2023 : ಖಾದಿ-ಕಾಟನ್‌-ತ್ರಿವರ್ಣ ಶೇಡ್‌ನ ದೇಸಿ ಉಡುಗೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮಿಸಿದ ಸೆಲೆಬ್ರಿಟಿಗಳು

Stars Desi Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಲಿಗೆಂಟ್‌ ಲುಕ್‌ ನೀಡುವ ಖಾದಿ-ಕಾಟನ್‌ ಹಾಗೂ ತ್ರಿವರ್ಣ ಶೇಡ್‌ನ ಡೀಸೆಂಟ್‌ ದೇಸಿ ಉಡುಗೆಗಳನ್ನು ಧರಿಸಿದ ಸೆಲೆಬ್ರೆಟಿಗಳು ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ನೋಡಲು ಹಿತ-ಮಿತವೆನಿಸುವ ಸಿಂಪಲ್‌ ಔಟ್‌ಫಿಟ್‌ಗಳು (republic day outfit) ಸೆಲೆಬ್ರಿಟಿಗಳನ್ನು ಆಕರ್ಷಕವಾಗಿ ಬಿಂಬಿಸಿತ್ತು. ಜೊತೆಗೆ ರಾಷ್ಟ್ರಪ್ರೇಮ ಬಿಂಬಿಸುವ ಈ ಔಟ್‌ಫೀಟ್‌ಗಳು ಅಭಿಮಾನಿಗಳು ಹಾಗೂ ಫ್ಯಾನ್‌ ಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಅಮೂಲ್ಯ, ನಟಿ

ಬಾಲಿವುಡ್‌ ಸೆಲೆಬ್ರಿಟಿಗಳ ಔಟ್‌ಫಿಟ್ಸ್

ರಾಷ್ಟ್ರಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಾಗಲಿ, ಮೊದಲು ಔಟ್‌ಫಿಟ್‌ ಹಾಗೂ ಎಲಿಗೆಂಟ್‌ ಡ್ರೆಸ್‌ಕೋಡ್‌ನಲ್ಲಿ ಮೊದಲ ಸ್ಥಾನ ಬಾಲಿವುಡ್ಡಿಗರಿಗೆ ಸಲ್ಲುತ್ತದೆ. ಯಾಕೆಂದರೇ, ಎಲ್ಲಿಯೂ ಅವರು ಮುಜುಗರಕ್ಕಿಡಾಗುವ ಡ್ರೆಸ್‌ಕೋಡ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ತಮ್ಮ ಶೂಟಿಂಗ್‌ ಸೆಟ್‌ ಇಲ್ಲವೇ ತಮ್ಮ ಮನೆ ಅಥವಾ ಸಭೆ-ಸಮಾರಂಭಗಳಲ್ಲಿ ಈ ಸಂದರ್ಭಕ್ಕೆ ಸೂಟ್‌ ಆಗುವಂತಹ ಉಡುಪುಗಳಲ್ಲೆ ಕಾಣಿಸಿಕೊಳ್ಳುತ್ತಾರೆ. ಇದು ಇತರರಿಗೂ ಮಾದರಿಯಾಗುವಂತಿರುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಖಾದಿ-ಕಾಟನ್‌-ತ್ರಿವರ್ಣ ಶೇಡ್‌ ಔಟ್‌ಫಿಟ್‌ಗಳ ಸಮಾಗಮ

ರಾಷ್ಟ್ರ ಪ್ರೇಮ ಬಿಂಬಿಸುವ ಔಟ್‌ಫಿಟ್‌ಗಳಲ್ಲಿ (republic day outfit) ಇದೀಗ ಸೆಲೆಬ್ರಿಟಿಗಳು ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಿರುವುದು ಖಾದಿ-ಕಾಟನ್‌ ಹಾಗೂ ತ್ರಿವರ್ಣ ಶೇಡ್‌ನ ಉಡುಪುಗಳಿಗೆ. ಮೊದಲೆಲ್ಲಾ ಒಂದೇ ಬಗೆಯ ಕುರ್ತಾ, ಬಂದಗಾಲ ಹಾಗೂ ಜುಬ್ಬಾ-ಪೈಜಾಮದಂತಹ ಉಡುಪುಗಳಿಗೆ ನಟರು ಪ್ರಾಮುಖ್ಯತೆ ನೀಡಿದರೇ, ನಟಿಯರು ಸೀರೆ ಹಾಗೂ ಚೂಡಿದಾರ್‌, ಸಲ್ವಾರ್‌ ಸೂಟ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಇದೀಗ ಕಾಲ ಬದಲಾಗಿದೆ. ದೇಸಿ ಉಡುಪುಗಳಲ್ಲೆ ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸುವುದು ಹೆಚ್ಚಾಗಿದೆ.

ಕುನಾಲ್‌ ಕಪೂರ್‌, ನಟ

ಹೀಗಿತ್ತು ತಾರೆಯರ ಔಟ್‌ಫಿಟ್ಸ್

ಕಾಜೋಲ್‌, ಜಯಪ್ರದಾ ಸೇರಿದಂತೆ ಹಿರಿಯ ತಾರೆಯರು ತ್ರಿವರ್ಣ ಶೇಡ್‌ನ ಸೀರೆಯಲ್ಲಿ ಕಾಣಿಸಿಕೊಂಡರೆ, ರವೀನಾ, ಶಿಲ್ಪಾ ಶೆಟ್ಟಿ, ಸೋನಾಲ್‌ ಚೌಹಾನ್‌, ಮಿಪಾಲ್‌, ಪ್ರೀತಿ ಝಿಂಟಾ, ಅಹಾನಾ ಕುಮ್ರಾ ಸೇರಿದಂತೆ ಬಹಳಷ್ಟು ಮಂದಿ ಮಿಕ್ಸ್‌ ಮ್ಯಾಚ್‌ ಮಾಡಿದ ಉಡುಪುಗಳಲ್ಲಿ ಕಾಣಿಸಿಕೊಂಡರು. ಆಯುಷ್ಮಾನ್‌, ಅರ್ಜುನ್‌ ರಾಮ್‌ಪಾಲ್‌, ಅಕ್ಷಯ್‌ ಕುಮಾರ್‌, ಕುನಾಲ್‌, ಸಂಜಯ್‌ ಕಪೂರ್‌ ಸೇರಿದಂತೆ ನಾನಾ ನಟರು ತ್ರಿವರ್ಣ ಶೇಡ್‌ನ ಉಡುಪು ಇಲ್ಲವೇ ಬ್ಯಾಡ್ಜ್‌ ಧರಿಸಿ, ಸಂಭ್ರಮಿಸಿದರು. ಕೆಲವರು ತಮ್ಮ ಮುಂದಿನ ಚಿತ್ರದ ಪೋಸ್ಟರ್‌ನಲ್ಲೆ ಬಾವುಟ ಹಿಡಿದಿರುವಂತೆ ತೋರ್ಪಡಿಸಿಕೊಂಡರು.

ಶ್ವೇತ ಕುರ್ತಾದಲ್ಲಿ ತಾರಾ.

ಕಿರುತೆರೆ-ಬೆಳ್ಳಿತೆರೆ ತಾರೆಯರ ಔಟ್‌ಫಿಟ್ಸ್‌

ಹಿರಿಯ ನಟಿ ತಾರಾ ಅವರು ಶ್ವೇತ ವರ್ಣದ ಕುರ್ತಾದಲ್ಲಿ, ನಟಿ ಅಮೂಲ್ಯ ಶ್ವೇತವರ್ಣದ ಸಲ್ವಾರ್‌ ಸೂಟ್‌ನಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡರೇ, ಕಿರುತೆರೆಯ ನಿಶಾ, ದೀಪಿಕಾ ದಾಸ್‌, ಮೇಘಾ, ಭೂಮಿ, ಸುಷ್ಮಾ ಶೇಖರ್‌ ಸೇರಿದಂತೆ ಹಲವರು ಎಥ್ನಿಕ್‌ ಔಟ್‌ಫಿಟ್‌ಗಳಲ್ಲಿ (republic day outfit) ಕಾಣಿಸಿಕೊಂಡು ಸಂಭ್ರಮಿಸಿದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Republic day Men’s Fashion : ಗಣರಾಜ್ಯೋತ್ಸವದ ಸಂಭ್ರಮಕ್ಕೆ ಲಗ್ಗೆ ಇಟ್ಟ ಮೆನ್ಸ್ ಕಾಲರ್‌ ಕುರ್ತಾ ಫ್ಯಾಷನ್‌

Exit mobile version