Site icon Vistara News

Stars Fashion | ಲಂಗ-ದಾವಣಿ-ಸೀರೆಯ ಟ್ರೆಡಿಷನಲ್‌ ಲುಕ್‌ನಲ್ಲಿ ಕಂಗೊಳಿಸಿದ ನಟಿಯರು

Stars Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಂಕ್ರಾಂತಿ ಹಬ್ಬದಂದು ಪಕ್ಕಾ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿದ ತಾರೆಯರು ಅತ್ಯಾಕರ್ಷಕವಾಗಿ ಕಾಣುತ್ತಿದ್ದರು. ಕೆಲವರು ಸೀರೆಯಲ್ಲಿ ಥೇಟ್‌ ಗೌರಮ್ಮನಂತೆ ಸಿಂಗಾರಗೊಂಡಿದ್ದರೆ, ಇನ್ನು ಕೆಲವರು ಹಾಫ್‌ ಸೀರೆ, ದಾವಣಿ-ಲಂಗ ಹಾಗೂ ಟ್ರೆಡಿಷನಲ್‌ ವೇರ್‌ನಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದರು.

ರಾಗಿಣಿ ದ್ವಿವೇದಿ, ನಟಿ

ಸೀರೆಯಲ್ಲಿ ಮಿಂಚಿದ ನಟಿಯರು

ಹಬ್ಬದ ರಂಗು ಹೆಚ್ಚಿಸುವ ರೇಷ್ಮೆ ಸೀರೆ ಹಾಗೂ ಡಿಸೈನರ್‌ ಸೀರೆಗಳಲ್ಲಿ ಸ್ಯಾಂಡಲ್‌ವುಡ್‌ ನಟಿಯರು ಮಾತ್ರವಲ್ಲ, ಸಾಕಷ್ಟು ಸೌತ್‌ ಇಂಡಿಯನ್‌ ನಟಿಯರು ಕೂಡ ಮಿಂಚಿದರು. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ತಮ್ಮ ಹಬ್ಬದ ಸೀರೆಯ ಚಿತ್ರಗಳನ್ನು ಹಂಚಿಕೊಂಡರು. ಕೆಲವು ನಟಿಯರು ರೇಷ್ಮೆ ಸೀರೆಯಲ್ಲಿ ಸೀರೆ ಪ್ರೇಮ ಮೆರೆದರು. ಇದಕ್ಕೆ ಸಾಕ್ಷಿಎಂಬಂತೆ, ನಟಿ ಸಪ್ತಮಿ ಗೌಡ, ಆಶಾ ಭಟ್‌, ದೀಪಿಕಾ ದಾಸ್‌, ಶುಭಾ ಪೂಂಜಾ, ಮಿಲನಾ ನಾಗರಾಜ್‌, ನಭಾ ನಟೇಶ್‌ ಸೇರಿದಂತೆ ನಾನಾ ನಟಿಮಣಿಗಳು ಆಕರ್ಷಕ ಹಬ್ಬದ ಸೀರೆಯಲ್ಲಿ ಕಾಣಿಸಿಕೊಂಡು ತಾವೆಲ್ಲಾ ಸೀರೆ ಸುಂದರಿಯರು ಎಂಬುದನ್ನು ಪ್ರೂವ್‌ ಮಾಡಿದರು.

ಆಶಾ ಭಟ್‌, ನಟಿ

ಲಂಗ-ದಾವಣಿಯಲ್ಲಿ ತಾರೆಯರು

ಇನ್ನು ಟ್ರೆಡಿಷನಲ್‌ ಉಡುಗೆಯಲ್ಲಿ ಇದೀಗ ಟಾಪ್‌ ಸ್ಥಾನದಲ್ಲಿರುವ ಲಂಗ-ದಾವಣಿ ಇದೀಗ ತಾರೆಯರ ಮೆಚ್ಚಿನ ಹಬ್ಬದ ಉಡುಪಾಗಿ ಪರಿವರ್ತನೆಯಾಗಿದೆ. ಅಷ್ಟು ಮಾತ್ರವಲ್ಲ, ನಟಿಯರ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ರಾಗಿಣಿ ದ್ವಿವೇದಿ ಆಕರ್ಷಕ ಡಿಸೈನರ್‌ ರೇಷ್ಮೆ ಲಂಗ-ದಾವಣಿಯಲ್ಲಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಇನ್ನು ನಟಿ ರಚನಾ ಇಂದರ್‌ ಕೂಡ ರೇಷ್ಮೆ ಲಂಗ-ದಾವಣಿಯಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವುದು ನೆಟ್ಟಿಗರನ್ನು ಸೆಳೆದಿದೆ.

ರಚನಾ ಇಂದರ್‌, ನಟಿ

ಕಿರುತೆರೆ ನಟಿಯರ ಟ್ರೆಡಿಷನಲ್‌ ಲುಕ್‌

ಇನ್ನು ಹಿರಿತೆರೆ ನಟಿಯರಿಗೆ ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಕಿರುತೆರೆ ನಟಿಯರಾದ ವೈಷ್ಣವಿ, ನಿಶಾ ಮಿಲನಾ, ಅನುಶ್ರೀ, ಮೋಕ್ಷಿತಾ ಪೈ, ಶೃತಿ ನಾಯ್ಡು ಸೇರಿದಂತೆ ಸಾಕಷ್ಟು ನಟಿಯರು ತಮ್ಮದೇ ಆದ ಭಿನ್ನ-ವಿಭಿನ್ನ ಟ್ರೆಡಿಷನಲ್‌ ಉಡುಗೆ-ತೊಡುಗೆಗಳಲ್ಲಿ ಹಬ್ಬದಂದು ಕಂಗೊಳಿಸಿ ಅಭಿಮಾನಿಗಳ ಮನಸೆಳೆದರು.

ನಭಾ ನಟೇಶ್‌, ನಟಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Sankranti Fashion | ಸಂಕ್ರಾಂತಿ ಸಂಭ್ರಮಕ್ಕೆ ಲಗ್ಗೆ ಇಟ್ಟ ಡಿಸೈನರ್‌ ಗ್ರ್ಯಾಂಡ್‌ ಟ್ರೆಡಿಷನಲ್‌ ಲಂಗ-ದಾವಣಿ

Exit mobile version