Site icon Vistara News

Stars Fashion | ಅಂಬಾನಿ ಫ್ಯಾಮಿಲಿ ಸಮಾರಂಭದಲ್ಲಿ ಗ್ರ್ಯಾಂಡ್‌ ಎಥ್ನಿಕ್‌ ವೇರ್ಸ್‌ನಲ್ಲಿ ಎಂಟ್ರಿ ಕೊಟ್ಟ ತಾರೆಯರು

Stars Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಲ್ಲಿ ಆಗಮಿಸಿದ ತಾರೆಯರ ಒಬ್ಬೊಬ್ಬರದು ಒಂದೊಂದು ಬಗೆಯ ಗ್ರ್ಯಾಂಡ್‌ ಡಿಸೈನರ್‌ವೇರ್ಸ್‌ (Grand Designerwares). ದುಬಾರಿ ಮಾತ್ರವಲ್ಲ, ಎಕ್ಸ್‌ಕ್ಲೂಸೀವ್‌ ಎಥ್ನಿಕ್‌ ಡಿಸೈನರ್‌ಗಳನ್ನು ಧರಿಸಿದ ಬಾಲಿವುಡ್‌ ತಾರೆಯರು ಅಂಬಾನಿ ಫ್ಯಾಮಿಲಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ

ನ್ಯೂ ಯಿಯರ್‌ ನಂತರ ನಡೆದ ರಾಯಲ್‌ ಫ್ಯಾಮಿಲಿಯ ಕಾರ್ಯಕ್ರಮದಲ್ಲಿ ಎಥ್ನಿಕ್‌ ಡ್ರೆಸ್‌ಕೋಡ್‌ (Ethnic dress code)ಗೆ ಆದ್ಯತೆ ನೀಡಲಾಗಿತ್ತು. ಹಾಗಾಗಿ ಸಮಾರಂಭಕ್ಕೆ ಬಂದವರೆಲ್ಲಾ ಗ್ರ್ಯಾಂಡ್‌ ಡಿಸೈನ್‌ನ ಡಿಸೈನರ್‌ವೇರ್‌ಗಳನ್ನೇ ಧರಿಸಿದ್ದರು. ನಟ-ನಟಿಯರು ಮಾತ್ರವಲ್ಲ, ರಾಜಕೀಯ ಧುರೀಣರು, ನಾನಾ ಕ್ಷೇತ್ರದ ಸೆಲೆಬ್ರಿಟಿಗಳು ಕೂಡ ಇಂಡಿಯನ್‌ವೇರ್‌ ಹಾಗೂ ಟ್ರೆಡಿಷನಲ್‌ವೇರ್‌ಗಳಲ್ಲಿ ಕಾಣಿಸಿಕೊಂಡರು.

ಮಗಳು ಆರಾಧ್ಯಳೊಂದಿಗೆ ಐಶ್ವರ್ಯಾ ರೈ

ಗ್ರ್ಯಾಂಡ್‌ ಲುಕ್‌ನಲ್ಲಿ ಕುಟುಂಬದೊಂದಿಗೆ ಸೆಲೆಬ್ರಿಟಿಗಳು

ಈ ವರ್ಣರಣಜಿತ ರಾಯಲ್‌ ಫ್ಯಾಮಿಲಿಯ ಸಮಾರಂಭದಲ್ಲಿ ನಟ-ನಟಿಯರು ತಮ್ಮ ಫ್ಯಾಮಿಲಿಯೊಂದಿಗೆ ಇಲ್ಲವೇ ಮನೆಯ ಇತರೇ ಸದಸ್ಯರೊಂದಿಗೆ ಗ್ರ್ಯಾಂಡ್‌ ಎಂಟ್ರಿ ನೀಡಿದರು. ಮೊದಲೇ ಸೆಲೆಬ್ರಿಟಿಗಳಿಗೆ ಎಥ್ನಿಕ್‌ ಲುಕ್‌ ಡ್ರೆಸ್‌ಕೋಡ್‌ ಧರಿಸುವ ಬಗ್ಗೆ ತಿಳಿಸಲಾಗಿತ್ತು.

ಸಾರಾಅಲಿಖಾನ್‌

ಸೆಲೆಬ್ರಿಟಿಗಳ ಆಕರ್ಷಕ ಡಿಸೈನರ್‌ವೇರ್ಸ್

ನಟಿ ಐಶ್ವರ್ಯಾ ರೈ ಮಗಳು ಆರಾಧ್ಯಳೊಂದಿಗೆ ಎಥ್ನಿಕ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ಮಿನುಗುತ್ತಿದ್ದರು. ಮಗಳು ವೈಟ್‌ ಗ್ರ್ಯಾಂಡ್‌ ಕಮೀಝ್‌ನಲ್ಲಿ, ಐಶ್ವರ್ಯಾ ಹಸಿರು ಗ್ರ್ಯಾಂಡ್‌ ಸಲ್ವಾರ್‌ನಲ್ಲಿ ಕಾಣಿಸಿದರು. ಇನ್ನು ಖುಷಿ ಕಪೂರ್‌ ಪರ್ಲ್ ಡಿಸೈನರ್‌ವೇರ್‌ನಲ್ಲಿ ಜಾನ್ವಿ ಪಿಸ್ತಾ ಡ್ರೆಸ್‌ನಲ್ಲಿ ಮಿಂಚಿದರು. ಕತ್ರೀನಾ ಡಿಸೈನರ್‌ ವೈಟ್‌ ಉಡುಪಿನಲ್ಲಿದ್ದರು. ನಿರ್ದೇಶಕ ಬೋನಿ ಕಪೂರ್‌ ಹಾಗೂ ನಟ ಅರ್ಜುನ್‌ ಕಪೂರ್‌ ಪರ್ಪಲ್‌ ಶೇಡ್‌ನ ಮೇನ್ಸ್‌ ಡಿಸೈನರ್‌ವೇರ್‌ನಲ್ಲಿದ್ದರು.

ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌ ಸಿಂಪಲ್‌ ಟ್ರೆಡಿಷನಲ್‌ವೇರ್‌ನಲ್ಲಿದ್ದರು. ಹಿರಿಯ ನಟಿ ನೀತು ಕೂಡ ಡಾರ್ಕ್ ಶೇಡ್‌ನ ಪರ್ಪಲ್‌ ಹಾಗೂ ಬ್ಲೂ ಕಾಂಬಿನೇಷನ್‌ನ ಸಲ್ವಾರ್‌ ಸೂಟ್‌ನಲ್ಲಿದ್ದರು. ಗಾಯಕಿ ಶ್ರೇಯಾ ಘೋಷಾಲ್‌ ತ್ರೀ ಪೀಸ್‌ ಗ್ರ್ಯಾಂಡ್‌ ಶರಾರ, ನಟಿ ಸಾರಾ, ಅನನ್ಯಾ, ಕತ್ರೀನಾ ಕಂಪ್ಲೀಟ್‌ ಐವರಿ ವರ್ಣದ ಗ್ರ್ಯಾಂಡ್‌ ಉಡುಪಿನಲ್ಲಿ ಹೆಜ್ಜೆ ಹಾಕಿದರು. ದೀಪಿಕಾ ಪಡುಕೋಣೆ ರೆಡ್‌ ಡಿಸೈನರ್‌ ಸೀರೆ ಹಾಗೂ ರಣವೀರ್‌ ಸಿಂಗ್‌ ಬ್ಲಾಕ್‌ ತ್ರೀ ಪೀಸ್‌ ಬ್ಲೂ ಹಾಗೂ ಬ್ಲಾಕ್‌ ಬಂದಗಾಲ ಸೂಟ್‌ನಲ್ಲಿ ಜೊತೆಜೊತೆಯಾಗಿ ಹೆಜ್ಜೆ ಹಾಕಿದರು. ವರುಣ್‌ ಧವನ್‌ ಕೂಡ ತ್ರೀ ಪೀಸ್‌ ವೇಸ್‌ಕೋಟ್‌ನ ಕುರ್ತಾ ಹಾಗೂ ಪತ್ನಿ ಪಿಂಕ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರು. ಕಿರಣ್‌ರಾವ್‌ ಜಾಕೆಟ್‌ ಟಿಶ್ಯೂ ಸೀರೆಯಲ್ಲಿ ಆಗಮಿಸಿದ್ದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿStar fashion | ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಮನಗೆದ್ದ ನಟಿ ಶ್ರುತಿ ಹಾಸನ್‌ ಇಂಡೋ – ವೆಸ್ಟರ್ನ್ ಸೀರೆ ಸ್ವಾಗ್‌ |

Exit mobile version