Site icon Vistara News

Stars Holiday Fashion | ಹೊಸ ವರ್ಷದ ಆರಂಭದಲ್ಲೆ ಹಾಲಿಡೇ ಫ್ಯಾಷನ್‌ ಟ್ರೆಂಡಿಯಾಗಿಸಿದ ಬಾಲಿವುಡ್‌ ತಾರೆಯರು

Stars Holiday Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೊಸ ವರ್ಷದ ಆರಂಭದಲ್ಲೆ ಹಾಲಿಡೇ ಫ್ಯಾಷನ್‌ವೇರ್‌ಗಳನ್ನು ಬಾಲಿವುಡ್‌ ತಾರೆಯರು ಟ್ರೆಂಡಿಯಾಗಿಸಿದ್ದಾರೆ. ಅವರು ಧರಿಸಿರುವ ಹಾಲಿಡೇ ಔಟ್‌ಫಿಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಸದ್ದು ಮಾಡಿರುವುದಲ್ಲ, ಫ್ಯಾಷನ್‌ ಪ್ರಿಯರನ್ನೂ ಸೆಳೆದಿವೆ. ದಿನ ಕಳೆದಿಲ್ಲ, ಆಗಲೇ ರಿಪ್ಲಿಕಾ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ.

ಹಾಲಿಡೇ ಫ್ಯಾಷನ್‌ ಟ್ರೆಂಡ್‌ ಸೆಟ್ಟರ್ಸ್

ಅಂದಹಾಗೆ, ಕಳೆದ ಕ್ರಿಸ್ಮಸ್‌ನಿಂದಲೇ ಎಲ್ಲೆಡೆ ಹಾಲಿಡೇಯ ರಂಗು ಬಾಲಿವುಡ್‌ನಲ್ಲಿ ಹೆಚ್ಚಾಗಿತ್ತು. ಇದರ ನಂತರ ಸಾಕಷ್ಟು ಬಾಲಿವುಡ್‌ ತಾರೆಯರು ಹೊಸ ವರ್ಷದ ಸಂಭ್ರಮವನ್ನು ಔಟಿಂಗ್‌ ಹಾಗೂ ವಿದೇಶ ಪ್ರವಾಸಗಳಲ್ಲಿ ಕಳೆದಿದ್ದಾರೆ. ಇದಕ್ಕೆ ಪೂರಕವಾಗುವಂತೆ, ತಾವು ಹೋಗುತ್ತಿರುವ ಹಾಲಿ ಡೇ ಸ್ಪಾಟ್‌ಗಳಿಗೆ ಸೂಟ್‌ ಆಗುವಂತೆ ಡಿಸೈನರ್‌ವೇರ್‌ ಹಾಗೂ ಔಟ್‌ಫಿಟ್‌ಗಳನ್ನು ಮ್ಯಾಚ್‌ ಮಾಡಿ ಧರಿಸಿದ್ದಾರೆ. ಅವರ ಒಂದೊಂದು ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಸಾಥ್‌ ನೀಡಿದ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ. ಫ್ಯಾಷನ್‌ ಪ್ರೇಮಿಗಳನ್ನು ಸೆಳೆದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಉದಾಹರಣೆಗೆ, ಚಳಿ ಹೆಚ್ಚಿರುವ ಪ್ರದೇಶಕ್ಕೆ ಹೋಗಿರುವ ತಾರೆಯರು ಕಂಪ್ಲೀಟ್‌ ಲೇಯರ್‌ ಲುಕ್‌ ನೀಡುವ ವಿಂಟರ್‌ವೇರ್‌ಗಳನ್ನು ಧರಿಸಿ ಸಂಭ್ರಮಿಸಿದ್ದಾರೆ. ಇನ್ನು ಸುಡು ಬಿಸಿಲಿರುವ ಬೀಚ್‌ಸೈಡ್‌ಗೆ ಹೋಗಿರುವಂಥವರು ಬಿಕಿನಿ ಸೂಟ್‌, ಬಿಕಿನಿ ಫ್ರಾಕ್‌ ಹಾಗೂ ಬರ್ಮುಡಾಗಳಲ್ಲಿ ಸಂಭ್ರಮಿಸಿದ್ದಾರೆ. ಒಂದಕ್ಕೊಂದು ತದ್ವಿರುದ್ಧ ಫ್ಯಾಷನ್‌ ಇದಾದರೂ ಆಯಾ ಪ್ರದೇಶದ ಸೀಸನ್‌ಗೆ ತಕ್ಕಂತಿರುವ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಇದು ಟ್ರೆಂಡ್‌ ಕ್ರಿಯೇಟ್‌ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ರಿಯಾ.

ಟ್ರೆಂಡಿಯಾಗಿಸಿದ ಔಟ್‌ಫಿಟ್‌ಗಳು

ಅತಿ ಹೆಚ್ಚು ಗಮನ ಸೆಳೆದ ತಾರೆಯರ ಔಟ್‌ಫಿಟ್‌ಗಳೆಂದರೇ ವರುಣ್‌ ಧವನ್‌, ಅರ್ಜುನ್‌ ಕಪೂರ್‌- ಮಲೈಕಾ, ವಿಕ್ಕಿ ಕೌಶಲ್‌-ಕತ್ರೀನಾ ಕೈಫ್‌, ರಾಜ್‌ ಕುಮಾರ್‌ ರಾವ್‌- ಪತ್ರಲೇಖಾ, ಕರೀನಾ-ಸೈಫ್‌, ಗುಲ್‌ಪನಾಗ್‌, ಶಿಲ್ಪಾ ಶೆಟ್ಟಿ-ಶಮಿತಾ ಶೆಟ್ಟಿ ಜೋಡಿ ಧರಿಸಿದ ವಿಂಟರ್‌ ಕೋಟ್‌ ಜಾಕೆಟ್‌ ಔಟ್‌ಫೀಟ್ಸ್‌, ಬೀಚ್‌ಸೈಡ್‌ನಲ್ಲಿ ಅನನ್ಯಾ ಪಾಂಡೆ ಹಾಗೂ ಕೃತಿ ಸನೂನ್‌ ಬಿಕಿನಿಗೆ ಮ್ಯಾಚ್‌ ಮಾಡಿದ ಡೆನಿಮ್‌ ಶಾಟ್ರ್ಸ್, ಕಶಿಕಾ ಕಪೂರ್‌, ರಶ್ಮಿಕಾ, ಪ್ರಿಯಾ ವಾರಿಯರ್‌ರ ಗ್ಲಾಮರಸ್‌ ಔಟ್‌ಫಿಟ್ಸ್‌. ಹೀಗೆ ನಾನಾ ಬಾಲಿವುಡ್‌ ಹಾಗೂ ಪ್ಯಾನ್‌ ಇಂಡಿಯಾ ತಾರೆಯರ ಹಾಲಿಡೇ ಔಟ್‌ಫಿಟ್‌ಗಳು ಕೇವಲ ಸೋಷಿಯಲ್‌ ಮೀಡಿಯಾದಲ್ಲಿ ಹಂಗಾಮಾ ಎಬ್ಬಿಸಿರುವುದು ಮಾತ್ರವಲ್ಲ, ಈ ಸೀಸನ್‌ನ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡ್‌ ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರವಹಿಸಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ತಾರೆಯರ ಔಟ್‌ಫಿಟ್‌ಗಳ ರಿಪ್ಲಿಕಾ

ಹೌದು, ತಾರೆಯರ ಔಟ್‌ಫಿಟ್‌ಗಳನ್ನು ಸಾಮಾನ್ಯ ಹುಡುಗಿಯರು ಸೇಮ್‌ ಟು ಸೇಮ್‌ ರಿಪ್ಲಿಕಾ ಮಾಡುವುದು ಕೂಡ ಇಂದು ಹೆಚ್ಚಾಗಿದೆ. ಇದೇ ಹಾಲಿಡೇ ಫ್ಯಾಷನ್‌ವೇರ್‌ ಟ್ರೆಂಡಿಯಾಗಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star Winter Fashion | ವಾಷಿಂಗ್ಟನ್​ನಲ್ಲಿ ನಟಿ ನೇಹಾ ಶೆಟ್ಟಿಯ ಕ್ಲಾಸಿ ವಿಂಟರ್‌ ಫ್ಯಾಷನ್‌ ಝಲಕ್‌

Exit mobile version