ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾನ್ ಫೆಸ್ಟಿವಲ್‌ನಲ್ಲಿ ನಟಿ ಊರ್ವಶಿ ರೌತೇಲಾ ಅವರ ಟೀಲ್ ಬ್ಲ್ಯೂ ಲಿಪ್‌ಸ್ಟಿಕ್ (Stars Makeup) ಇದೀಗ ನೆಟ್ಟಿಗರ ಹುಬ್ಬೇರಿಸಿದೆ. ಮಾತ್ರವಲ್ಲ, ಒಂದಿಷ್ಟು ವರ್ಷಗಳ ಹಿಂದೆ ನಟಿ ಐಶ್ವರ್ಯಾ ರೈ ಹಚ್ಚಿದ್ದ ಪರ್ಪಲ್ ಲಿಪ್‌ಸ್ಟಿಕ್ ಲುಕ್ ನೆನಪಿಸಿದೆ ಎನ್ನುತ್ತಿದ್ದಾರೆ ಬ್ಯೂಟಿ ವಿಮರ್ಶಕರು. ಹೌದು. ಕಾನ್ ಫೆಸ್ಟಿವಲ್‌ನ ಮೂರನೇ ದಿನದ ಸಿನಿಮಾ ಸ್ಕ್ರೀನಿಂಗ್ ಸಮಯದಲ್ಲಿ, ಡಿಸೈನರ್ ಗೌನ್‌ನೊಂದಿಗೆ ಊರ್ವಶಿ ರೌತೇಲಾ ಮ್ಯಾಚ್ ಮಾಡಿದ್ದ, ಮುಖಕ್ಕೆ ಎದ್ದು ಕಾಣುವ ಟೀಲ್ ಬ್ಲ್ಯೂ ಲಿಪ್‌ಸ್ಟಿಕ್ ಸದ್ಯಕ್ಕೆ ಪ್ರಯೋಗಾತ್ಮಕ ಲಿಪ್ ಮೇಕಪ್‌ಗೆ ನಾಂದಿ ಹಾಡಿದೆ.
ನೆನಪಿಸಿದ ಐಶ್ವರ್ಯಾ ರೈ ಪರ್ಪಲ್ ಲಿಪ್‌ಸ್ಟಿಕ್
ಅಂದಹಾಗೆ, ಈ ರೀತಿ ಎದ್ದು ಕಾಣುವ ಅಥವಾ ವೈಬ್ರೆಂಟ್ ಅಥವಾ ಸಾಮಾನ್ಯ ವರ್ಣವಲ್ಲದ ಶೇಡ್‌ನ ಲಿಪ್‌ಸ್ಟಿಕ್ ಧರಿಸಿ ಸುದ್ದಿ ಮಾಡಿರುವುದು ಕೇವಲ ನಟಿ ಊರ್ವಶಿ ರೌತೇಲಾ ಅಲ್ಲ, ಬಹಳಷ್ಟು ವರ್ಷಗಳ ಹಿಂದೆ ನಟಿ ಐಶ್ವರ್ಯಾ ರೈ ಕೂಡ ತಮ್ಮ ಔಟ್‌ಫಿಟ್ ಜೊತೆ ಪರ್ಪಲ್ ಲಿಪ್‌ಸ್ಟಿಕ್ ಹಚ್ಚಿದ್ದರು. ಇದು ಯಾವ ಮಟ್ಟಿಗೆ ಸುದ್ದಿಯಾಗಿತ್ತೆಂದರೆ, ಬಹಳಷ್ಟು ದಿನಗಳ ಕಾಲ ಬ್ಯೂಟಿ ಲೋಕದಲ್ಲಿ ಹಂಗಾಮ ಎಬ್ಬಿಸಿತ್ತು. ಜೊತೆಗೆ ಪ್ರಯೋಗಾತ್ಮಕ ಲಿಪ್ ಮೇಕಪ್ ಮಾಡುವವರ ಪಾಲಿಗೆ ವರದಾನವಾಗಿತ್ತು. ಹೊಸದೊಂದು ಬೆಳವಣಿಗೆಗೆ ದಾರಿ ಮಾಡಿ ಕೊಟ್ಟಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪ್ರಯೋಗಾತ್ಮಕ ಲಿಪ್‌ಶೇಡ್
ಐಶ್ವರ್ಯಾ ರೈ ತದನಂತರ ಒಮ್ಮೆಯೂ ಈ ಪ್ರಯೋಗಾತ್ಮಕಲಿಪ್‌ಸ್ಟಿಕ್ ಹಚ್ಚಲೇ ಇಲ್ಲ! ಸಾಮಾನ್ಯ ಜನರು ಕೂಡ ಈ ಬಣ್ಣದ ಲಿಪ್‌ಸ್ಟಿಕ್ ಇದೆ ಎಂಬುದನ್ನು ಮನಗಾಣಿದ್ದು ಅದೇ ಸಮಯದಲ್ಲಿ. ಹೇಗೆಲ್ಲಾ ಮೇಕಪ್‌ನಲ್ಲಿ ಲಿಪ್‌ಶೇಡ್ ಪ್ರಯೋಗ ಮಾಡಬಹುದು ಎಂಬುದನ್ನು ಫ್ಯಾಷನ್ ಲೋಕಕ್ಕೆ ತಿಳಿಸಿಕೊಟ್ಟದ್ದು ಅವರೇ ಎನ್ನಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್. ಇದೀಗ ಊರ್ವಶಿ ರೌತೇಲಾ ಹಚ್ಚಿರುವ ಈ ಟೀಲ್ ಬ್ಲ್ಯೂ ಲಿಪ್‌ಸ್ಟಿಕ್ ನೆಟ್ಟಿಗರ ಇಲ್ಲಸಲ್ಲದ ಕಾಮೆಂಟ್‌ಗಳಿಗೆ ಗುರಿಯಾಗಿರುವುದು ಮಾತ್ರವಲ್ಲ, ಹೊಸ ಪ್ರಯೋಗಾತ್ಮಕ ಲಿಪ್‌ಶೇಡ್‌ಗೆ ನಾಂದಿ ಹಾಡಿದೆ. ಹೊಸತನ್ನು ಬಯಸುವ ಮೇಕಪ್ ಪ್ರಿಯರಿಗೆ ಮಾರ್ಗದರ್ಶನ ನೀಡಿದಂತಾಗಿದೆ. ಇಂತಹ ಬೋಲ್ಡ್ ಅನ್‌ಕಾಮನ್ ಲಿಪ್‌ಶೇಡ್‌ಗಳು ನೋಡುಗರ ಹುಬ್ಬೇರಿಸುವುದರೊಂದಿಗೆ ಬೋಲ್ಡ್ ಹುಡುಗಿಯರಿಗೆ ಹೊಸ ಬಗೆಯ ಲಿಪ್ ಮೇಕಪ್ ಟ್ರೈ ಮಾಡಲು ಅವಕಾಶ ಮಾಡಿಕೊಡುತ್ತವೆ ಎನ್ನುತ್ತಾರೆ ಮೇಕಪ್ ತಜ್ಞರು.
ಕೇವಲ ಔಟ್‌ಫಿಟ್‌ನಿಂದ ಕಾನ್ ಫೆಸ್ಟಿವಲ್‌ನಲ್ಲಿ ಗಮನ ಸೆಳೆಯುತ್ತಿದ್ದ ನಟ-ನಟಿಯರ ನಡುವೆ ಊರ್ವಶಿ ರೌತೇಲಾ ಕೇವಲ ಲಿಪ್‌ಶೇಡ್‌ನಿಂದ ಪ್ರಪಂಚದಾದ್ಯಂತ ಸುದ್ದಿಯಾಗಿದ್ದು, ವಿಶೇಷವಿಲ್ಲದೇ ಮತ್ತೇನು ಎನ್ನುತ್ತಿದ್ದಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Mehndi Fashion : ವೆಡ್ಡಿಂಗ್ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿದೆ ಕಥೆ ಹೇಳುವ ಬ್ರೈಡಲ್ ಮೆಹಂದಿ ಡಿಸೈನ್ಸ್