ಬಹಳಷ್ಟು ಸಾರಿ ನಾವು ರುಚಿಕರ ಅಡುಗೆ ಮಾಡುವ ಬಗೆಬಗೆಯ ರೆಸಿಪಿಗಳನ್ನು (Food recipes) ಯುಟ್ಯೂಬ್ ಚಾನಲ್‌ಗಳಲ್ಲಿ ಅಥವಾ ಇತರ ಆನ್‌ಲೈನ್ ವೇದಿಕೆಗಳಲ್ಲಿ ಕಲಿಯುವ (kitchen tips) ಮೂಲಕ ಆರೋಗ್ಯಕರವಾದ (Healthy cooking) ಎಷ್ಟೋ ಅಡುಗೆ ವಿಧಾನಗಳನ್ನೇ ಮರೆತುಬಿಡುತ್ತೇವೆ. ಪರಂಪರಾಗತ ವಿಧಾನಗಳನ್ನು ಮೂಲೆಗೆ ತಳ್ಳಿ, ಫಟಾಪಟ್ ಅಡುಗೆ ಮಾಡುವ ಭರದಲ್ಲಿ ದೇಹಕ್ಕೆ ಹಿತಕರ ಹಾಗೂ ಆರೋಗ್ಯಕರವಲ್ಲದ ವಿಧಾನಗಳಿಗೆ ಜೋತುಬೀಳುತ್ತೇವೆ. ನಾಲಿಗೆಗೆ ರುಚಿಯಾಗಿ ಕಾಣುವ ದಿಢೀರ್ ಆಗುವ ಪ್ರತಿಯೊಂದೂ ಕೂಡಾ ನಮಗೆ ಅದ್ಭುತವೇ. ಆದರೆ, ಈ ಹಾದಿಯಲ್ಲಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ (Unhealthy practices) ಎಂಬ ಅರಿವು ನಮಗಿದೆಯೇ? ಹಾಗಿಲ್ಲದಿದ್ದರೆ, ನಾವೇ ಮರೆತಿರುವ ಹಬೆಯಲ್ಲಿ ಬೇಯಿಸುವ (steaming) ಹಳೆಯ ವಿಧಾನಕ್ಕೊಮ್ಮೆ ಹೋಗಿ ಇಣುಕಿ ನೋಡಬೇಕು. ಆಗ ಆ ವಿಧಾನದಲ್ಲಿರುವ ಆರೋಗ್ಯ (steam cooking health benefits) ನಮ್ಮ ಅರಿವಿಗೆ ಬಂದೀತು. ಬನ್ನಿ, ಹಬೆಯಲ್ಲಿ ಆಹಾರವನ್ನು ಬೇಯಿಸುವುದರಿಂದ ಆಗುವ ಪ್ರಯೋಜನಗಳನ್ನು (steam cooking benefits) ತಿಳಿಯೋಣ.
1. ಪೋಷಕಾಂಶಗಳು ನಷ್ಟವಾಗುವುದಿಲ್ಲ: ನಾವು ಮಾಡುವ ಅಡುಗೆ ರುಚಿಯಾಗಿರಲು ನಾವು ಬೇರೆ ಬೇರೆ ರೆಸಿಪಿಗಳನ್ನು ಟ್ರೈ ಮಾಡುತ್ತೇವೆ. ಕೆಲವೊಂದು ಅಡುಗೆಗಳಲ್ಲಿ ಎಣ್ಣೆಯಲ್ಲಿ ಕರಿಯುವ ವಿಧಾನವಿರಬಹುದು, ಅಥವಾ ಕಾವಲಿಯಲ್ಲಿ ಎಣ್ಣೆ ಸುರಿದು ಕಡಿಮೆ ಎಣ್ಣೆ ಬಳಸಿ ಶಾಲೋ ಫ್ರೈ ಮಾಡುವ ವಿಧಾನವಿರಬಹುದು, ಇನ್ನೂ ಕೆಲವು ಅಡುಗೆಗಗಳಲ್ಲಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದನ್ನು ಮಾಡಬಹುದು. ಹೀಗೆ ಎಲ್ಲ ಅಡುಗೆಗಳಲ್ಲೂ ಕೆಲವೊಂದು ವಿಧಾನಗಳನ್ನು ಬಳಸಿ ನಾವು ಅಡುಗೆಯನ್ನು ರುಚಿಕರವಾಗಿಸಲು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಆದರೆ, ಇವೆಲ್ಲ ವಿಧಾನಗಳಿಂದ ಆಹಾರದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ. ದೇಹಕ್ಕೆ ನಾವು ಅಂದುಕೊಂಡಷ್ಟು ಪೋಷಕಾಂಶ ಸಿಕ್ಕಿರುವುದೇ ಇಲ್ಲ. ಅದಕ್ಕೇ, ಹಬೆಯಲ್ಲಿ ಬೇಯಿಸುವ ವಿಧಾನ ಎಲ್ಲಕ್ಕಿಂತ ಅತ್ಯುತ್ತಮ.
2. ಜೀರ್ಣಕ್ರಿಯೆಗೆ ಅತ್ಯುತ್ತಮ: ಜೀರ್ಣಾಂಗವ್ಯೂಹಕ್ಕೆ ಸರಳವಾಗಿರುವ ಆಹಾರ ಬೇಕು. ಕ್ಲಿಷ್ಟಕರ ಆಹಾರವನ್ನು ಕರಗಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಎಣ್ಣೆಯಲ್ಲಿ ಕರಿದ ಇತ್ಯಾದಿ ಆಹಾರಗಳಲ್ಲಿ ಜಿಡ್ಡಿನಂಶವೂ ಸೇರಿ ಸರಳ ಆಹಾರ ಕ್ಲಿಷ್ಟಕರವಾದ ಹಾದಿಯತ್ತ ಹೊರಳಿರುತ್ತದೆ. ಆದರೆ, ಹಬೆಯಲ್ಲಿ ಬೇಯಿಸಿದ ಆಹಾರದಲ್ಲಿ ಎಣ್ಣೆಯಂಶವಾಗಲೀ, ಅತಿಯಾದ ಮಸಾಲೆಯಾಗಲೀ ಇಲ್ಲವಾಗಿರುವುದರಿಂದ ಇವು ಸುಲಭವಾಗಿ ಜೀರ್ಣವಾಗುತ್ತದೆ.
3. ಕೊಲೆಸ್ಟೆರಾಲ್ ಹತೋಟಿ: ನಿಮ್ಮ ದೇಹದಲ್ಲಿರುವ ಕೊಲೆಸ್ಟೆರಾಲ್ ಬಗೆಗೆ ನೀವು ನಿಜಕ್ಕೂ ಚಿಂತಿತರಾಗಿದ್ದೀರಿ ಅಥವಾ ಕಾಳಜಿ ಮಾಡುತ್ತೀರಿ ಎಂದಾದಲ್ಲಿ, ನೀವು ಆಹಾರವನ್ನು ಸ್ಟೀಮ್ ಮಾಡುವುದು ಅಂದರೆ ಹಬೆಯಲ್ಲಿ ಬೇಯಿಸುವ ವಿಧಾನವನ್ನು ಆಯ್ಕೆ ಮಾಡುತ್ತೀರಿ. ಯಾಕೆಂದರೆ, ಇದರಲ್ಲಿ ಹೆಚ್ಚುವರಿ ಎಣ್ಣೆ, ಜಿಡ್ಡು ಇತ್ಯಾದಿಗಳ ಅಗತ್ಯ ಬೀಳುವುದಿಲ್ಲವಾದ್ದರಿಂದ ಕೊಲೆಸ್ಟೆರಾಲ್ ಹತೋಟಿಯಲ್ಲಿರುತ್ತದೆ. ರಕ್ತದೊತ್ತಡವೂ ಸಮತೋಲನಕ್ಕೆ ಬರುತ್ತದೆ.
4. ರುಚಿಕರವೂ ಹೌದು: ಹಬೆಯಲ್ಲಿ ಬೇಯಿಸಿದ ತಿನಿಸನ್ನು ತಿಂದು ನೋಡಿ. ಎಷ್ಟು ರುಚಿಯಾಗಿರುತ್ತದೆ ಅಲ್ಲವೇ? ಹಣ್ಣುಗಳು, ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿದರಂತೂ ರುಚಿಯಲ್ಲಿ ಅಮೋಘವಾಗಿರುತ್ತವೆ. ಇದರಲ್ಲಿರುವ ಪೋಷಕಾಂಶಗಳೆಲ್ಲವೂ ಅದರಲ್ಲೇ ಇರುವುದಲ್ಲದೆ, ಹಬೆಯಲ್ಲಿ ಬೇಯಿಸಿದ ಇಡ್ಲಿ, ಕಡುಬು ಮತ್ತಿತರ ಬೆಳಗ್ಗಿನ ತಿನಿಸುಗಳೂ ಕೂಡಾ ಅತ್ಯಂತ ರುಚಿಕರ ಹಾಘೂ ಅರೋಗ್ಯಕರವಾಗಿರುತ್ತದೆ.
5. ತೂಕವೂ ಇಳಿಯುತ್ತದೆ: ನೀವು ತೂಕ ಇಳಿಕೆಯ (weight loss) ಬಗ್ಗೆ ಚಿಂತೆ ಮಾಡುತ್ತೀರೆಂದಾದಲ್ಲಿ, ಖಂಡಿತವಾಗಿಯೂ ನಿಮ್ಮ ಆಹಾರಕ್ರಮದ ಬಗ್ಗೆಯೂ ಯೋಚಿಸಿರಲೇಬೇಕು. ಅವುಗಳಲ್ಲಿ ಎಲ್ಲಕ್ಕಿಂತ ಒಳ್ಳೆಯದು ಎಂದರೆ ಈ ವಿದಾನ. ಹಬೆಯಲ್ಲಿ ಬೇಯಿಸಿ ಮಾಡುವ ತಿನಿಸುಗಳು ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಕೆಗೂ ನೆರವಾಗುತ್ತದೆ.
ಹಾಗಾಗಿ, ಹಬೆಯಲ್ಲಿ ಬೇಯಿಸುವ ವಿದಾನವೇ ಒಂದು ಮ್ಯಾಜಿಕ್. ಇಲ್ಲಿ, ಜೀರ್ಣಾಂಗವ್ಯೂಹಕ್ಕೆ ಹೊರೆಯಾಗದೆ, ಆರೋಗ್ಯವಾಗಿರಲು, ಪೋಷಕಾಂಶಗಳನ್ನೂ ನಮ್ಮ ಆಹಾರದಲ್ಲಿ ನಷ್ಟ ಮಾಡಿಕೊಳ್ಳದೆ, ಕೊಲೆಸ್ಟೆರಾಲ್ ಹಾಗೂ ರಕ್ತದೊತ್ತಡಕ್ಕೂ ಸಮಸ್ಯೆ ತಂದುಕೊಳ್ಳದೆ, ತೂಕ ಇಳಿಸಿಕೊಳ್ಳುವತ್ತಲೂ ಹೆಜ್ಜೆಯಿಡಲು ನೆರವಾಗುವ ವಿಧಾನವಿದು. ಹಾಗಾಗಿ ಆದಷ್ಟೂ ಹಬೆಯಲ್ಲಿ ಬೇಯಿಸುವ ವಿಧಾನಕ್ಕೆ ಮರಳುವ ಮೂಲಕ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
ಇದನ್ನೂ ಓದಿ: Kitchen Tips : ಅಡುಗೆ ಮನೆಯಿಂದ ಜಿರಲೆಗಳನ್ನು ಓಡಿಸಬೇಕೆ? ಇಲ್ಲಿವೆ ಸರಳ ಉಪಾಯಗಳು!