ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೀಕೆಂಡ್ ಸ್ಟ್ರೀಟ್ ಶಾಪಿಂಗ್ (Street Shopping tips) ಬಹಳಷ್ಟು ಜನರಿಗೆ ಪ್ರಿಯವಾದ ಸಂಗತಿ. ಅದರಲ್ಲೂ ಕಡಿಮೆ ಬೆಲೆಗೆ ದೊರಕುವ ಉಡುಪುಗಳು, ಆಕ್ಸೆಸರೀಸ್‌ಗಳು, ಅನೇಕ ಬಗೆಯ ಗೃಹಾಲಂಕಾರದಂತಹ ಸಾಮಗ್ರಿಗಳು ಎಲ್ಲವೂ ಇಲ್ಲಿ ದೊರೆಯುತ್ತದೆ. ಬ್ರಾಂಡ್ ಬಗ್ಗೆ ತಲೆಕೆಡಿಸಿಕೊಳ್ಳದವರು, ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾದ ವಸ್ತುಗಳಿಗಾಗಿ ಈ ಬಗೆಯ ಶಾಪಿಂಗ್ ಮಾಡುವವರು ಹೆಚ್ಚು. ಹಾಗೆಂದು ಇಲ್ಲಿ ದೊರಕುವ ವಸ್ತುಗಳು ಎಲ್ಲವೂ ಕಳಪೆ ಎಂದೇನಲ್ಲ. ಗುಣ ಮಟ್ಟ ಹೆಚ್ಚು ಕಮ್ಮಿ ಇರುತ್ತದಷ್ಟೇ! ಇನ್ನು, ವೀಕೆಂಡ್‌ನಲ್ಲಿ ಸ್ಟ್ರೀಟ್ ಶಾಪಿಂಗ್ ಮಾಡುವ ಉದ್ಧೇಶವನ್ನಿಟ್ಟುಕೊಂಡವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಖರೀದಿ ಖುಷಿ ಸಂತಸ ತರುವುದಲ್ಲದೇ ಉಪಯುಕ್ತವಾಗುವುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪಟ್ರ್ಸ್ . ಈ ಕುರಿತಂತೆ ಎಕ್ಸ್‌ಪರ್ಟ್ಸ್ 5 ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಸ್ಟ್ರೀಟ್ ಶಾಪಿಂಗ್‌ನಲ್ಲಿ ಏನೇನು ಲಭ್ಯ?
ಡ್ರೆಸ್‌ಗಳು, ಆಕ್ಸೆಸರೀಸ್, ಆಕರ್ಷಕ ಜಂಕ್ ಜ್ಯುವೆಲರೀಸ್, ಫುಡ್ ಸ್ಟಾಲ್‌ಗಳು, ಹಾರ್ಡ್‌ವೇರ್/ಮೊಬೈಲ್ ಬಿಡಿ ಭಾಗಗಳು, ಬುಕ್ಸ್, ಕರಕುಶಲ ವಸ್ತುಗಳು, ಮಕ್ಕಳಿಗೆ ಬೇಕಾದ ಆಟಿಕೆಗಳು, ದಿನ ನಿತ್ಯ ಬಳಕೆಗೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಮನೆಗೆ ಬೇಕಾದ ಅಗತ್ಯವಸ್ತುಗಳು ಸೇರಿದಂತೆ ಎಲ್ಲವೂ ದೊರೆಯುತ್ತವೆ.
ಲಿಸ್ಟ್ ಮಾಡಿ ಖರೀದಿಸಿ
ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಇಲ್ಲಿ ವರ್ಕೌಟ್ ಆಗುವುದಿಲ್ಲ. ಎಷ್ಟು ಬೇಕು ಅಷ್ಟು ನಗದು ಹಣ ಬ್ಯಾಗ್‌ನಲ್ಲಿ ಇರಲೇ ಬೇಕು. ಅಗತ್ಯ ವಿರುವ ವಸ್ತುಗಳ ಲಿಸ್ಟ್ ಮೊದಲೇ ಮಾಡಿ. ಅನಗತ್ಯ ದುಂದು ವೆಚ್ಚ ಮಾಡಬೇಡಿ.
ಬೆಲೆ ತಿಳಿದುಕೊಳ್ಳಿ
ಇಲ್ಲಿ ಯಾವುದಕ್ಕೂ ಫಿಕ್ಸ್ ರೇಟ್ ಇರುವುದಿಲ್ಲ. ಚೌಕಾಸಿ ಮಾಡಬಹುದು. ಹಾಗಾಗಿ ಕೇಳಿದಷ್ಟು ಹಣ ನೀಡಿ ಮೂರ್ಖರಾಗಬೇಡಿ. ಗುಣ ಮಟ್ಟ ನೋಡಿ ಬೆಲೆ ನಿರ್ಧರಿಸಿ.
ಶಾಪಿಂಗ್ ತಾಳ್ಮೆ
ಶಾಪಿಂಗ್ ಮಾಡುವಾಗ ಸಾವಧಾನದಿಂದ ಮಾಡಿ. ಗಡಿಬಿಡಿ ಬೇಡ. ಸಾಕಷ್ಟು ಅಂಗಡಿಗಳು ಇರುವುದರಿಂದ ಒಂದಲ್ಲ ಒಂದು ಕಡೆ ನೀವು ಹುಡುಕುವ ವಸ್ತು ಸಿಗುತ್ತದೆ. ಕೊಂಚ ಹುಡುಕಾಡಿ. ಒಂದೊಂದು ಅಂಗಡಿಯಲ್ಲೂ ಒಂದೊಂದು ರೇಟ್ ಇದ್ದಲ್ಲಿ ಕಡಿಮೆ ಇರುವಲ್ಲಿ ಕೊಳ್ಳಿ. ತುಂಬಾ ಆಯಾಸವಾಗಿದ್ದಾಗ ಶಾಪಿಂಗ್ ಬೇಡ. ಮಧ್ಯೆ ಒಂದಿಷ್ಟು ತಿಂಡಿ ತಿನಿಸು ಸೇವಿಸಿ ಮುಂದುವರೆಯಬಹುದು.
ಪರಿಶೀಲಿಸಿ ಖರೀದಿಸಿ
ವಸ್ತುಗಳನ್ನು ಪರಿಶೀಲಿಸಿ ಖರೀದಿಸಿ. ಕೆಲವೊಮ್ಮೆ ಸೆಕಂಡ್ ಹ್ಯಾಂಡ್ ವಸ್ತುಗಳು ಮಾರಾಟಕ್ಕಿರುತ್ತವೆ. ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಶಾಪ್ ಆಯ್ಕೆ ಮಾಡಿ.
ಮನೆಯಿಂದ ಬ್ಯಾಗ್ ಕೊಂಡೊಯ್ಯಿರಿ
ಪ್ಲಾಸ್ಟಿಕ್ ಬ್ಯಾಗ್ ಆವಾಯ್ಡ್ ಮಾಡಿ. ಶಾಪಿಂಗ್ ಹೊರಡುವ ಮುನ್ನ ದೊಡ್ಡ ಕ್ಯಾರಿ ಬ್ಯಾಗನ್ನು ತೆಗೆದುಕೊಂಡು ಹೋಗಿ. ಸಣ್ಣ ಸಣ್ಣ ಬ್ಯಾಗ್‌ಗಳನ್ನು ಹಿಡಿದುಕೊಂಡು ಶಾಪಿಂಗ್ ಮಾಡುವ ಕಷ್ಟದಿಂದ ಪಾರಾಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Hairpin Fashion: ಹುಡುಗಿಯರ ಫಂಕಿ ಲುಕ್‌ಗೆ ಬಂತು ಜಂಕ್ ಹೇರ್ ಪಿನ್ಸ್