Site icon Vistara News

Sudha Murthy: ಸುಧಾ ಮೂರ್ತಿಯವರಿಗೆ ಮಕ್ಕಳ ಪಾಲನೆಯೆಂದರೆ ಹೀಗೆ! ಪ್ರತಿ ಪೋಷಕರೂ ಓದಲೇಬೇಕಾದ್ದಿದು!

sudha murthy with kids

ಮಕ್ಕಳನ್ನು ಹೇಗೆ ಬೆಳೆಸುವುದು (parenting) ಎಂಬುದು ಹೇಳಿ ಕೊಟ್ಟು ಕಲಿವ ವಿದ್ಯೆಯಲ್ಲ. ಅದು ಅನುಭವಿಸಿ ಪಾಲಿಸುವ ವಿದ್ಯೆ. ಅಲ್ಲಿ ಮಕ್ಕಳು ತಪ್ಪು ಮಾಡಿಕೊಂಡು ಬೆಳೆಯುವಂತೆ, ಪೋಷಕನೂ ತಪ್ಪ ಮಾಡಿಕೊಂಡೇ ಬೆಳೆಯುತ್ತಾನೆ. ಮಗುವಿಗೆ ಜಗತ್ತು ಹೇಗೆ ಹೊಸದೋ, ಪೋಷಕರಿಗೂ ಪೋಷಕರಾಗಿ ಜಗತ್ತು ಹೊಸದೇ. ಹಾಗಾಗಿ, ಈಗಾಗಲೇ ಪೋಷಕರಾಗಿ ಅನುಭವವುಳ್ಳವರ ಮಾತು (parenting guide) ಕೇಳಿಸಿಕೊಳ್ಳುತ್ತಾ, ಆದಷ್ಟೂ ಮಕ್ಕಳ ಜಗತ್ತಿನೊಳಗೆ ಹೊಕ್ಕು ನೋಡುವ ಪ್ರಯತ್ನವನ್ನು ಹೆತ್ತವರು ಮಾಡಬಹುದು. ಅನುಭವಿಗಳ ಮಾತನ್ನು ಕೇಳಿಸಿಕೊಳ್ಳಬಹುದು. ಹಾಗೆ, ಸದಾ ಇಂದಿನ ಪೋಷಕರಿಗೆ ಕಿವಿಮಾತಾಗಿ, ಸರ್ವ ಕಾಲಕ್ಕೂ ಸಲ್ಲುವ ನುಡಿಮುತ್ತುಗಳಂತಹ ಸಲಹೆಗಳನ್ನು (parenting tips) ನೀಡುವವರಲ್ಲಿ ಸುಧಾ ಮೂರ್ತಿ (Sudha murthy) ಅವರೂ ಒಬ್ಬರು. ಬನ್ನಿ, ಸುಧಾ ಮೂರ್ತಿಯವರು ಮಕ್ಕಳ ಹೆತ್ತವರಿಗೆ ಹೇಳಿದ (Sudha murthy parenting tips) ಕಿವಿಮಾತುಗಳಿವು.

1. “ನಿಮ್ಮ ಕನಸುಗಳನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ಯಾಕೆಂದರೆ ಪ್ರತಿಯೊಂದು ಮಗುವೂ ತನ್ನದೇ ಆದ ಆಕಾಂಕ್ಷೆಗಳನ್ನು ಹೊತ್ತು ಈ ಭೂಮಿಗೆ ಬಂದಿರುತ್ತದೆ.”

– ಹೌದು, ಬಹುತೇಕ ಹೆತ್ತವರು ಮಾಡುವ ತಪ್ಪಿದು. ತಮ್ಮ ಆಸೆಗಳನ್ನು ಕನಸುಗಳನ್ನು, ನನಸಾಗದ ಗುರಿಗಳನ್ನು ತಮ್ಮ ಮಕ್ಕಳ ಮೂಲಕ ನೋಡಲು, ಸಾಧಿಸಲು ಬಯಸುತ್ತಾರೆ. ಆದರೆ ಇದು ತಪ್ಪು. ಮಕ್ಕಳ ಆಸೆ, ಕನಸುಗಳಿಗೆ ಸರಿಯಾದ ಮಾರ್ಗದಲ್ಲಿ ನೀರೆರದು ಪೋಷಿಸುವುದಷ್ಟೇ ಹೆತ್ತವರಾಗಿ ನಿರ್ವಹಿಸಬಹುದಾದ ಕರ್ತವ್ಯ ಎಂದು ಪ್ರತಿಯೊಬ್ಬ ಪೋಷಕನೂ ನೆನಪಿನಲ್ಲಿಡಬೇಕು.

2. “ಹಣವಷ್ಟೇ ನಮ್ಮನ್ನು ಅಸಾಮಾನ್ಯನಾಗಿಸುವುದಿಲ್ಲ ಎಂಬುದನ್ನು ನಿಮ್ಮ ಮಕ್ಕಳಿಗೆ ಕಲಿಸಿ”

– ಒಂದು ದಿನ ಸುಧಾಮೂರ್ತಿಯವರ ಮಗ ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಪಂಚತಾರಾ ಹೊಟೇಲಿಗೆ ಹೋಗಿ ಬಂದು ಸುಧಾ ಮೂರ್ತಿಯವರಲ್ಲಿ, ತನ್ನ ಹುಟ್ಟುಹಬ್ಬಕ್ಕೂ ಅಂಥದ್ದೊಂದು ಪಾರ್ಟಿ ಮಾಡಬೇಕು ಎಂದು ಕೇಳಿದನಂತೆ. ಆಗ ಸುಧಾಮೂರ್ತಿಯವರು, ಮಗನನ್ನು ಕೂರಿಸಿಕೊಂಡು ಅಂಥ ಪಾರ್ಟಿ ಮಾಡಲು ದುಂದು ವೆಚ್ಚ ಮಾಡಬೇಕಾಗುತ್ತದೆ ಎಂದೂ, ಅದರ ಬದಲು ಆ ಹಣವನ್ನು ಅಗತ್ಯ ಇರುವವರಿಗಾದರೂ ಸಹಾಯ ಮಾಡಲು ಬಳಸಬಹುದಲ್ಲವೇ ಎಂದು ಬುದ್ಧಿ ಮಾತು ಹೇಳಿದರಂತೆ.

3. “ಮಕ್ಕಳು ಏನಾದರೂ ಬೇಡಿಕೆ ಇತ್ತರೆ, ಒಡನೆಯೇ ಹಿಂದುಮುಂದು ಯೋಚಿಸದೆ ಕೊಡಿಸಬೇಡಿ. ನಿಮ್ಮ ಮುದ್ದು, ಪ್ರೀತಿ ಎಷ್ಟೇ ಇರಲಿ, ಆದರೆ ನಿಮ್ಮ ಮಕ್ಕಳಿಗೆ ಅದರ ಅಗತ್ಯ ಈಗ ಇದೆಯೋ ಇಲ್ಲವೋ ಎಂಬುದನ್ನು ನೀವು ಲೆಕ್ಕಾಚಾರ ಹಾಕಿ, ಆಮೇಲೆ ಕೊಡಿಸಿ.”

-ಮಕ್ಕಳು ಯಾವುದೇ ವಸ್ತುವಿನ ಬೆಲೆಯನ್ನು, ಮಹತ್ವವನ್ನು ಅರಿಯಬೇಕಾದರೆ, ಮಕ್ಕಳಿಗೆ ಅದು ಸುಲಭವಾಗಿ ದಕ್ಕಬಾರದು. ಅದಕ್ಕಾಗಿ ಶ್ರಮ ಪಡಬೇಕು ಎಂಬುದು ಅವರಿಗೆ ಅರ್ಥವಾಗಬೇಕು.

4. “ಮಕ್ಕಳ ಜೊತೆಗೆ ಮಾತಾಡಿ, ಮಾತಾಡಿ, ಮಾತಾಡಿ. ಒಳ್ಳೊಳ್ಳೆಯ ವಿಚಾರಗಳನ್ನು ಮಾತನಾಡಿ, ಚರ್ಚಿಸಿ, ಅವರ ಮಾತನ್ನು ಕೇಳಿ. ಅಭಿಪ್ರಾಯವನ್ನು ಹಂಚಿಕೊಳ್ಳಿ. ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡಿ.”

– ಮಕ್ಕಳ ಮನಸ್ಸಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಬೇಕಾದರೆ, ಅವರ ಜೊತೆ ಮಾತನಾಡಬೇಕು. ಅವರ ನಿತ್ಯದ ಸಂತೋಷ, ಖುಷಿ, ಬೇಸರಗಳ ಬಗ್ಗೆ ಅವರು ನಿಮ್ಮ ಬಳಿ ಹಂಚಿಕೊಳ್ಳುವ ವಾತಾವರಣ ಅವರಿಗೆ ಕಲ್ಪಿಸಿ. ಒಳ್ಳೆಯ ಕೇಳುಗರಾದಾಗಲೇ, ಅವರೂ ನಿಮ್ಮ ಮಾತಿನ ಒಳ್ಳೆಯ ಕೇಳುಗರಾಗುತ್ತಾರೆ.

5. “ಮಕ್ಕಳಿಗೆ ಓದಿನ ಲಾಭಗಳನ್ನು ಮನವರಿಕೆ ಮಾಡಿಕೊಡಿ. ಮೊಬೈಜ್‌ ಅಥವಾ ಗ್ಯಾಜೆಟ್‌ಗಳ ಬದಲು, ಓದಿಗಾಗಿ ಸಮಯ ಮೀಸಲಿಡಿ, ಅವರ ಜೊತೆಗೆ ಓದಿನ ಬಗ್ಗೆ, ಓದಿದ ಪುಸ್ತಕಗಳ ಬಗ್ಗೆ ಚರ್ಚಿಸಿ”

ಇದನ್ನೂ ಓದಿ: Indian Parenting: ಭಾರತೀಯ ಹೆತ್ತವರ ಮಕ್ಕಳ ಪಾಲನೆಯ ಒಳಿತುಗಳಿವು!

– ಮಕ್ಕಳ ಹೆತ್ತವರು ಎದುರಿಸುವ ಸಮಸ್ಯೆಯೆಂದರೆ ಅದು ಮೊಬೈಲ್‌ ಹಾವಳಿ. ಮಕ್ಕಳನ್ನು ಮೊಬೈಲ್‌ನಿಂದ ಬಿಡಿಸಿ ಓದಿನ ಕಡೆ ಸೆಳೆಯುವುದು ಹೇಗೆ ಎಂಬ ತಲೆಬಿಸಿ. ಆದರೆ, ಸುಧಾಮೂರ್ತಿಯವರು ಹೇಳುವಂತೆ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಓದಿನ ರುಚಿ ಹಿಡಿಸಿದರೆ ಮಾತ್ರ ಮಕ್ಕಳು ಈ ಮೊಬೈಲ್‌ನ ಮಾಯೆಯಿಂದ ಪಾರಾಗಬಲ್ಲರು.

6. “ಗೌರವ ಕೊಟ್ಟು ತೆಗೆದುಕೊಳ್ಳಿ! ಹುದ್ದೆ, ಸ್ಥಾನಮಾನ ಇತ್ಯಾದಿಗಳೇನೇ ಆಗಿದ್ದೂ ಅದನ್ನು ಹೊರತಾಗಿ ಮಕ್ಕಳಿಗೆ ಎಲ್ಲರಿಗೂ ಗೌರವ ಕೊಡುವುದನ್ನು ಕಲಿಸಿ. ಆತ ಡ್ರೈವರ್‌ ಇರಲಿ, ಕೂಲಿಯೇ ಇರಲಿ, ಗೌರವ ಕೊಡುವುದರಿಂದಲೇ ನಿಮಗೂ ಗೌರವ ಸಿಕ್ಕೀತು ಎಂಬುದನ್ನು ಅರ್ಥ ಮಾಡಿಸಿ.”

ಇದನ್ನೂ ಓದಿ: Sudha Murthy: ಸುಧಾ ಮೂರ್ತಿ ನಾನ್-‌ ವೆ‌ಜ್‌ ಹೋಟೆಲ್‌ಗೆ ಹೋಗಲ್ಲ, ಯಾಕಂದ್ರೆ… ಟ್ರೋಲ್ ಆದ ಹೇಳಿಕೆ

Exit mobile version