ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಯಂಗ್ ಲುಕ್ ನೀಡುವ ಸ್ಟೇಟ್‌ಮೆಂಟ್ ಸ್ಕರ್ಟ್‌ಗಳು ಈ ಸೀಸನ್‌ನ (Summer Fashion) ಫ್ಯಾಷನ್‌ನಲ್ಲಿ ಸೇರಿಕೊಂಡಿವೆ. ನೋಡಲು ಒಂದಕ್ಕಿಂತ ಒಂದು ಭಿನ್ನವಾಗಿ ಬಿಂಬಿಸುವ ಚಿತ್ರ -ವಿಚಿತ್ರ ಕಟ್ಸ್ ಹೊಂದಿರುವಂತವು ಉದಾಹರಣೆಗೆ., ವ್ರಾಪ್ ವಿನ್ಯಾಸ, ಮಿಡಿ ಸ್ಟೈಲ್, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್, ಅಸ್ಸೆಮ್ಮಿಟ್ರಿಕಲ್ ಡಿಸೈನ್, ಸೈಡ್ ಝಿಪ್, ಬಟನ್ ಶೈಲಿ, ಫ್ರಿಂಝ್, ಬ್ಯಾಲೆರಿನಾ ಶೈಲಿ, ಅಂಬ್ರೆಲ್ಲಾ, ಸೆವೆನ್ ಕಟ್, ಕಟ್‌ಔಟ್ ಹೀಗೆ ನಾನಾ ವಿನ್ಯಾಸವನ್ನೊಳಗೊಂಡ ಸ್ಕರ್ಟ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕ್.
ಸಿಂಪಲ್ಲಾಗಿರದ ಸ್ಟೇಟ್‌ಮೆಂಟ್ ಸ್ಕರ್ಟ್ಸ್
ನೋಡಲು ಡಿಫರೆಂಟ್ ವಿನ್ಯಾಸವನ್ನೊಳಗೊಂಡ ಸ್ಕರ್ಟ್ಸ್ ಇಂದಿನ ಸ್ಟೇಟ್‌ಮೆಂಟ್ ಸ್ಕರ್ಟ್ಸ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ. ಒಂದಕ್ಕಿಂತ ಮತ್ತೊಂದು ಇಮ್ಯಾಜಿನ್‌ಗೂ ಸಿಗದ ರೀತಿಯಲ್ಲಿ ವಿನ್ಯಾಸಗೊಂಡಿರುತ್ತವೆ. ಇವು ಸಿಂಪಲ್ ಸ್ಕರ್ಟ್ಸ್ ಅಲ್ಲವೇ ಅಲ್ಲ! ಎನ್ನುತ್ತಾರೆ ಫ್ಯಾಷನಿಸ್ಟ್ ರಿಚಾ.
ಯುವತಿಯರ ಸ್ಕರ್ಟ್ಸ್ ಲವ್
ಸ್ಕರ್ಟ್ಸ್ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇಷ್ಟವಾದರೂ ಧರಿಸಲು ಬರುವುದಿಲ್ಲ. ಹೌದು. ಫ್ಯಾಷನಿಸ್ಟ್‌ಗಳ ಪ್ರಕಾರ, ಯುವತಿಯರು ಹೆಚ್ಚು ಧರಿಸುತ್ತಾರೆ. ಇದೀಗ ಕಾರ್ಪೋರೇಟ್ ಕ್ಷೇತ್ರದವರು ಇದರತ್ತ ವಾಲಿದ್ದಾರೆ. ಅಚ್ಚರಿ ಎಂಬಂತೆ ವಿವಾಹಿತರು ಕೂಡ ಲಾಂಗ್ ಸ್ಕರ್ಟ್ಸ್ ಮೋಹ ಬೆಳೆಸಿಕೊಳ್ಳಲಾರಂಭಿಸಿದ್ದಾರೆ.
ವೈವಿಧ್ಯಮಯ ಸ್ಟೇಟ್‌ಮೆಂಟ್ ಸ್ಕಟ್ರ್ಸ್
ಬೋ ಸ್ಕರ್ಟ್ಸ್ , ಕಟೌಟ್ ಸ್ಕರ್ಟ್ಸ್, ಪ್ಲೀಟ್ಸ್ ಮೇಲೆ ಪ್ಲೀಟ್ಸ್, ಫರ್‌ನಿಂದ ಸುತ್ತುವರಿದ ರಫೆಲ್ಸ್ ವಿನ್ಯಾಸ, ಫಂಕಿ ವಿನ್ಯಾಸ, ಪಾಪ್ ಆರ್ಟ್, ಕ್ವಿರ್ಕಿ ಡಿಸೈನ್ಸ್, ಮೈಕ್ರೊ ನೆಟ್ಟೆಡ್, ಶೀರ್, ವ್ರಾಪ್ ಮಾಡಿದಂತಿರುವ ಮಿನಿ ಸ್ಕರ್ಟ್ಸ್ ಹೀಗೆ ಲೆಕ್ಕವಿಲ್ಲದಷ್ಟು ಫ್ಯಾಬ್ರಿಕ್ ಹಾಗೂ ಡಿಸೈನ್‌ಗಳನ್ನು ಸ್ಟೇಟ್‌ಮೆಂಟ್ ಸ್ಕರ್ಟ್ಸ್‌ನಲ್ಲಿಕಾಣಬಹುದು.
ಹೀಗಿದೆ ಸ್ಕರ್ಟ್ಸ್ ಸಮೀಕ್ಷೆ
ಪ್ರತಿ ಯುವತಿಯ ಬಳಿಯೂ ಒಂದಲ್ಲ ಒಂದು ಬಗೆಯ ಸ್ಕರ್ಟ್ ಇದ್ದೇ ಇರುತ್ತದಂತೆ. ಅದರಲ್ಲೂ ಸ್ಟೇಟ್‌ಮೆಂಟ್ ಸ್ಕರ್ಟ್ಸ್ ಟೀನೇಜ್ ಹುಡುಗಿಯರ ವಾರ್ಡ್‌ರೋಬ್‌ನಲ್ಲಿ ಹೆಚ್ಚು ಸ್ಥಾನ ಆಕ್ರಮಿಸಿಕೊಂಡಿರುತ್ತದಂತೆ. ಹಾಗೆನ್ನುತ್ತದೆ ಅಪರೆಲ್ ಸಂಸ್ಥೆಯೊಂದರ ಸಮೀಕ್ಷೆ. ಇದು 100 ಪರ್ಸೆಂಟ್ ಸತ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಿಂಕಿ.
ಸ್ಟೇಟ್‌ಮೆಂಟ್ ಸ್ಕರ್ಟ್ಸ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ವೆಸ್ಟರ್ನ್ ಲುಕ್ಗೆ ಮೇಕಪ್ ಮ್ಯಾಚ್ ಆಗುವಂತಿರಬೇಕು.
- ಟ್ರೆಡಿಷನಲ್ ಲುಕ್ ಮಿಕ್ಸ್ ಮಾಡದಿರಿ.
- ವೈಡ್ ನೆಕ್ಲೈನ್ ಇದ್ದಾಗ ಮಾತ್ರ ನೆಕ್ಪೀಸ್ ಬಳಸಿ.
- ಕೆಲವು ಸ್ಕರ್ಟ್ಸ್ಗೆ ಬೆಲ್ಟ್ ಹಾಕಿದರೇ ಚೆನ್ನಾಗಿ ಕಾಣುತ್ತದೆ.
- ಧರಿಸುವ ಟಾಪ್ಗಳು ಇವಕ್ಕೆ ಪರ್ಫೆಕ್ಟ್ ಹೊಂದುವಂತಿರಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಸೀಸನ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡಿಸೈನರ್ ಮಾಟಿ