ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶೀರ್ ಫ್ಯಾಬ್ರಿಕ್ಸ್, ಜೆಮೆಟ್ರಿಕ್ ಕಟೌಟ್ಸ್, ನೀ ಹೈ ಲೆಂಥ್ ಸ್ಲಿಟ್ಸ್, ಫ್ಯೂಶನ್‌ವೇರ್ಸ್, ಬ್ರೈಟ್ ಮತ್ತು ಬೋಲ್ಡ್ ಕಲರ್ಸ್, ಪ್ರಯೋಗಾತ್ಮಕ ಸಿಲ್ಲೋಟ್ಸ್‌ನಂತಹ ಫ್ಯಾಷನ್ (Summer Fashion 2023) ವೆಸ್ಟರ್ನ್ ಔಟ್‌ಫಿಟ್ಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದರೇ, ಭಾರತೀಯ ಡಿಸೈನಿಂಗ್ ಕ್ಷೇತ್ರದಲ್ಲಿ ಇದೀಗ ಇಕೋ ಫ್ರೆಂಡ್ಲಿ ಉಡುಗೆಗಳು, ಪರಿಸರ ಸ್ನೇಹಿ ಆಕ್ಸೆಸರೀಸ್, ಹ್ಯಾಂಡಿಕ್ರಾಫ್ಟ್ಸ್ ಜ್ಯುವೆಲರಿಗಳ ಕಾರುಬಾರು ಜೋರಾಗಿದೆ.
ಸಮ್ಮರ್ ಫ್ಯಾಷನ್‌ಗೆ ಕಾಲಿಟ್ಟ ಕಾನ್ಸೆಪ್ಟ್
ವೆರೈಟಿ ಫ್ಲೋರಲ್ ಪ್ರಿಂಟ್ಸ್, ಬ್ಲಾಸೋಮ್ಸ್, ಬೇಬಿ ಸೆಲ್ಸ್, ಫ್ರಿಂಝ್, ಪ್ರಿಸನ್ ಸ್ಟ್ರೈಫ್ಸ್, ರಫಲ್ಡ್ ರೋಸ್, ಬಿಗ್ ಬ್ಲಾಸೊಮ್, 90-60 ಡಿಗ್ರಿ ಕೋಲ್ಡ್ ಶೋಲ್ಡರ್, ಆಫ್ ಶೋಲ್ಡರ್, ಟೂ ಇನ್ ವನ್ ಶೋಲ್ಡರ್, ಗಿಗ್ನಂನ ಪಿಕ್‌ನಿಕ್ ಪ್ಲೇಡ್, ರಿಬ್ಬನ್ ಬೆಲ್ಟ್ಸ್, ಮಿನಿ, ಮೈಕ್ರೋ, ಸೂಡೋ ಫ್ರಾಕ್ಸ್, ಸೀಟ್ ಬೆಲ್ಟ್ ಬಕ್ಕಲ್ ಡ್ರೆಸ್! ಅಬ್ಬಬ್ಬಾ ಒಂದೇ ಎರಡೇ ಲೆಕ್ಕವಿಲ್ಲದಷ್ಟು ವಿನ್ಯಾಸ, ಕಲರ್ಸ್ ಹಾಗೂ ಸಮ್ಮರ್ ಥೀಮ್ ಉಡುಗೆಗಳು ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿವೆ.
ಅಂದಹಾಗೆ, ಇವೆಲ್ಲಾ ಈ ಬಾರಿಯ ಸಮ್ಮರ್ ಫ್ಯಾಷನ್ ಥೀಮ್‌ನ ಸ್ಯಾಂಪಲ್ಸ್, ಅಷ್ಟೇ! ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ! ಧರಿಸಿದರೇ ನ್ಯೂ ಲುಕ್ ಹಾಗೂ ಫ್ರೆಶ್ ಫೀಲ್ ನೀಡುವ ಕಾನ್ಸೆಪ್ಟ್‌ಗಳಿವು. ಸ್ಟೈಲಿಸ್ಟ್ ರಿಚಾ ಪ್ರಕಾರ, ಬೇಸಿಗೆ ಆರಂಭವಾಗುತ್ತಿದ್ದಂತೆ ನವೊಲ್ಲಾಸ ನೀಡುವ ಫ್ಯಾಷನ್ ಎಂಟ್ರಿ ನೀಡಿದೆ. ರಿಫ್ರೆಶ್ ಶೇಡ್ಸ್ ಮರಳಿದೆ. ಜೋಷ್ ಹೆಚ್ಚಿಸುವ ಉಡುಪುಗಳು ಕಾಮನ್ ಆಗುತ್ತಿವೆ. ಇದು ಈ ಬಾರಿಯ ಸಮ್ಮರ್ ಫ್ಯಾಷನ್ ಮಂತ್ರವಾಗಿದೆ.
ಇನ್ನು ಇಷ್ಟು ಸಾಲದೆಂಬಂತೆ, ವಿದೇಶಿ ಕಾನ್ಸೆಪ್ಟ್‌ಗಳು ಕಾಲಿಟ್ಟಿವೆ. ಹೈ ಶೈನ್ ಮೆಟಾಲಿಕ್ಸ್, ಜಪಾನೀಸ್ ಮೊಟಿವ್ಸ್, ಇಂಗ್ಲೀಷ್ ಕಲರ್ಸ್ ಫ್ರಾಕ್ಸ್, ಫ್ಲೇರ್ ಕ್ರಾಪ್ ಪ್ಯಾಂಟ್ಸ್, ಖಾಕಿ ಟೋನ್ಸ್, ಸ್ಪೋರ್ಟಿ ಲುಕ್ ಹೀಗೆ ನಾನಾ ಬಗೆಯವು ಸಮ್ಮರ್ ಫ್ಯಾಷನ್ ಹಂಗಾಮ ಎಬ್ಬಿಸಿವೆ.
ಸೀಸನ್‌ಗೆ ಬದಲಾಗುವ ಶೇಡ್ಸ್
ಎಂದಿನಂತೆ ಬಿಸಿಲಿನ ಝಳಕ್ಕೆ ಡಲ್ ಆಗಿಸಬಲ್ಲ ಡಾರ್ಕ್ ಶೇಡ್‌ಗಳಿಗೆ ಇದೀಗ ಫುಲ್ ಸ್ಟಾಪ್ ದೊರಕಿದೆ. ಇದ್ದರೂ ಕೊಬಾಲ್ಟ್ ಬ್ಲ್ಯೂ, ಪಾಚಿ ಗ್ರೀನ್‌ನಂತಹ ವರ್ಣಗಳು ಮಾತ್ರ ಉಳಿದಿವೆ. ರಿಚ್ ಯೆಲ್ಲೊ, ಮಾರ್ಸಾಲಾ, ರೆಡಿಯಂಟ್ ಆರ್ಕಿಡ್, ವೈಲೆಟ್ ಟುಲಿಪ್, ಡ್ಯಾಜ್ಲಿಂಗ್ ಬ್ಲ್ಯೂ, ಸ್ಯಾಂಡ್, ಪ್ಲೆಸಿಡ್ ಬ್ಲ್ಯೂ, ಕೋರಲ್, ಸ್ಕೂಬಾ ಬ್ಲ್ಯೂ ಸೇರಿದಂತೆ ಸಾಕಷ್ಟು ಬ್ರೈಟ್ ಶೇಡ್‌ನ ಫ್ಲೋರಲ್ ಹಾಗೂ ಮೆಟಾಲಿಕ್ ಶೇಡ್‌ನವು ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಕಿಯಾರಾ.
ಲೆಯರ್ಡ್ ಲುಕ್ ಔಟ್ ಆಫ್ ಫ್ಯಾಷನ್
ನೀವು ಲೆಯರ್ಡ್ ಲುಕ್ ಪ್ರಿಯರಾಗಿದ್ದಲ್ಲಿ ಮಳೆಗಾಲ ಬರುವವರೆಗೂ ಬೈ ಹೇಳಿ! . ಇಲ್ಲವಾದಲ್ಲಿ ನೀವು ಔಟ್ ಆಫ್ ಫ್ಯಾಷನ್ ಲಿಸ್ಟ್‌ಗೆ ಸೇರುತ್ತೀರಿ. ಲೆಯರ್ ಲುಕ್ ಬಿಡಲಾಗದಿದ್ದಲ್ಲಿ ಟ್ರಾನ್ಸಪರೆಂಟ್ ಶೀರ್ ಲುಕ್ ನಿಮ್ಮದಾಗಿಸಿಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್ ಜಗನ್.
ಸಮ್ಮರ್ ಫ್ಯಾಷನ್ ಟ್ರೆಂಡ್ ಫಾಲೋ ಮಾಡುವವರಿಗೆ ಟಿಪ್ಸ್
- ಡಾರ್ಕ್ ಶೇಡ್ಸ್ ದೂರವಿಡಿ. ಆದಷ್ಟೂ ಲೈಟ್ ಕಲರ್ಸ್ ಚೂಸ್ ಮಾಡಿ.
- ಹೆವ್ವಿ ಜ್ಯುವೆಲರಿ ಉಡುಗೆಯೊಂದಿಗೆ ಧರಿಸಬೇಡಿ.
- ಸಮ್ಮರ್ಗೆ ಫಂಕಿ ಲುಕ್ ಮ್ಯಾಚ್ ಆಗುತ್ತದೆ.
- ಯಂಗ್ ಲುಕ್ ನೀಡುವ ಸಮ್ಮರ್ ಫ್ಯಾಷನ್ ಉಡುಪುಗಳ ಆಯ್ಕೆ ಬೆಸ್ಟ್.
- ಫುಲ್ ಸ್ಲೀವ್, ದಪ್ಪ ಫ್ಯಾಬ್ರಿಕ್ನ ಡ್ರೆಸ್ಗಳನ್ನು ಆವಾಯ್ಡ್ ಮಾಡಿ.
( ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆಯ ಗ್ಲಾಮರಸ್ ಲುಕ್‌ಗಾಗಿ ಬಂತು ಸ್ಟ್ರಾಪ್ ಡ್ರೆಸ್