ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಫಂಕಿ ಲುಕ್‌ಗೆ (Summer Fashion) ಸಾಥ್ ನೀಡುವ ಮಿರರ್ಡ್ ಸನ್‌ಗ್ಲಾಸ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಮಿರರ್ಡ್ ಸನ್‌ಗ್ಲಾಸ್ ಐವೇರ್‌ಗಳು ಈ ಸೀಸನ್‌ನ ಟ್ರೆಂಡಿ ಅಕ್ಸೆಸರೀಸ್ ಲಿಸ್ಟ್‌ನ ಟಾಪ್ ಸ್ಥಾನದಲ್ಲಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಬಿಸಿಲಿನ ಝಳಕ್ಕೆ ಕಂಗಳ ಸಂರಕ್ಷಣೆಗೆ ಇವು ಸಾಥ್ ನೀಡುತ್ತಿವೆ.
ಮಿರರ್ಡ್ ಸನ್‌ಗ್ಲಾಸ್‌ಗಳ ನಾನಾ ಶೇಪ್
ಸ್ಕೌರ್, ರೆಕ್ಟ್ಯಾಂಗಲ್, ರೌಂಡ್, ಪೆಂಟಾಗನಲ್, ಸ್ಟಾರ್ ಹೀಗೆ ನಾನಾ ಬಗೆಯ ಜಿಯಾಮೆಟ್ರಿಕಲ್ ಶೇಪ್ ಹೊಂಡಿರುವ ಮಿರರ್ ಸನ್ ಗ್ಲಾಸ್‌ಗಳು ಪಾಪುಲರ್ ಆಗಿವೆ. ನೋಡಲು ಫನ್ನಿಯಾಗಿ ಕಂಡರೂ ಇವು ಯಂಗ್ ಲುಕ್ ನೀಡುತ್ತವೆ ಎಂಬ ಕಾರಣಕ್ಕೆ ಸಾಕಷ್ಟು ಮಂದಿ ಕೊಳ್ಳುತ್ತಾರಂತೆ. ಸಮೀಕ್ಷೆಯೊಂದರ ಪ್ರಕಾರ, ಟ್ರಾವೆಲ್ ಮಾಡುವ ಸಂದರ್ಭದಲ್ಲಿ, ಪಿಕ್‌ನಿಕ್, ಟೂರ್ ಹೋಗುವ ಪ್ರವಾಸಿಗರು ಅತಿ ಹೆಚ್ಚಾಗಿ ಜಿಯಾಮೆಟ್ರಿಕಲ್ ಶೇಪ್‌ನ ಮಿರರ್ ಸನ್‌ಗ್ಲಾಸ್‌ಗಳನ್ನು ಬಳಸುತ್ತಿದ್ದಾರಂತೆ. ನೋಡಲು ಇದು ಫಾರ್ಮಲ್ ಲುಕ್‌ನಿಂದ ದೂರವಿಡುತ್ತದೆ ಎಂಬುದು ಸ್ಟೈಲಿಸ್ಟ್‌ಗಳ ಅಭಿಪ್ರಾಯ.
ಕಲರ್‌ಫುಲ್ ಶೇಡ್ಸ್
ಬ್ಲ್ಯೂ, ಗ್ರೀನ್, ಅಕ್ವಾ, ಗೋಲ್ಡನ್, ಯೆಲ್ಲೋ, ಆರೆಂಜ್ ಶೇಡ್‌ನ ಗ್ಲಾಸ್‌ಗಳನ್ನೊಳಗೊಂಡ ಮಿರರ್ಡ್ ಸನ್ ಗ್ಲಾಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಅಕ್ವಾ ಹಾಗೂ ಗ್ರೀನ್ ಫಂಕಿ ಲುಕ್ ನೀಡುವುದರೊಂದಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಅವರವರ ಸ್ಕಿನ್ ಟೋನ್‌ಗೆ ಹೊಂದುವಂತೆ ಶೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ತ್ವಚೆಯ ರಂಗಿಗೆ ಮ್ಯಾಚ್ ಆಗದೇ ನೋಡುಗರಿಗೆ ಅಭಾಸವುಂಟು ಮಾಡಬಹುದು ಎನ್ನುತ್ತಾರೆ.
ವಿಭಿನ್ನ ಲುಕ್ ನೀಡುವ ಫ್ರೇಮ್ಸ್
ಮಿರರ್ಡ್ ಸನ್‌ಗ್ಲಾಸ್‌ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಕಲರ್‌ಫುಲ್ ಫ್ರೇಮ್‌ಗಳು ಇಂದು ಚಾಲ್ತಿಯಲ್ಲಿವೆ. ಟ್ರೆಂಡಿ ಕಲರ್‌ಗಳಿಗೆ ಮ್ಯಾಚ್ ಆಗುವಂತಹ ಫ್ರೇಮ್ ಇದ್ದರೇ ಉತ್ತಮ.
ಫಂಕಿ ಲುಕ್ ಗ್ಯಾರಂಟಿ
ನೀವು ಫಂಕಿ ಲುಕ್‌ಗೆ ಆದ್ಯತೆ ನೀಡಬೇಕಾದಲ್ಲಿ ಮಿರರ್ಡ್ ಸನ್‌ಗ್ಲಾಸ್ ಬೆಸ್ಟ್ ಚಾಯ್ಸ್. ಕ್ಯಾಶುವಲ್ ಉಡುಪಿಗೆ ಹಾಗೂ ಟ್ರಾವೆಲ್ ಔಟ್‌ಫಿಟ್‌ಗಳಿಗೆ ಮಾತ್ರ ಸೂಟ್ ಆಗುತ್ತವೆ.
ಮಿರರ್ಡ್ ಸನ್‌ಗ್ಲಾಸ್ ಪ್ರಿಯರು ಗಮನಿಸಬೇಕಾದ್ದು
- ಕತ್ತಲೆಯಲ್ಲಿ ಯಾವುದೇ ಕಾರಣಕ್ಕೂ ಮಿರರ್ಡ್ ಸನ್‌ಗ್ಲಾಸ್ ಧರಿಸಬೇಡಿ.
- ವೆಸ್ಟರ್ನ್ ಔಟ್ಫಿಟ್ಗೆ ಬೆಸ್ಟ್ ಚಾಯ್ಸ್ ಎನ್ನಬಹುದು.
- ಟ್ರೆಡಿಷನಲ್ ಉಡುಪಿಗೆ ಮಿರರ್ಡ್ ಸನ್‌ಗ್ಲಾಸ್ ನಾಟ್ ಓಕೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Summer Fashion: ಮಿನಿ ವೈಟ್ ಫ್ರಾಕ್‌ನಲ್ಲಿ ಬೇಸಿಗೆ ಬಿಂದಾಸ್ ಫ್ಯಾಷನ್‌ಗೆ ಸೈ ಎಂದ ನಟಿ ತೇಜಸ್ವಿನಿ ಶರ್ಮಾ