ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಿನಿನ್ ಪ್ಯಾಂಟ್ ಸೆಟ್ ಹಾಗೂ ಸೂಟ್‌ಗಳು ಈ ಸೀಸನ್‌ನಲ್ಲಿ (Summer Fashion) ಟ್ರೆಂಡಿಯಾಗಿದ್ದು, ವಿಶೇಷವಾಗಿ ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಆಕರ್ಷಿಸಿವೆ. ಔಟ್‌ಡೋರ್ ವರ್ಕ್, ಮೀಟಿಂಗ್, ಗೆಟ್‌ಟುಗೆದರ್ ಹೀಗೆ ಹೊರಾಂಗಣದಲ್ಲಿ ಈ ಔಟ್‌ಫಿಟ್‌ಗಳು ಯುವತಿಯರಿಗೆ ಕಂಫರ್ಟಬಲ್ ಫೀಲ್ ನೀಡುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಬ್ರಿಥಬಲ್ ಫ್ಯಾಬ್ರಿಕ್ ಹೊಂದಿರುವ ಈ ಸಿಂಪಲ್ ಡಿಸೈನ್‌ನ ಲಿನಿನ್ ಪ್ಯಾಂಟ್ ಸೆಟ್-ಸೂಟ್ ಧರಿಸಿದಾಗ ಬೇಸಿಗೆಯಲ್ಲೂ ಆರಾಮ ಎನಿಸುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಂಫರ್ಟಬಲ್ ಫೀಲ್ ನೀಡುವ ಲಿನಿನ್ ಪ್ಯಾಂಟ್ ಸೆಟ್
ಏರ್ ಕಂಡಿಷನರ್‌ನಲ್ಲಿ ಕುಳಿತು ಕೆಲಸ ಮಾಡುವಾಗ ಮಾತ್ರ ಪ್ಯಾಂಟ್ ಸೂಟ್ ಹಾಗೂ ಸ್ಕರ್ಟ್ ಸೂಟ್‌ಗಳು ಹೊಂದುತ್ತವೆ. ಆದರೆ, ಹೊರಗಡೆ ಓಡಾಡುವಾಗ ದಪ್ಪನೆಯ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಿದ ಈ ಪ್ಯಾಂಟ್ ಸೆಟ್ ಹಾಗೂ ಸೂಟ್‌ಗಳು ಹೊಂದುವುದಿಲ್ಲ, ಮಾತ್ರವಲ್ಲ! ಗಾಳಿಯಾಡುವುದಿಲ್ಲ. ಸೆಕೆಯಾಗುತ್ತವೆ. ಕಂಫರ್ಟಬಲ್ ಎಂದೆನಿಸುವುದಿಲ್ಲ! ಇದಕ್ಕೆ ಪರ್ಯಾಯ ಪರಿಹಾರ ಎಂಬಂತೆ ಈ ಸೀಸನ್‌ನಲ್ಲಿ ನಾನಾ ಬಗೆಯ ಲಿನಿನ್ ಪ್ಯಾಂಟ್ ಸೆಟ್‌ಗಳು ಹಾಗೂ ಸೂಟ್‌ಗಳು ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್. ಅವರ ಪ್ರಕಾರ, ಈ ಲಿನಿನ್ ಫ್ಯಾಬ್ರಿಕ್‌ನಲ್ಲಿ ಲೆಕ್ಕವಿಲ್ಲದಷ್ಟು ಶೇಡ್‌ನವು ಬಂದಿವೆ. ಆದರೆ, ಹುಡುಗಿಯರು ತಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಆಯ್ಕೆ ಮಾಡಿದಾಗ ನೋಡಲು ಚೆನ್ನಾಗಿ ಕಾಣಿಸುತ್ತವೆ ಎನ್ನುತ್ತಾರೆ.
ಬೇಡಿಕೆ ಹೆಚ್ಚಿಸಿಕೊಂಡ ಲಿನಿನ್ ಕ್ರಾಪ್ ಟಾಪ್-ಪ್ಯಾಂಟ್
ಲಿನಿನ್ ಫ್ಯಾಬ್ರಿಕ್‌ನಲ್ಲಿ, ನಾನಾ ಪಾಸ್ಟೆಲ್ ಹಾಗೂ ಲೈಟ್ ಶೇಡ್‌ನಲ್ಲಿ ಬಂದಿರುವ ಉಡುಪುಗಳಲ್ಲಿ ಇದೀಗ ಕ್ರಾಪ್ ಟಾಪ್, ಸ್ಟ್ರೇಟ್ ಕಟ್ ಪ್ಯಾಂಟ್, ಸ್ಲೀವ್‌ಲೆಸ್ ಹಾಲ್ಟರ್ ನೆಕ್ ಟಾಪ್‌ಗಳು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಇದಕ್ಕೆ ಪ್ರಮುಖ ಕಾರಣ, ಉರಿ ಬಿಸಿಲಿನಲ್ಲೂ ಇವು ಆರಾಮ ನೀಡುತ್ತವೆ ಎಂಬುದು ಬಹುತೇಕ ಫ್ಯಾಷನ್ ಪ್ರಿಯರ ಅಭಿಪ್ರಾಯ.
ಲಿನಿನ್ ಪ್ಯಾಂಟ್ ಸೆಟ್-ಸೂಟ್ ಖರೀದಿಸುವಾಗ ಗಮನದಲ್ಲಿರಲಿ
- ಒರಿಜಿನಲ್ ಫ್ಯಾಬ್ರಿಕ್ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನಿರ್ವಹಣೆ ಬಗ್ಗೆ ಖರೀದಿಸುವಾಗಲೇ ತಿಳಿದುಕೊಳ್ಳಿ.
- ಲೈಟ್ವೈಟ್ ಫ್ಯಾಬ್ರಿಕ್ ಎಂಬುದು ನಿಮಗೆ ತಿಳಿದಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Streetwear Fashion: ಅಲ್ಟ್ರಾ ಮಾಡರ್ನ್ ಯುವತಿಯರ ವಾರ್ಡ್‌ರೋಬ್ ಸೇರಿದ ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್ ಪ್ಯಾಂಟ್