ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಈ ಸೀಸನ್‌ನ ವೀಕೆಂಡ್‌ಗಳಲ್ಲೂ (Summer Fashion) ಉಲ್ಲಾಸ ಹೆಚ್ಚಿಸುವ ಶ್ವೇತ ವರ್ಣದ ನಾನಾ ಬಗೆಯ ಫ್ರಾಕ್‌ಗಳು ಔಟಿಂಗ್ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಫ್ರೆಶ್ ಫೀಲಿಂಗ್ ನೀಡುವ ಮಿಲ್ಕಿ ವೈಟ್, ಹಾಫ್ ವೈಟ್, ಕ್ರೀಮಿಶ್ ವೈಟ್, ಐವರಿ ವೈಟ್ ಸೇರಿದಂತೆ ಬಗೆಬಗೆಯ ವೈಟ್ ಶೇಡ್‌ನ ನಾನಾ ವಿನ್ಯಾಸದ ಫ್ರಾಕ್‌ಗಳು ಚಾಲ್ತಿಯಲ್ಲಿವೆ.
ಸಮ್ಮರ್ ಸೀಸನ್‌ನಲ್ಲಿ ವೈಟ್ ಫ್ರಾಕ್‌ಗೆ ಬೇಡಿಕೆ
ಅಂದಹಾಗೆ, ಸಮ್ಮರ್‌ನಲ್ಲಿ ವೈಟ್ ಫ್ರಾಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ಬ್ಲ್ಯಾಕ್ ಹಾಗೂ ಡಾರ್ಕ್ ಶೇಡ್‌ಗಳು ಕೊಂಚ ಸೈಡಿಗೆ ಸರಿದು ಬಹಳಷ್ಟು ದಿನಗಳಾಗಿವೆ. ವೈಟ್ ಶೇಡ್‌ನಲ್ಲೇ ದೊರೆಯುವ ನಾನಾ ಶೇಡ್‌ಗಳ ಭಿನ್ನ-ವಿಭಿನ್ನ ಫ್ರಾಕ್‌ಗಳು ಇಂದು ಕೇವಲ ಟಿನೇಜ್ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಆಕರ್ಷಿಸಿವೆ. ವೀಕೆಂಡ್‌ನ ಔಟಿಂಗ್‌ನಲ್ಲಿ ಹಾಗೂ ಕ್ಯಾಶುವಲ್ ಸಂದರ್ಭಗಳಲ್ಲಿ ಸ್ತ್ರೀಯರ ಜೊತೆಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್.
ವೈವಿಧ್ಯಮಯ ವೈಟ್ ಫ್ರಾಕ್ಸ್
ಕೀ ಹೋಲ್ ಲೇಸ್ ಫ್ರಾಕ್, ಮ್ಯಾಕ್ಸಿ ಸ್ಟೈಲ್ ಫ್ರಾಕ್, ಮಿಡಿ ಸ್ಟೈಲ್ ಫ್ರಾಕ್, ಕಾರ್ಸೆಟ್ ಫ್ರಾಕ್, ಅಂಬ್ರೆಲ್ಲಾ ಫ್ರಾಕ್, ರಫಲ್ ಫ್ರಾಕ್, ಜಾರ್ಜೆಟ್‌ನ ಎ ಲೈನ್ ಫ್ರಾಕ್, ಶೀರ್ ಫ್ರಾಕ್, ಟೈಯಿಂಗ್ ಫ್ರಾಕ್, ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್ ಫ್ರಾಕ್, ನೆಟ್ಟೆಡ್ ಫ್ರಾಕ್‌ಗಳು ಪ್ರಚಲಿತದಲ್ಲಿವೆ. ಇನ್ನು ಕಾಟನ್, ಮಲ್ ಮಲ್, ಲಿನಿನ್, ಕ್ರೇಪ್ ಫ್ಯಾಬ್ರಿಕ್‌ನ ಫ್ರಾಕ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ ಫ್ರಾಕ್‌ಗಳು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಉರಿ ಬಿಸಿಲಿನಲ್ಲಿ ಶ್ವೇತ ವರ್ಣದ ಫ್ರಾಕ್‌ಗಳು ಫ್ರೆಶ್ ಲುಕ್ ನೀಡುವುದರೊಂದಿಗೆ ಯಂಗ್ ಲುಕ್ ಫೀಲ್ ನೀಡುತ್ತವೆ. ಹಾಗಾಗಿ ಇತ್ತೀಚೆಗೆ ಹುಡುಗಿಯರು ಮಾತ್ರವಲ್ಲ, ವಿವಾಹಿತರು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟ್ ರೀಟಾ. ಆದರೆ, ಈ ವೈಟ್ ಫ್ರಾಕ್ಸ್ ಧರಿಸುವಾಗ ಮಾತ್ರ ತಮ್ಮ ಬಾಡಿ ಟೈಪ್‌ಗೆ ಹೊಂದುತ್ತದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಅವರು.
ವೈಟ್ ಫ್ರಾಕ್ ಆಯ್ಕೆ ಮಾಡುವಾಗ ಗಮನಿಸಿ
- ಟ್ರಯಲ್ ನೋಡಿ, ಪರ್ಫೆಕ್ಟ್ ಇದ್ದಲ್ಲಿ ನಂತರ ಖರೀದಿಸಿ.
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ವೈಟ್ ಫ್ರಾಕ್ ವಿನ್ಯಾಸ ಆಯ್ಕೆ ಮಾಡಿ. ಯಾಕೆಂದರೇ, ಕೆಲವು ಫ್ರಾಕ್ಗಳಲ್ಲಿ ದೇಹದ ಅಂಗಾಗಗಳು ಹೈಲೈಟಾಗುತ್ತದೆ.
- ಜಾರ್ಜೆಟ್, ಕ್ರೇಪ್ ಫ್ರಾಕ್‌ಗಳು ಸ್ಲಿಮ್ ಲುಕ್ ನೀಡುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಆಕರ್ಷಿಸಿದ ಲಿನಿನ್ ಪ್ಯಾಂಟ್ ಸೆಟ್