ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಈ ಸೀಸನ್‌ನಲ್ಲಿ ಹಾಟ್ ಲುಕ್ ನೀಡುವ ಗ್ಲಾಮರಸ್ ಔಟ್‌ಫಿಟ್‌ಗಳಾದ (Summer Fashion) ಮೆಶ್ ಡ್ರೆಸ್‌ಗಳು ಲಗ್ಗೆ ಇಟ್ಟಿವೆ. ನೋಡಲು ಜಾಲರಿಯಂತೆ ಕಾಣುವ ಈ ಉಡುಪು ಸೆಕೆಯಾಗದಂತೆ ಡಿಸೈನ್‌ಗೊಂಡಿವೆ. ನೋಡಲು ಪಾರದರ್ಶಕದಂತಿರುವ ಈ ಉಡುಪು ನಾನಾ ಫ್ಯಾಬ್ರಿಕ್‌ಗಳಲ್ಲಿ ದೊರೆಯುತ್ತಿವೆ. ಔಟರ್ ಲೆಯರ್, ಇನ್ನರ್ ಲೇಯರ್, ಡಬಲ್ ಲೇಯರ್ ಹೀಗೆ ನಾನಾ ವಿನ್ಯಾಸದಲ್ಲಿ ರೂಪುಗೊಂಡಿವೆ.
ಬೇಸಿಗೆಯ ಗ್ಲಾಮರಸ್ ಔಟ್‌ಫಿಟ್
ಮೆಶ್ ಉಡುಪುಗಳು ನೋಡಲು ತಕ್ಷಣಕ್ಕೆ ಜಾಲರಿಯ ಪರದೆಯಂತೆ ಕಾಣುತ್ತವೆ. ಅಂದಹಾಗೆ, ಇದು ಹಾಲಿವುಡ್‌ನಲ್ಲಿಅತಿ ಹೆಚ್ಚು ಫ್ಯಾಷನ್‌ನಲ್ಲಿದ್ದವು. ಪ್ರತಿಷ್ಠಿತ ರೆಡ್ ಕಾರ್ಪೆಟ್‌ನಲ್ಲೂ ಕಾಣಿಸಿಕೊಂಡಿವೆ. ಭಾರತಕ್ಕೆ ಕಾಲಿಟ್ಟ ನಂತರ ಇಲ್ಲಿನವರಿಗೆ ಸೂಟ್ ಆಗುವಂತಹ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ.
ತಾರೆಯರ ಬೇಸಿಗೆ ಗ್ಲಾಮರಸ್ ಔಟ್‌ಫಿಟ್
ಇನ್ನು ಈ ಉಡುಪು ಇದೀಗ ತಾರೆಯರ ಹಾಗೂ ಮಾಡೆಲ್‌ಗಳ ಹಾಟ್ ಲುಕ್ ನೀಡುವ ಔಟ್‌ಫಿಟ್ ಆಗಿ ಬದಲಾಗಿದೆ. ಅವರವರ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತೆ ವಿನ್ಯಾಸಗೊಂಡಿವೆ. ಹಾಲಿವುಡ್ ತಾರೆಯರ ಕಾಪಿಕ್ಯಾಟ್ ಇದಾದರೂ ಇದರಲ್ಲೂಕೊಂಚ ಹೊಸತನ ತುಂಬಿ ಬದಲಿಸಿದ್ದಾರೆ. ಮ್ಯಾಕ್ಸಿ, ಮಿಡಿ, ಫ್ರಾಕ್ ಶೈಲಿಯಲ್ಲಿ ದೊರೆಯುವ ಇವು ಬಿಕಿನಿ ಹಾಘೂ ಶಾಟ್ರ್ಸ್, ಕ್ರಾಪ್ ಟಾಪ್ ಸೇರಿದಂತೆ ಸಾಕಷ್ಟು ಮಿನಿ ಉಡುಪುಗಳ ಮೇಲೆ ಧರಿಸುವುದು ಹೆಚ್ಚಾಗಿದೆ.
ಇಂಡೋ-ವೆಸ್ಟರ್ನ್ ಡಿಸೈನ್
ಸ್ಟೈಲಿಸ್ಟ್ ರಿಚಾ ಪ್ರಕಾರ, ಇದೀಗ ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ನಲ್ಲೂ ಲಭ್ಯ. ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಹೊಸ ಹೊಸ ರೂಪದಲ್ಲೂ ಕೂಡ ಎಂಟ್ರಿ ನೀಡಿದೆ ಎನ್ನುತ್ತಾರೆ. ಅವರು ಹೇಳುವಂತೆ, ಡಬ್ಬಲ್ ಲೆಯರ್‌ನ ಮೆಶ್ ಔಟ್‌ಫಿಟ್ಸ್‌ಗಳಿಗೆ ಪಾರ್ಟಿವೇರ್ ಲುಕ್ ಕೂಡ ದೊರೆತಿದೆ ಎನ್ನುತ್ತಾರೆ.
ಮೆಶ್ ಔಟ್‌ಫಿಟ್ ಔಟ್‌ಲುಕ್ ಪ್ರಿಯರಿಗಾಗಿ
ನೀವೇನಾದರೂ ಮೆಶ್ ಔಟ್‌ಫಿಟ್ ಟ್ರೈ ಮಾಡಲು ಬಯಸಿದ್ದಲ್ಲಿಆದಷ್ಟೂ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇವು ಆ್ಯಂಟಿ ಫಿಟ್ಟಿಂಗ್ ಡ್ರೆಸ್‌ಗಳು. ಯಾವುದೇ ಕಾರಣಕ್ಕೂ ಫಿಟ್ಟಿಂಗ್ ಹೊಂದಿರುವುದಿಲ್ಲ ಎನ್ನುತ್ತಾರೆ ಸೆಲೆಬ್ರಿಟಿ ಫ್ಯಾಷನಿಸ್ಟಾ ರೀಟಾ.
ಮೆಶ್ ಔಟ್‌ಫಿಟ್ ಟ್ರಿಕ್ಸ್
- ಮೆಶ್ ಔಟ್‌ಫಿಟ್ಸ್ ಬಿಂದಾಸ್ ಲುಕ್ ನೀಡುತ್ತದೆ.
- ಹವರ್ ಗ್ಲಾಸ್ ಬಾಡಿಶೇಪ್ ಇರುವವರಿಗೆ ಬ್ಯೂಟಿಫುಲ್ ಆಗಿ ಕಾಣಿಸುತ್ತದೆ.
- ಶ್ವೇತ ವರ್ಣದ ಮೆಶ್ ಡ್ರೆಸ್ ಟ್ರೆಂಡಿಯಾಗಿದೆ. ಟ್ರೈ ಮಾಡಿ ನೋಡಿ.
- ಆಕ್ಸೆಸರೀಸ್ ಬೇಕಾಗಿಲ್ಲ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಕಾಲೇಜು-ಟಿನೇಜ್ ಹುಡುಗಿಯರ ಸಮ್ಮರ್ ಫಂಕಿ ಫ್ಯಾಷನ್‌ಗೆ ಮ್ಯಾಂಗೋ ಇಯರಿಂಗ್ಸ್ ಸಾಥ್!