ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ಬಣ್ಣಬಣ್ಣದ ಹಾಗೂ ಪ್ರಿಂಟೆಡ್‌ನ ಫಿಟ್ & ಫ್ಲೇರ್ ಡ್ರೆಸ್‌ಗಳು ಲಗ್ಗೆ ಇಟ್ಟಿವೆ. ಯಾವುದೇ ವಯಸ್ಸಿನ ಮಾನಿನಿಯರು ಧರಿಸಿದಾಗ ಯಂಗ್ ಲುಕ್ ನೀಡುವ ಈ ಡ್ರೆಸ್‌ಗಳು (Summer Fashion) ಇತ್ತೀಚೆಗೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಕಲರ್‌ಫುಲ್ ಫ್ಯಾಬ್ರಿಕ್‌ನಲ್ಲಿ ಮಾತ್ರವಲ್ಲ, ಫ್ಲೋರಲ್ ಹಾಗೂ ಬಗೆಬಗೆಯ ಡಿಜಿಟಲ್ ಪ್ರಿಂಟ್‌ನಲ್ಲೂ ಈ ವಿನ್ಯಾಸದ ಉಡುಪುಗಳು ಆಗಮಿಸಿವೆ.
ಏನಿದು ಫಿಟ್ ಹಾಗೂ ಫ್ಲೇರ್ ಡ್ರೆಸ್
ವೇಸ್ಟ್‌ಲೈನ್‌ವರೆಗೂ ಫಿಟ್ ಆಗಿರುವ ಈ ಡ್ರೆಸ್, ವೇಸ್ಟ್‌ಲೈನ್‌ನಿಂದ ಕೆಳ ಭಾಗಕ್ಕೆ ಅಂಬ್ರೆಲ್ಲಾ ರೀತಿಯ ಫ್ಲೇರ್ ಹೊಂದಿರುತ್ತವೆ. ಒಟ್ಟಿನಲ್ಲಿ ಮೇಲ್ಭಾಗದಲ್ಲಿ ಫಿಟ್ ಆಗಿ ಕೂರುತ್ತವೆ. ಹೊಟ್ಟೆಯ ಭಾಗದಲ್ಲೂ ಅಷ್ಟೇ ಫಿಟ್ ಆಗಿರುತ್ತವೆ. ಇನ್ನುಳಿದಂತೆ ಹರಡಿಕೊಂಡಂತಿರುತ್ತವೆ. ಸ್ಲೀವ್‌ಗಳು ಮಾತ್ರ ಬಲೂನ್ ಸ್ಲೀವ್ ಇಲ್ಲವೇ ಪಫ್ ಸ್ಲೀವ್ ಹೊಂದಿರುತ್ತವೆ. ತ್ರೀ ಫೋರ್ತ್ ಇಲ್ಲವೇ ಫುಲ್ ಸ್ಲೀವ್ ಹೊಂದಿರುತ್ತವೆ. ಮಂಡಿಯವರೆಗೂ ಉದ್ದನಾಗಿರುತ್ತವೆ. ತಕ್ಷಣಕ್ಕೆ ನೋಡಲು ಚಿಕ್ಕ ಮಕ್ಕಳ ಫ್ರಾಕ್‌ನಂತೆ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ. ಅವರ ಪ್ರಕಾರ ಫಿಟ್ ಹಾಗೂ ಫ್ಲೇರ್ ಉಡುಪುಗಳು ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ.
ಕ್ಯಾಶುವಲ್ ಲುಕ್‌ಗಾಗಿ ಡ್ರೆಸ್
ಔಟಿಂಗ್, ವೀಕೆಂಡ್, ಟ್ರಾವೆಲ್ ಹೀಗೆ ಎಲ್ಲಾ ಸಮಯದಲ್ಲೂ ಧರಿಸಬಹುದು. ನೋಡಲು ಯಂಗ್ ಲುಕ್ ನೀಡುವುದರಿಂದ ಬಹುತೇಕ ಮಹಿಳೆಯರು ಈ ಡ್ರೆಸ್ ಹೆಚ್ಚು ಖರೀದಿಸತೊಡಗಿದ್ದಾರೆ. ಟೀನೇಜ್‌ನವರಿಗಿಂತ ವಿವಾಹಿತ ಮಹಿಳೆಯರು ಕೊಳ್ಳುವುದು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಅವರ ಪ್ರಕಾರ, ಈ ಡ್ರೆಸ್ ಫ್ರಾಕ್ ಹಾಗೂ ಮ್ಯಾಕ್ಸಿ ಎರಡಂತೆಯೂ ಕಾಣುತ್ತದೆ ಎನ್ನುತ್ತಾರೆ.
ಫಿಟ್ ಮತ್ತು ಫ್ಲೇರ್ ಡ್ರೆಸ್ ಆಯ್ಕೆ
ಈ ಡ್ರೆಸ್ ಖರೀದಿಸುವಾಗ ಆದಷ್ಟೂ ತಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ಆದಷ್ಟೂ ಟ್ರಯಲ್ ನೋಡಿ ಕೊಳ್ಳಿ. ಯಾಕೆಂದರೆ, ಕೊಂಚ ಪ್ಲಂಪಿ ಇರುವವರಿಗೆ ಮತ್ತಷ್ಟು ಅಗಲವಾಗಿ ಹರಡಿಕೊಂಡಂತೆಯೂ ಕಾಣಬಹುದು. ಕೆಲವು ವಿನ್ಯಾಸದ ಆಧಾರದ ಮೇಲೆ ಇವು ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ಈ ಉಡುಪು ಸೀಸನ್ ದಾಟಿದರೂ ಧರಿಸಬಹುದು. ಸೀಸನ್‌ಗೆ ಸೀಮಿತವಾಗದು ಉಡುಪಿದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆ ಎಥ್ನಿಕ್ ಫ್ಯಾಷನ್‌ನಲ್ಲಿ ಜೆನ್ ಜಿ ಯುವತಿಯರ ಮನ ಗೆದ್ದ ಸ್ಟ್ರಾಪ್ ಸಲ್ವಾರ್ ಕಮೀಝ್