ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಗೆ ಇದೀಗ (Summer Fashion) ಕ್ರಾಪ್ ಟೀ ಶರ್ಟ್‌ನ ನಂತರ ಕ್ರಾಪ್ ಫ್ಲೋರಲ್ ಹಾಗೂ ವೈಬ್ರೆಂಟ್ ಶೇಡ್‌ನ ಜೆಮೆಟ್ರಿಕಲ್ ಪ್ರಿಂಟ್ಸ್‌ನ ಶರ್ಟ್‌ಗಳು ಎಂಟ್ರಿ ನೀಡಿವೆ. ನೋಡಲು ಬಿಂದಾಸ್ ಹಾಗೂ ಲೈವ್ಲಿಯಾಗಿ ಕಾಣುವ ಈ ಫಂಕಿ ಶರ್ಟ್ಸ್ ಈಗಾಗಲೇ ಟಿನೇಜ್ ಹುಡುಗಿಯರ ಮನ ಗೆದ್ದಿವೆ. ಅದರಲ್ಲೂ ಔಟಿಂಗ್‌ಗೆ ಹೇಳಿಮಾಡಿಸಿದಂತಿವೆ.
ಫಂಕಿ ಹೂಗಳ ಚಿತ್ತಾರದ ಶರ್ಟ್
ಕೆಲವು ಫಂಕಿ ಶರ್ಟ್‌ಗಳಲ್ಲಿ ನಾನಾ ಬಗೆಯ ಹೂವುಗಳ ಚಿತ್ತಾರ ಕಾಣಬಹುದು. ಗುಲಾಬಿ, ಸೇವಂತಿ, ಕಮಲ, ಬ್ರಹ್ಮಕಮಲ. ಸೂರ್ಯಕಾಂತಿ, ಮಲ್ಲಿಗೆ, ಕನಾಕಾಂಬರ, ಜಾಜಿ ಸೇರಿದಂತೆ ದೇಸಿ ಹೂವುಗಳ ಪ್ರಿಂಟ್ಸ್ ಮಾತ್ರವಲ್ಲ, ವಿದೇಶಿ ಹೂವುಗಳ ಚಿತ್ತಾರವು ಮೆಳೈಸಿವೆ. ಬೇಸಿಗೆಯ ಉರಿ ಬಿಸಿಲಲ್ಲಿ ತಂಪನ್ನೆರೆಯುವ ವಿನ್ಯಾಸಗಳಲ್ಲಿ ಮೂಡಿಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಹಾಗೂ ಡಿಸೈನರ್ ರಿಜಿನಾ ವರ್ಗೀಸ್. ಅವರ ಪ್ರಕಾರ, ಟೀ ಶರ್ಟ್‌ಗಳನ್ನು ಧರಿಸಲು ಇಚ್ಛಿಸದವರು ಈ ಶರ್ಟ್‌ಗಳನ್ನು ಟ್ರೈ ಮಾಡಬಹುದು ಎನ್ನುತ್ತಾರೆ.
ವೈಬ್ರೆಂಟ್ ಶೇಡ್ಸ್‌ನ ಜೆಮೆಟ್ರಿಕಲ್ ಪ್ರಿಂಟೆಡ್ ಶರ್ಟ್
ಜೆಮೆಟ್ರಿಕಲ್ ವಿನ್ಯಾಸದ ಕೆಟಗರಿಯಲ್ಲಿ ನಾನಾ ಕಲರ್ ಬ್ಲಾಕ್ ಡಿಸೈನ್‌ವು ಹಾಗೂ ಪೆಂಟಾಗನ್, ಅಕ್ಟಾಗನ್, ಚೌಕಾಕಾರ, ತ್ರೀಕೋನ ಸೇರಿದಂತೆ ನಾನಾ ವಿನ್ಯಾಸದ ಪ್ರಿಂಟೆಡ್ ಶರ್ಟ್‌ಗಳು ಲಭ್ಯ. ಅಷ್ಟು ಮಾತ್ರವಲ್ಲದೇ ಈ ಜೆಮಿಟ್ರಿಕಲ್ ಪ್ರಿಂಟ್‌ನ ಜೊತೆಗೆ ಮಿಕ್ಸ್ ಮ್ಯಾಚ್ ಇರುವಂತಹ ಹೂವುಗಳ ಹಾಗೂ ಇಲ್ಯೂಷನ್ ಕ್ರಿಯೆಟ್ ಮಾಡುವಂತಹ ವಿನ್ಯಾಸದವು ಇಂದು ಚಾಲ್ತಿಯಲ್ಲಿವೆ.
ರಂಗೋಲಿ ಡಿಸೈನ್ ಪ್ರಿಂಟ್ಸ್
ಇನ್ನು ಕೆಲವು ಡಿಸೈನರ್ ಕ್ರಾಪ್ ಶರ್ಟ್‌ಗಳಲ್ಲಿ ರಂಗೋಲಿ ಡಿಸೈನವು ಲಭ್ಯ. ತ್ರಿಡಿ ಆರ್ಟ್ ಎಫೆಕ್ಟ್ ಇರುವಂತವು ಪ್ರಚಲಿತದಲ್ಲಿವೆ. ಇನ್ನು ಸಾದಾ ಕ್ರಾಪ್ ಶರ್ಟ್‌ನವು ಈ ಸೀಸನ್‌ನಲ್ಲಿ ಅಷ್ಟಾಗಿ ಕಾಣಸಿಗುತ್ತಿಲ್ಲ. ಸಿಕ್ಕರೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರು ಧರಿಸುವುದು ಕಾಮನ್ ಆಗಿದೆ ಎನ್ನುತ್ತಾರೆ ಡಿಸೈನರ್ಸ್ ರಿಚಾ ಹಾಗೂ ರಾಧಾ..
ಕ್ರಾಪ್ ಶರ್ಟ ಅನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು?
- ಫಾರ್ಮಲ್ ಪ್ಯಾಂಟ್ ಜೊತೆಗೂ ಧರಿಸಬಹುದು.
- ಜೀನ್ಸ್, ಸ್ಕರ್ಟ್, ಕೇಪ್ರೀಸ್ ನೊಂದಿಗೂ ಧರಿಸಬಹುದು.
- ಕಾಲರ್ ಇರುವುದರಿಂದ ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಉತ್ತಮ.
- ಹೇರ್ಸ್ಟೈಲ್ ಟ್ರೈ ಮಾಡಿದರೇ ಉತ್ತಮ.
- ಫಂಕಿ ಪ್ರಿಂಟ್ ಶರ್ಟ ಅನ್ನು ಟೈ ಮಾಡಿದಲ್ಲಿ ಕ್ರಾಪ್ ಟಾಪ್ ನಂತೆ ಕಾಣುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Swimsuit Fashion: ಬೇಸಿಗೆಯ ಫ್ಯಾಷನ್‌ಗೆ ಲಗ್ಗೆ ಇಟ್ಟ ವೈಬ್ರೆಂಟ್ ಶೇಡ್ಸ್‌ನ ಟ್ರೆಂಡಿ ಸ್ವಿಮ್‌ಸೂಟ್ಸ್