ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ಲಾಮರಸ್ ಲುಕ್ ನೀಡುವ ಬಾರ್ಡಾಟ್ ಡ್ರೆಸ್‌ಗಳು ಈ ಬಾರಿಯ ಸಮ್ಮರ್ ಸೀಸನ್ ಫ್ಯಾಷನ್‌ನಲ್ಲಿ (Summer Fashion) ಟಾಪ್ ಲಿಸ್ಟ್‌ಗೆ ಸೇರಿವೆ. ನೋಡಲು ಬಿಂದಾಸ್ ಲುಕ್ ನೀಡುವ ಇವು ಸೆಲೆಬ್ರೆಟಿಗಳ ನೆಚ್ಚಿನ ಔಟ್‌ಫಿಟ್‌ಗಳಾಗಿದ್ದು, ಇದೀಗ ಜೆನ್ ಜಿ ಹುಡುಗಿಯರನ್ನು ಬರಸೆಳೆಯುತ್ತಿವೆ.
“ಮೊದಲಿನಂತೆ ಬಾರ್ಡಾಟ್ ಡ್ರೆಸ್‌ಗಳು ಹಾಲಿವುಡ್, ಬಾಲಿವುಡ್ ತಾರೆಯರ ಔಟ್‌ಫಿಟ್ ಆಗಿ ಉಳಿದಿಲ್ಲ! ಇದೀಗ ಈ ಜನರೇಷನ್‌ನ ಕಾಲೇಜು ಹುಡುಗಿಯರನ್ನು ಸೆಳೆಯುತ್ತಿವೆ. ನಿಮಗೆ ಗೊತ್ತೇ! ಹಾಲಿವುಡ್‌ನ ಏಂಜಲೀನಾ, ಕೇಟ್, ಜೆನಿಫರ್, ವಾಟ್ಸಾನ್, ಜೆಸ್ಸಿಕಾ, ಆ್ಯಮಿ ಬಾರ್ಡಟ್ ಡ್ರೆಸ್ ಪ್ರಿಯರು. ಅಷ್ಟ್ಯಾಕೆ! ಬಾಲಿವುಡ್‌ನ ಸಾಕಷ್ಟು ತಾರೆಯರು ಕೂಡ ಬಾರ್ಡಟ್ ಔಟ್‌ಫಿಟ್ ಪ್ರೇಮಿಗಳು. ಆಫ್ ಶೋಲ್ಡರ್‌ನ ಪ್ರತಿ ರೂಪವಾದ ಈ ಬಾರ್ಡಾಟ್ ಡ್ರೆಸ್ ಇದೀಗ ಹೊಸ ಲುಕ್‌ನಲ್ಲಿ ಎಂಟ್ರಿ ನೀಡಿರುವುದೇ ಹುಡುಗಿಯರನ್ನು ಸೆಳೆಯಲು ಪ್ರಮುಖ ಕಾರಣ” ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ಅಮಿತ್.
ಮಿಕ್ಸ್ ಮ್ಯಾಚ್ ಬಾರ್ಡಾಟ್ ಡ್ರೆಸ್
ಹೌದು. ಇಂದು ಕೇವಲ ಬಾರ್ಡಾಟ್ ಬಾಡಿ ಕಾನ್ ಉಡುಪು ಮಾತ್ರವಲ್ಲ, ಸ್ಕರ್ಟ್ ಜೊತೆ ಬಾರ್ಡಾಟ್ ಕ್ರಾಪ್ ಟಾಪ್, ಪ್ಯಾಂಟ್‌ನೊಂದಿಗೆ ಬಾರ್ಡಾಟ್ ಟಾಪ್ ಹೀಗೆ ನಾನಾ ಬಗೆಯಲ್ಲಿ ಮಿಕ್ಸ್ ಮ್ಯಾಚ್ ಮಾಡುವ ಕಾನ್ಸೆಪ್ಟ್‌ನಲ್ಲಿ ಎಂಟ್ರಿ ನೀಡಿವೆ. ಉದಾಹರಣೆಗೆ, ಕ್ಲಾಸಿ ಲುಕ್‌ಗಾಗಿ ಸ್ಕರ್ಟ್ಸ್ ಜತೆ ಬಾರ್ಡಾಟ್ ಟಾಪ್ ಧರಿಸಬಹುದು. ಹಾಟ್ ಲುಕ್‌ಗಾಗಿ ಮಿನಿ ಸ್ಕರ್ಟ್ ಜೊತೆಯೂ ಧರಿಸಬಹುದು.
ಉದ್ದಗಿರುವವರಿಗೆ ಉತ್ತಮ ಆಯ್ಕೆ
ಉದ್ದಗಿರುವವಗರಿಗೆ ಈ ಔಟ್‌ಫಿಟ್ ಹೇಳಿಮಾಡಿಸಿದಂತಿರುತ್ತದೆ. ಪ್ಲಂಪಿಯಾಗಿರುವವರಿಗೆ ನಾಟ್ ಓಕೆ. ಕುಳ್ಳಗಿರುವವರಿಗೂ ನಾಟ್ ಓಕೆ. ಮತ್ತಷ್ಟು ಗಿಡ್ಡನಾಗಿರುವಂತೆ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬಾರ್ಡಾಟ್ ಡ್ರೆಸ್ ಆಯ್ಕೆ ಹೀಗಿರಲಿ
ಇನ್ನು ಬಾರ್ಡಾಟ್ ಡ್ರೆಸ್‌ಗಳನ್ನು ಕೊಳ್ಳುವಾಗ ಆದಷ್ಟೂ ಫಿಟ್ಟಿಂಗ್ ಇರುವಂತದ್ದನ್ನೇ ಖರೀದಿಸಬೇಕು. ಇಲ್ಲವಾದಲ್ಲಿ ದೊಗಲೆಯಾಗಿ ಭುಜದಿಂದ ಜಾರಿ ಬೀಳಬಹುದು. ಕಂಫರ್ಟಬಲ್ ಇದ್ದಲ್ಲಿ ಮಾತ್ರ ಧರಿಸಿ. ಕೊಳ್ಳುವ ಮುನ್ನ ಟ್ರಯಲ್ ನೋಡುವುದು ಬೆಸ್ಟ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಲೆಹೆಂಗಾಗೂ ಬಾರ್ಡಾಟ್ ಬ್ಲೌಸ್
ಈ ಸೀಸನ್‌ನಲ್ಲಿ ಗ್ಲಾಮರಸ್ ಲುಕ್ ನೀಡುವ ಲೆಹೆಂಗಾ ಬ್ಲೌಸ್‌ಗಳಲ್ಲಿ ಇದೀಗ ಗ್ಲಾಮರಸ್ ಲುಕ್ ನೀಡುವ ನಾನಾ ವಿನ್ಯಾಸದ ಬಾರ್ಡಾಟ್ ಟಾಪ್ ಬಂದಿವೆ. ಈ ಬ್ಲೌಸ್ ನೋಡಲು ಸೆಲೆಬ್ರೆಟಿ ಲುಕ್ ನೀಡುವುದರೊಂದಿಗೆ ಬಾಡಿ ಮಾಸ್ ಇಂಡೆಕ್ಸ್ ಅನ್ನು ಹೈಲೈಟ್ ಮಾಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬಾರ್ಡಾಟ್ ಡ್ರೆಸ್ ಪ್ರಿಯರಿಗೆ 3 ಟಿಪ್ಸ್
- ಬಾರ್ಡಾಟ್ ಡ್ರೆಸ್ ಫಿಟ್ಟಿಂಗ್ ಇದ್ದಲ್ಲಿ ಮಾತ್ರ ಧರಿಸಿ.
- ಬಾರ್ಡಾಟ್ ಟಾಪನ್ನು ಕ್ಯೂಲ್ಲೊಟ್ಸ್, ಮಿನಿ ಸ್ಕರ್ಟ್ಸ್, ಲೂಸರ್ಸ್, ಫ್ರಿಲ್ಲರ್ಸ್ ಜತೆ ಮ್ಯಾಚ್ ಮಾಡಬಹುದು.
- ಟೊರ್ನ್ ಶಾಟ್ರ್ಸ್ , ಜೀನ್ಸ್ಗೂ ಮ್ಯಾಚ್ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion : ಸಮ್ಮರ್ ಫ್ಯಾಷನ್‌ನ ಗ್ಲಾಮರ್ ಲುಕ್‌ಗೆ ಕಾಲಿಟ್ಟ ಟೊರ್ನ್ ಶಾಟ್ರ್ಸ್