Site icon Vistara News

Summer Fashion Shopping: ಸಮ್ಮರ್ ಫ್ಯಾಷನ್‌ವೇರ್ ಶಾಪಿಂಗ್ ಮಾಡುವವರ ಗಮನದಲ್ಲಿರಬೇಕಾದ 5 ಸಂಗತಿಗಳು

Summer Fashion Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಸಮ್ಮರ್ ಫ್ಯಾಷನ್ (Summer Fashion Shopping) ಕಾಲ! ಹಿಂದಿನ ಸೀಸನ್ನ ಬೆಚ್ಚಗಿನ ಔಟ್‌ಫಿಟ್‌ಗಳನ್ನು ಧರಿಸಲು ಸಾಧ್ಯವೇ ಇಲ್ಲ ಎಂಬಂಥ ಕಾಲ! ಹೌದು. ಚಳಿಗಾಲದ ಯಾವುದೇ ಉಡುಪನ್ನು ಧರಿಸಿ ಹೊರಗೆ ಹೋಗುವುದಿರಲಿ, ಮನೆಯಲ್ಲೂ ಕೂಡ ಧರಿಸಲು ಸಾಧ್ಯವಿಲ್ಲ, ಆ ಮಟ್ಟಿಗೆ ಬೇಸಿಗೆ ಧಗೆ ಹಾಗೂ ಸೆಕೆ ಎಲ್ಲರನ್ನು ಆವರಿಸಿದೆ. ಹಾಗಾಗಿ, ಸಾಕಷ್ಟು ಮಂದಿ ಸಮ್ಮರ್ ಫ್ಯಾಷನ್‌ಗೆ ಮೊರೆ ಹೋಗುತ್ತಾರೆ. ಇದಕ್ಕೆ ಪೂರಕ ಎಂಬಂತೆ ಮಾರುಕಟ್ಟೆಯಲ್ಲಿ, ಮಾಲ್‌ಗಳಲ್ಲಿ ಹಾಗೂ ಶಾಪಿಂಗ್ ಸೆಂಟರ್‌ಗಳಲ್ಲಿ ಬೇಸಿಗೆಗೆ ಪೂರಕವಾಗುವಂತಹ ನಾನಾ ಬಗೆಯ ಸಮ್ಮರ್ ಫ್ಯಾಷನ್‌ವೇರ್ಸ್ ಲಗ್ಗೆ ಇಟ್ಟಿವೆ. ಸೋ, ಈ ಸೀಸನ್‌ನಲ್ಲಿ ಶಾಪಿಂಗ್ ಮಾಡುವವರು ಈ ಕೆಳಗಿನ ಒಂದೈದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.

ಶಾಪಿಂಗ್ ಪ್ಲಾನಿಂಗ್ ಮಾಡಿ

ಶಾಪಿಂಗ್ ಹೋಗುವ ಮುನ್ನವೇ ಯಾವ ಬಗೆಯ ಸಮ್ಮರ್ ಫ್ಯಾಷನ್‌ವೇರ್‌ಗಳನ್ನು ಕೊಳ್ಳುತ್ತಿದ್ದೀರಾ! ಯಾವ ವಯಸ್ಸಿನವರಿಗೆ, ಎಲ್ಲಿ ಗುಣಮಟ್ಟದ ಹಾಗೂ ರಿಸನಬಲ್ ದರದಲ್ಲಿ ಸೀಸನ್ ವೇರ್‌ಗಳು ದೊರೆಯುತ್ತವೆ? ಎಂಬುದನ್ನು ಮೊದಲೇ ಪ್ಲಾನ್ ಮಾಡಿ, ಹೊರಡಿ. ಇದರಿಂದ ಸಮಯ ವ್ಯಯವಾಗುವುದಿಲ್ಲ.

ಶಾಪಿಂಗ್‌ಗೆ ಆರಾಮದಾಯಕ ಔಟ್‌ಫಿಟ್ಸ್ ಧರಿಸಿ

ಸಮ್ಮರ್‌ನಲ್ಲಿ ಆರಾಮ ಎಂದೆನಿಸುವ ಉಡುಪುಗಳನ್ನು ಧರಿಸಿ, ಶಾಪಿಂಗ್ ಹೊರಡಿ. ಇಲ್ಲವಾದಲ್ಲಿ ಸೆಕೆ ಹೆಚ್ಚಾಗಿ ಕಿರಿಕಿರಿಯಾಗಬಹುದು. ಅಲ್ಲದೇ ಕೊಳ್ಳುವ ಹೊಸ ಉಡುಪುಗಳನ್ನು ಧರಿಸಿ, ಟ್ರಯಲ್ ಮಾಡಲು ಕಷ್ಟವಾಗಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಭಾರಿ ಉಡುಪು ಅಥವಾ ಲೇಯರ್ ಲುಕ್ ಇರುವಂತಹ ಔಟ್‌ಫಿಟ್‌ನಲ್ಲಿ ಶಾಪಿಂಗ್ ಹೊರಡಬೇಡಿ.

ಟ್ರೆಂಡಿ ಸಮ್ಮರ್ ಫ್ಯಾಷನ್‌ವೇರ್ ಆಯ್ಕೆ ಮಾಡಿ

ಪ್ರತಿ ಬಾರಿ ಸಮ್ಮರ್ ಫ್ಯಾಷನ್ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ಈ ಬಾರಿಯ ಫ್ಯಾಷನ್‌ನಲ್ಲಿ ಏನಿದೆ? ಯಾವ ಬಗೆಯ ಕಲರ್ ಹಾಗೂ ಔಟ್‌ಫಿಟ್‌ಗಳು ಆಗಮಿಸಿವೆ ಎಂಬುದನ್ನು ಮೊದಲೇ ತಿಳಿದು, ಶಾಪಿಂಗ್ ಮಾಡಿ. ಜಾಹೀರಾತು, ಲೇಖನಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾಷನ್ ಇನ್ಫೂಯೆನ್ಸರ್ಸ್ ಈ ಬಗ್ಗೆ ಮಾಹಿತಿ ನೀಡುತ್ತಾರೆ, ಓದಿ, ನೋಡಿ, ತಿಳಿದುಕೊಳ್ಳಿ.

ಲೈಟ್‌ ವೇಟ್ ಔಟ್‌ಫಿಟ್ ಖರೀದಿಸಿ

ಈ ಸೀಸನ್‌ ಫ್ಯಾಷನ್‌ಗೆ ಹೊಂದುವಂತಹ ಲೈಟ್‌ವೇಟ್ ಔಟ್‌ಫಿಟ್ಸ್ ಆಯ್ಕೆ ಮಾಡಿ. ಹೆಚ್ಚು ಭಾರವೆನಿಸುವ, ಓವರ್ ಡಿಸೈನ್ ಇರುವಂತಹ ಹಾಗೂ ಸಿಂಥೆಟಿಕ್ ಫ್ಯಾಬ್ರಿಕ್‌ನ ಉಡುಪುಗಳಿಗೆ ಬಾಯ್ ಬಾಯ್ ಹೇಳಿ. ಇದೀಗ ಲಭ್ಯವಿರುವ ಹಗುರವಾಗಿರುವ ಲೆನಿನ್, ಕಾಟನ್ ಡ್ರೆಸ್‌ಗಳಿಗೆ ಪ್ರಾಮುಖ್ಯತೆ ನೀಡಿ. ಅದರಲ್ಲೂ ಮಕ್ಕಳಿಗೆ ಕೊಳ್ಳುವುದಾದಲ್ಲಿ ಆದಷ್ಟೂ ಸಿಂಪಲ್ ಡ್ರೆಸ್‌ಗಳಿಗೆ ಆದ್ಯತೆ ನೀಡಿ. ನಿರ್ವಹಣೆ ಸುಲಭ ಆಗಿರುವಂತವನ್ನು ಖರೀದಿಸಿ.

ಬ್ರಾಂಡ್‌ಗಳ ಆಫರ್ಸ್‌ಗೆ ಮರಳಾಗಬೇಡಿ

ಯಾವುದೇ ಬ್ರಾಂಡ್‌ನ ಆಫರ್ಸ್ ಹಾಗೂ ಡಿಸ್ಕೌಂಟ್ಸ್‌ಗೆ ಮರುಳಾಗಿ ಹಳೇ ವಿನ್ಯಾಸದ್ದನ್ನು ಖರೀದಿಸಬೇಡಿ. ಯಾಕೆಂದರೇ, ಯಾವುದೇ ಕಾರಣಕ್ಕೂ ದಪ್ಪ ಫ್ಯಾಬ್ರಿಕ್‌ನ ಹಾಗೂ ಬ್ರೈಟ್ ಶೇಡ್‌ನ ಡಿಸೈನ್ ವೇರ್‌ಗಳು ಈ ಸೀಸನ್ ಫ್ಯಾಷನ್‌ಗೆ ಮ್ಯಾಚ್ ಆಗುವುದಿಲ್ಲ. ಜತೆಗೆ ಮ್ಯಾಚ್ ಆಗುವುದಿಲ್ಲ! ನ್ಯೂ ಅರೈವಲ್ ಕೆಟಗರಿಯಲ್ಲಿ ದೊರೆಯುವ ಬ್ರಿಥೆಬಲ್ ಔಟ್‌ಫಿಟ್ಸ್ ಖರೀದಿಸಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್‌ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?

Exit mobile version