Site icon Vistara News

Summer Fashion: ಬೇಸಿಗೆಯ ಗ್ಲಾಮರಸ್‌ ಲುಕ್‌ಗಾಗಿ ಬಂತು ಸ್ಟ್ರಾಪ್‌ ಡ್ರೆಸ್‌

Summer Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ನ ಬೇಸಿಗೆಗೆ ಸ್ಟ್ರಾಪ್‌ ಟಾಪ್‌ ಹಾಗೂ ಡ್ರೆಸ್‌ಗಳು ಟ್ರೆಂಡಿಯಾಗಿವೆ. ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ ಸ್ಪೆಗೆಟಿ, ಶೋಲ್ಡರ್‌ ಸ್ಟ್ರಾಪ್‌ ಹಾಗೂ ಬಾರ್ಡಟ್‌ ಸ್ಟ್ರಾಪ್‌ ಡ್ರೆಸ್‌ಗಳು ಟಾಪ್‌ಲಿಸ್ಟ್‌ನಲ್ಲಿವೆ. ಅವುಗಳಲ್ಲಿ ಕ್ಯಾಶುವಲ್‌, ಕೊಕ್ವಿಟಿಶ್‌, ಲೆಸ್ಡ್‌ ವೆಸ್ಟ್‌ ಸ್ಟ್ರಾಪ್‌, ಡೆನೀಮ್‌, ಸ್ಟ್ರೈಪ್ಡ್‌, ಫಿಟ್ಟೆಡ್‌, ಪೆಪ್ಲಂ, ಸ್ಪೆಗೆಟಿ, ಶೋಲ್ಡರ್‌ ಸ್ಟ್ರಾಪ್‌ ಟೀನೇಜ್‌ ಹುಡುಗಿಯರನ್ನು ಸೆಳೆದಿವೆ. ಇನ್ನು ಲೆಯರ್ಡ್‌, ಬಾರ್ಡಟ್‌, ಎ ಲೈನ್‌, ಬ್ಯಾಕ್‌ ಟಾಪ್‌, ಪ್ರಿಂಟೆಡ್‌, ಸಾಲಿಡ್‌ ಟಾಪ್‌, ಕೋಲ್ಡ್‌ ಶೋಲ್ಡರ್‌, ಟ್ಯಾಂಕ್‌, ಎಂಪೈರ್ಡ್‌ ಟಾಪ್‌ಗಳು ಕಾರ್ಪೊರೇಟ್‌ ಕ್ಷೇತ್ರ ಹಾಗೂ ವರ್ಕಿಂಗ್‌ ಮಹಿಳೆಯರನ್ನು ಸೆಳೆದಿವೆ. ಬೇಸಿಗೆಯ ವಿಕೇಂಡ್‌ ಔಟಿಂಗ್‌ಗೆ ತೆರಳುವವರು ಧರಿಸುವುದು ಹೆಚ್ಚಾಗಿದೆ.

ಮಾಡರ್ನ್ ಲುಕ್‌ ಪ್ರಿಯರ ಆಯ್ಕೆ

ಬೇಸಿಗೆಯಲ್ಲಿ ಸದಾ ಫುಲ್‌ ನೆಕ್‌ಲೈನ್‌ ಹಾಗೂ ಕಟ್‌ನಿಂದ ಬೇಸರವಾದವರು ಸ್ಟ್ರಾಪ್‌ ಟಾಪ್‌ ಅಥವಾ ಡ್ರೆಸ್‌ ಧರಿಸಿ ಕೊಂಚ ಬದಲಾದ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಅದರಲ್ಲೂ ಲೈಟ್‌ ಕಲರ್‌ನ ಪ್ರಿಂಟೆಡ್‌ ಸ್ಟ್ರಾಪ್‌ ಟಾಪ್‌ ಹಾಗೂ ಫ್ರಾಕ್‌ಗಳು ಇಂದು ಹೆಚ್ಚು ಫ್ಯಾಷನ್‌ನಲ್ಲಿವೆ. ಯಂಗ್‌ ಲುಕ್‌ ನೀಡುವ ಈ ಸ್ಟ್ರಾಪ್‌ ಟಾಪ್‌ಗಳು ಇಂದು ಟೀನೇಜ್‌ ಹುಡುಗಿಯರಿಗೆ ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾಡರ್ನ್‌ ಲುಕ್‌ ಬಯಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ. ಅದರಲ್ಲೂ ಫ್ಲೋಟಿ, ಟ್ಯಾಂಕ್‌ ಹಾಗೂ ಶೋಲ್ಡರ್‌ ಸ್ಟ್ರಾಪ್‌ ಟಾಪ್‌ಗಳಂತೆ ಕಾಣುವ ವಿನ್ಯಾಸದವು ನೋಡಲು ಮನಮೋಹಕವಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಗ್ಲಾಮರಸ್‌ ಲುಕ್‌ ಗ್ಯಾರಂಟಿ

ಗ್ಲಾಮರಸ್‌ ಲುಕ್‌ಗಾಗಿ ಸಾಕಷ್ಟು ಮಂದಿ ಈ ಸ್ಟ್ರಾಪ್‌ ಟಾಪ್‌ ಹಾಗೂ ಡ್ರೆಸ್‌ಗಳನ್ನು ಪ್ರಿಫರ್‌ ಮಾಡುತ್ತಾರೆ. ಸ್ಟ್ರಾಪ್‌ ಟಾಪ್‌ ವಿನ್ಯಾಸದಲ್ಲಿ ಆದಷ್ಟೂ ಎಲ್ಲವಕ್ಕೂ ಒಂದೇ ಬಗೆಯ ನೆಕ್‌ಲೈನ್‌ ಎನ್ನಬಹುದು. ಕೆಲವು ಫಿಟ್‌ ಆಗಿ ಕೂರುವುದಿಲ್ಲ. ಈ ಟಾಪ್‌ಗೆ ಡೆನೀಮ್‌ ಹಾಗೂ ತ್ರಿ ಫೋರ್ತ್‌ ಪ್ಯಾಂಟ್‌ಗಳು ಸೂಟ್‌ ಆಗುತ್ತವೆ ಎನ್ನುವ ಸ್ಟೈಲಿಸ್ಟ್‌ ರಾಶಿ ಪ್ರಕಾರ, ಸ್ಟ್ರಾಪ್‌ ಟಾಪ್‌ಗಳ ಸ್ಟಿಚ್ಚಿಂಗ್‌ ಹಾಗೂ ಕಟ್‌ ಇತರೇ ಟಾಪ್‌ಗಳಿಗಿಂತ ವಿಭಿನ್ನವಾಗಿರುತ್ತವಂತೆ.

ಸ್ಟ್ರಾಪ್‌ ಟಾಪ್‌ಗಳ ಮ್ಯಾಚಿಂಗ್‌ ಹೀಗಿರಲಿ

ಸ್ಟ್ರಾಪ್‌ ಟಾಪ್‌ಗಳಿಗೆ ಮ್ಯಾಚಿಂಗ್‌ ಮಾಡುವಾಗ ಹೀಗೆ ಮಾಡಿ. ಪ್ಯಾಂಟ್‌ ಹಾಗೂ ಕೇಪ್ರೀಸ್‌ಗಳ ಆಯ್ಕೆ ಮ್ಯಾಚ್‌ ಆಗುವಂತಿರಬೇಕು. ಇಲ್ಲವಾದಲ್ಲಿ, ನೋಡುವವರಿಗೆ ಅಭಾಸವಾಗಬಹುದು. ದಪ್ಪಗಿರುವವರು ಸ್ಟ್ರಾಪ್‌ ಟಾಪ್‌ ಧರಿಸುವುದರಿಂದ ಎಕ್ಸ್‌ಪೋಸ್‌ಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಆದಷ್ಟೂ ಸಿಂಪಲ್‌ ಶೇಡ್ಸ್‌ ಇರುವ ಸ್ಟ್ರಾಪ್‌ ಟಾಪ್‌ ಆಯ್ಕೆ ಮಾಡಿಕೊಳ್ಳಿ. ಸ್ಟ್ರಾಪ್‌ ಟಾಪ್‌ ಧರಿಸಿದಾಗ ಆಕ್ಸೆಸರೀಸ್‌ ಧರಿಸಿ. ಇದು ಸ್ಕಿನ್‌ ಕವರ್‌ ಆಗಲು ಸಹಕಾರಿ.

ಸ್ಟ್ರಾಪ್‌ ಡ್ರೆಸ್‌ಕೋಡ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ನಿಮ್ಮ ಫ್ಯಾಷನ್‌ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ!

Exit mobile version