ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡಿಯನ್ ಎಥ್ನಿಕ್ ಫ್ಯಾಷನ್‌ನಲ್ಲಿ (Summer Fashion) ಇದೀಗ ಸ್ಟ್ರಾಪ್ ಸಲ್ವಾರ್ ಕಮೀಝ್‌ಗಳು ಗ್ಲಾಮರಸ್ ಫ್ಯಾಷನ್ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಹೌದು. ಈ ಸೀಸನ್‌ನ ಬಿಂದಾಸ್ ಎಥ್ನಿಕ್ ಫ್ಯಾಷನ್‌ನಲ್ಲಿ, ಇದೀಗ ಜೆನ್ ಜಿ ಹುಡುಗಿಯರನ್ನು ಬರ ಸೆಳೆದಿವೆ. ಸುಡು ಬಿಸಿಲಲ್ಲೂ ಆರಾಮ ಎನಿಸುವ ಈ ಗ್ಲಾಮರಸ್ ಲುಕ್ ನೀಡುವ ವೈವಿಧ್ಯಮಯ ಸ್ಟ್ರಾಪ್ ಸಲ್ವಾರ್ ಕಮೀಝ್‌ಗಳು ಫ್ಯಾಷನ್ ಪ್ರಿಯ ಹುಡುಗಿಯರ ವಾರ್ಡ್ರೋಬ್ ಸೇರಿವೆ.
ಡಿಸೈನರ್ ಸ್ಟ್ರಾಪ್ ಸಲ್ವಾರ್ ಕಮೀಝ್
ಸ್ಪೆಗೆಟಿ ಸ್ಟ್ರಾಫ್, ನೂಡಲ್ಸ್ ಸ್ಟ್ರಾಪ್ ಹಾಗೂ ಟ್ಯಾಂಕ್ ಟಾಪ್ ಶೈಲಿಯ ಸ್ಟ್ರಾಪ್ ಸಲ್ವಾರ್ ಕಮೀಝ್‌ಗಳು ಇಂದು ಟ್ರೆಂಡಿಯಾಗಿವೆ. ಇವುಗಳಲ್ಲೇ ಸ್ಟ್ರಾಪ್ ಜಾಗದಲ್ಲಿ ಬೀಡ್ಸ್‌ನಿಂದ ಡಿಸೈನ್ ಮಾಡಿರುವಂತವು, ಲೇಸ್, ಎಂಬ್ರಾಯ್ಡರಿ, ಥ್ರೆಡ್ ವರ್ಕ್ ಹೀಗೆ ನಾನಾ ವಿನ್ಯಾಸದ ಡಿಸೈನ್‌ನ ಎಥ್ನಿಕ್ ಲುಕ್ ನೀಡುವಂತಹ ಕುರ್ತಾಗಳು ಕೂಡ ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ನೂಡಲ್ಸ್ ಸ್ಟ್ರಾಪ್ ಕಮೀಝ್
ತೆಳ್ಳಗಿನ ಸ್ಟ್ರಾಪ್ ಹೊಂದಿರುವಂತಹ ಕಮೀಝ್ ಹಾಗೂ ಕುರ್ತಾಗಳು ನೋಡಲು ಗ್ಲಾಮರಸ್ ಲುಕ್ ನೀಡುವುದರೊಂದಿಗೆ ಎಥ್ನಿಕ್ ಟಚ್ ನೀಡುತ್ತವೆ. ಈ ಕಮೀಝ್‌ನಲ್ಲಿ ಎಥ್ನಿಕ್ ಟಚ್ ನೀಡುವ ಗ್ರ್ಯಾಂಡ್ ಡಿಸೈನ್‌ಗಳು ಮತ್ತಷ್ಟು ಮೆರುಗು ನೀಡುತ್ತವೆ. ಸ್ಲಿವ್‌ಲೆಸ್ ನೆಕ್‌ಲೈನ್‌ಗಿಂತ ಈ ನೂಡಲ್ಸ್ ಸ್ಟ್ರಾಪ್ ಕಮೀಝ್ ಜೆನ್ ಜಿಯ ಚಾಯ್ಸ್‌ನಲ್ಲೊಂದಾಗಿದೆ ಎನ್ನುತ್ತಾರೆ.
ಸ್ಪೆಗೆಟಿ ಸ್ಟ್ರಾಪ್ ಕಮೀಝ್
ಗ್ರ್ಯಾಂಡ್ ಡಿಸೈನ್‌ನ ಎಥ್ನಿಕ್ ಲುಕ್ ಇರುವ ಕೆಲವು ಕಮೀಝ್‌ಗಳು ಸ್ಪೆಗೆಟಿ ವಿನ್ಯಾಸ ಹೊಂದಿರುತ್ತವೆ. ಅಂದರೆ, ಟೈಯಿಂಗ್ ಆಪ್ಷನ್ ಹೊಂದಿರುತ್ತವೆ. ಆದರೆ ಇವುಗಳನ್ನು ಧರಿಸುವಾಗ ಆದಷ್ಟೂ ಕೇರ್‌ಫುಲ್ ಆಗಿರಬೇಕು. ಇಲ್ಲವಾದಲ್ಲಿ ಮುಜುಗರ ಎದುರಿಸುವ ಸಂದರ್ಭಗಳು ಎದುರಾಗಬಹುದು. ಇದಕ್ಕೆ ಪರ್ಯಾಯ, ನೋಡಲು ಟೈಯಿಂಗ್‌ನಂತೆ ಸ್ಟಿಚ್ಚಿಂಗ್ ಮಾಡಿಸಬಹುದು ಎನ್ನುತ್ತಾರೆ ಡಿಸೈನರ್ಸ್.
ಸ್ಟ್ರಾಪ್ ಸಲ್ವಾರ್ ಕಮೀಝ್ ಪ್ರಿಯರಿಗೆ 3 ಐಡಿಯಾ
- ನೆಕ್ಲೈನ್ ಇಲ್ಲದಿರುವುದರಿಂದ ಬಿಗ್ ಚೋಕರ್ ಅಥವಾ ನೆಕ್ಲೇಸ್ ಧರಿಸಬಹುದು.
- ಪರ್ಸನಾಲಿಟಿಗೆ ಮ್ಯಾಚ್ ಆಗುವಂತಹ ವಿನ್ಯಾಸದ್ದನ್ನೇ ಧರಿಸಿ.
- ಹೆವ್ವಿ ಡಿಸೈನ್ ಆಯ್ಕೆ ಬೇಡ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಇದು ಟ್ರಾವೆಲ್ ಫ್ಯಾಷನ್; ಟ್ರೆಂಡಿಯಾಗಿದೆ ಲೈಟ್‌ವೈಟ್ ಟೈ ಡೈ ಡ್ರೆಸ್