ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟೊರ್ನ್ ಶಾಟ್ರ್ಸ್ ಟ್ರೆಂಡ್ ಇದೀಗ ಸಮ್ಮರ್‌ನ ಹಾಟ್ ಗ್ಲಾಮರಸ್ ಫ್ಯಾಷನ್‌ಗೆ (Summer Fashion) ಸೇರಿದೆ. ಹೌದು. ಬೇಸಿಗೆಯಲ್ಲಿ ಗ್ಲಾಮರ್ ಲುಕ್‌ಗೆ ಸಾಥ್ ನೀಡುವ ಈ ಬಗೆಬಗೆಯ ಟೊರ್ನ್ ಶಾಟ್ರ್ಸ್ ಇದೀಗ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವುದು ಮಾತ್ರವಲ್ಲ, ಜೆನ್ ಜಿ ಬಿಂದಾಸ್ ಹುಡುಗಿಯರು ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.
ಸ್ಟಾರ್‌ಗಳ ಫೇವರೇಟ್ ಔಟ್‌ಫಿಟ್
ಇನ್ನೊಂದು ವಿಷಯವೇನೆಂದರೆ ಈ ಟೋರ್ನ್ ಪ್ಯಾಂಟ್ಸ್ ಸ್ಟಾರ್‌ಗಳ ಫ್ಯಾಷನ್ ಬೆಡಗಿಯರ ಫೇವರೇಟ್ ಸಮ್ಮರ್ ಉಡುಪು ಎನ್ನಬಹುದು. ಆ ಮಟ್ಟಿಗೆ ಇವು ಅವರ ವಾರ್ಡ್ರೋಬ್‌ನಲ್ಲಿ ಸ್ಥಾನ ಗಳಿಸಿದೆ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್‌ಗಳು.
ಅದರಲ್ಲೂ ಜೀನ್ಸ್ ಫ್ಯಾಬ್ರಿಕ್‌ನ ಟೋರ್ನ್ ಶಾಟ್ರ್ಸ್ ಬಾಲಿವುಡ್ ತಾರೆಯರ ಫೇವರೇಟ್ ಔಟ್‌ಫಿಟ್‌ಗಳಲ್ಲೊಂದಾಗಿದೆ. ಇದರೊಂದಿಗೆ ಧರಿಸುವ ಕ್ರಾಪ್ ಟಾಪ್, ಟ್ಯಾಂಕ್ ಟಾಪ್ ಹಾಗೂ ಮಿನಿ ಟಾಪ್‌ಗಳು ಇಡೀ ಲುಕ್ಕನ್ನು ಕಂಪ್ಲೀಟ್ ಬದಲಿಸುತ್ತವೆ. ಅತಿ ಸುಲಭವಾಗಿ ಗ್ಲಾಮರಸ್ ಲುಕ್ ನೀಡುತ್ತವೆ. ಹಾಗಾಗಿ ಈ ಟೊರ್ನ್ ಶಾಟ್ರ್ಸ್ ಪ್ರಿಯರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಏನಿದು ಟೊರ್ನ್ ಶಾಟ್ರ್ಸ್ ?
ನೋಡಲು ಅಂಚಿನಲ್ಲಿ ಹೊಲಿಗೆ ಬಿಟ್ಟಂತೆ ಕಾಣುವ, ಇಲ್ಲವೇ ಶಾಟ್ರ್ಸ್ ಮಧ್ಯೆ ಹರಿದಂತೆ ಕಾಣುವ ಪ್ಯಾಚ್ ವರ್ಕ್ ಜೊತೆಗೆ ಕಟೌಟ್ ಆಗಿರುವ ಶಾಟ್ರ್ಸ್ ಇವು. ಟೊರ್ನ್ ಪ್ಯಾಂಟ್‌ಗಳಂತೆ ಇವು ಕೂಡ ಚಿಂದಿ ಲುಕ್ ಹೊಂದಿರುತ್ತವೆ. ಪ್ಯಾಂಟ್ ಉದ್ದನಾಗಿರುತ್ತದೆ. ಇದಕ್ಕೆ ಹೊಲಿಸಿದಲ್ಲಿ ಶಾರ್ಟ್ಸ್‌ನಲ್ಲಿ ಕಡಿಮೆ ಜಾಗವಿರುವುದರಿಂದ ಇರುವುದರಲ್ಲೆ ಕೌಟೌಟ್, ಇಲ್ಲವೇ ಟೊರ್ನ್ ಆಗಿರುತ್ತದೆ ಎನ್ನುತ್ತಾರೆ ಸ್ಟೈಲಿಂಗ್ ಎಕ್ಸ್‌ಪರ್ಟ್‌ಗಳು.
ವೈವಿಧ್ಯಮಯ ಟೊರ್ನ್ ಶಾಟ್ರ್ಸ್
ಜೀನ್ಸ್‌ನ ಟೊರ್ನ್ ಪ್ಯಾಂಟ್‌ಗಳಲ್ಲೂ ನಾನಾ ಬಗೆಯವು ದೊರೆಯುತ್ತವೆ. ಬ್ಲಾಕ್, ಬ್ಲ್ಯೂ , ಗ್ರೇ ಜೀನ್ಸ್ ಫ್ಯಾಬ್ರಿಕ್‌ನಿಂದಿಡಿದು ಸಾಫ್ಟ್ ಫ್ಯಾಬ್ರಿಕ್‌ನವು ಲಭ್ಯ. ಆದರೆ, ಜೀನ್ಸ್ ಟೊರ್ನ್ ಶಾಟ್ರ್ಸ್ ಲುಕ್ ಸಿಗುವುದಿಲ್ಲ. ಅಚ್ಚರಿ ಎಂಬವಂತೆ ಕಾಟನ್ ಹಾಗೂ ರಯಾನ್ ಫ್ಯಾಬ್ರಿಕ್‌ನ ಟೊರ್ನ್ ಶಾಟ್ರ್ಸ್ ಕೂಡ ಸಿಗುತ್ತವೆ. ಇವು ಸ್ಟಿಫ್ ಆಗಿ ಕಾಣುವುದಿಲ್ಲ ಅಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟೊರ್ನ್ ಶಾಟ್ರ್ಸ್ ಪ್ರಿಯರೇ ಗಮನಿಸಿ
- ಔಟಿಂಗ್, ವೀಕೆಂಡ್ಗೆ ಈ ಔಟ್‌ಫಿಟ್ ಬೆಸ್ಟ್.
- ಸಂದರ್ಭಕ್ಕೆ ತಕ್ಕಂತೆ ಧರಿಸುವುದು ಸೂಕ್ತ.
- ಪ್ಲಂಪಿಯಾಗಿರುವವರಿಗೆ ನಾಟ್ ಓಕೆ.
- ಉದ್ದಗಿರುವವರಿಗೆ ಬೆಸ್ಟ್ ಔಟ್‌ಫಿಟ್.
- ಈ ಸೀಸನ್ಗೆ ಮಾತ್ರ ಮ್ಯಾಚ್ ಆಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Fashionable Mothers : ಸ್ಯಾಂಡಲ್‌ವುಡ್‌ನ 5 ಸ್ಟೈಲಿಶ್ ಅಮ್ಮಂದಿರಿವರು