ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್ ಕೂಲ್ ಫ್ಯಾಷನ್‌ನಲ್ಲಿ (Summer Fashion) ಕಲರ್‌ಫುಲ್ ರಾಂಪರ್‌ಗಳು ಎಂಟ್ರಿ ನೀಡಿವೆ. ನೋಡಲು ಯಂಗ್ ಲುಕ್ ನೀಡುವ ಈ ಡ್ರೆಸ್‌ಗಳು ಟೀನೇಜ್ ಹುಡುಗಿಯರನ್ನು ಮಾತ್ರವಲ್ಲ, ಎಲ್ಲ ವರ್ಗದವರನ್ನು ಸೆಳೆಯುತ್ತಿವೆ. ಅವುಗಳಲ್ಲಿ ಸಮ್ಮರ್ ಸೀಸನ್‌ಗೆ ಸೂಟ್ ಆಗುವಂತಹ ಮೂರು ಶೈಲಿಯ ಫ್ಲೋರಲ್ ರಾಂಪರ್ ಸೂಟ್ ಬೇಡಿಕೆ ಸೃಷ್ಟಿಸಿಕೊಂಡಿವೆ. ಇನ್ನು, ಈ ಹಿಂದೆ ಚಾಲ್ತಿಯಲ್ಲಿದ್ದ ಸ್ಟ್ರೈಪ್ಸ್, ಪೋಲ್ಕಾ ಡಾಟ್ಸ್ ಸೈಡಿಗೆ ಸರಿದಿವೆ. ಕ್ಯಾನ್ವಾಸ್ ಡಿಸೈನ್, ಫ್ಲೋರಲ್ ಟ್ರಾಪಿಕಲ್ ಪ್ರಿಂಟ್ಸ್‌ನ ಆಫ್ ಶೋಲ್ಡರ್, ಫ್ರಿಲ್ ರಾಂಪರ್ ಶೈಲಿಯವು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ಸ್. ರಾಂಪರ್ ಸೂಟ್ ಫಿಟ್ ಆಗಿರುವುದಿಲ್ಲ. ದೊಗಳೆಯಾಗಿರುತ್ತದೆ. ಸಮ್ಮರ್ ಔಟ್‌ಫಿಟ್ ಆಗಿರುವ ಕಾರಣ ಸೆಖೆಯಾಗದಂತೆ ಡಿಸೈನ್ ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್. ಫ್ಲೋರಲ್ ಗ್ಲಾಮರಸ್ ರಾಂಪರ್ ಈ ಸೀಸನ್‌ನ ಬೆಸ್ಟ್ ಔಟ್‌ಫಿಟ್.
ಮಾನೋಕ್ರೋಮ್ ರಾಂಪರ್
ಮಾನೋಕ್ರೋಮ್ ರಾಂಪರ್ ಇದೀಗ ಚಾಲ್ತಿಯಲ್ಲಿದೆ. ಅದರಲ್ಲೂ ಲೈಟ್ ಹಾಗೂ ಬ್ರೈಟ್ ಶೇಡ್‌ಗಳು ಹೆಚ್ಚು ಯುವತಿಯರನ್ನು ಸೆಳೆಯುತ್ತಿವೆ. ಇವು ಸಾದಾ ವಿನ್ಯಾಸದಲ್ಲಿ ಮಾತ್ರವಲ್ಲ, ಕೋಲ್ಡ್ ಶೋಲ್ಡರ್ ಹಾಗೂ ಆಫ್ ಶೋಲ್ಡರ್ ವಿನ್ಯಾಸದಲ್ಲೂ ಬಂದಿವೆ.
ಡಬ್ಬಲ್ ಪೀಸ್ ರಾಂಪರ್
ಡಬ್ಬಲ್ ಪೀಸ್ ರಾಂಪರ್‌ಗಳು ನೋಡಲು ದೂರದಿಂದ ಟೀ ಶರ್ಟ್ ಮೇಲೆ ಸ್ಕರ್ಟ್‌ನಂತೆ ಕಾಣಿಸುತ್ತವೆ. ಇವು ಡಂಗ್ರೀಸ್ ಸ್ಟೈಲ್‌ನಲ್ಲೂ ದೊರೆಯುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ನೋಡಲು ದೊಗಲೆಯಾಗಿರುವಂತೆ ಕಂಡರೂ ಫಿಟ್ ಆಗಿರುವ ಫ್ಲೋರಲ್ ರಾಂಪರ್ ಕೂಡ ಸಾಕಷ್ಟು ವಿನ್ಯಾಸದಲ್ಲಿ ಲಭ್ಯ.
ಫ್ಲೋರಲ್ ವಿನ್ಯಾಸದ ರಾಂಪರ್
ಫ್ಲೋರಲ್ ರಾಂಪರ್ ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಲಭ್ಯ. ಅದರಲ್ಲೂ ಸಮ್ಮರ್‌ಗೆಂದು ಕಾಟನ್ ಹಾಗೂ ಸಾಫ್ಟ್ ಫ್ಯಾಬ್ರಿಕ್‌ನಲ್ಲಿ ಫ್ಲೋರಲ್ ಪ್ರಿಂಟ್‌ನ ರಾಂಪರ್‌ಗಳು ಲಗ್ಗೆ ಇಟ್ಟಿವೆ. ಈ ಶೈಲಿಯ ರಾಂಪರ್‌ಗಳು ಫ್ರೆಶ್ ಫೀಲಿಂಗ್ ನೀಡುವುದರೊಂದಿಗೆ ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಡಿಸೈನರ್.
ರಾಂಪರ್ ಹಿಸ್ಟರಿ
ಬ್ರಿಟನ್‌ನಲ್ಲಿ ಮಗುವಿನ ಡ್ರೆಸ್ ಆಗಿ ಬಳಸುತ್ತಿದ್ದ ಈ ಉಡುಪು ಬರಬರುತ್ತಾ ಫ್ಯಾಷನ್‌ವೇರ್ ಆಯಿತು. ಸಿಂಗಲ್ ಪೀಸ್‌ನಲ್ಲೆನಾನಾ ರಾಂಪರ್ ಡ್ರೆಸ್‌ಗಳು ಬಿಡುಗಡೆಗೊಂಡವು. ಅದರಲ್ಲೂ ಕೊಂಚ ಗ್ಲಾಮರಸ್ ಲುಕ್ ನೀಡಬಲ್ಲ ಸ್ಲಿಪ್‌ರಾಂಪರ್ ಹಾಗೂ ಆಫ್ ಶೋಲ್ಡರ್ ರಾಂಪರ್, ಹಾಲ್ಟರ್ ನೆಕ್ ರಾಂಪರ್, ಫ್ರಿಲ್, ರಫಲ್ಸ್ ರಾಂಪರ್ ಉಡುಪುಗಳು ಹೆಚ್ಚು ಟ್ರೆಂಡಿಯಾದವು.
ಸಮ್ಮರ್ ಫ್ಲೋರಲ್ ರಾಂಪರ್ ಟ್ರಿಕ್ಸ್
- ಟ್ರೆಡಿಷನಲ್ ಇಮೇಜ್ ಇರುವವರಿಗೆ ಮ್ಯಾಚ್ ಆಗದು.
- ರಾಂಪರ್ ಧರಿಸುವವರು ಕಾಲಿಗೆ ವ್ಯಾಕ್ಸ್ ಮಾಡುವುದು ಅಗತ್ಯ. ಇಲ್ಲವಾದಲ್ಲಿ ಸ್ಟಾಕಿನ್ಸ್ ಧರಿಸಿ.
- ಸ್ಲಿಮ್ ಆಗಿರುವವರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
- ಔಟಿಂಗ್ಗೆ ಹೇಳಿ ಮಾಡಿಸಿದ ಔಟ್‌ಫಿಟ್ ಇದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Colombo Fashion Week: ಕೊಲೊಂಬೊ ಫ್ಯಾಷನ್ ವೀಕ್‌ನಲ್ಲಿ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ