Site icon Vistara News

Summer Hair Style Trend : ಬೇಸಿಗೆಗೆ ತಕ್ಕಂತೆ ಬದಲಾಗುವ ಕೇಶ ವಿನ್ಯಾಸಕ್ಕೆ ಬಂತು ನಾನಾ ಹೇರ್‌ಶೇಡ್ಸ್

Summer Hair Style Trend

Summer Hair Style Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಬಿಸಿಲ ಬೇಗೆಗೆ ತಕ್ಕಂತೆ ನಾನಾ ಬಗೆಯ ಕೇಶವಿನ್ಯಾಸಗಳು (Summer Hair Style Trend) ಬೇಸಿಗೆಗೆ ತಕ್ಕಂತೆ ಬದಲಾಗುವ ಕೇಶ ವಿನ್ಯಾಸಕ್ಕೆ ಬಂತು ನಾನಾ ಹೇರ್‌ ಶೇಡ್ಸ್ ಲಗ್ಗೆ ಇಟ್ಟಿದ್ದು, ಇದಕ್ಕೆ ಹೊಂದುವಂತಹ ವೆರೈಟಿ ಹೇರ್‌ ಶೇಡ್‌ಗಳು ಆಗಮಿಸಿವೆ. ಇದಕ್ಕೆ ಪೂರಕ ಎಂಬಂತೆ, ನಾನಾ ಶೈಲಿಯ ಸ್ಪೈಕ್‌ ಹಾಗೂ ಶಾರ್ಟ್‌ ಕಟ್‌ ಕೇಶವಿನ್ಯಾಸಗಳು ಪುರುಷರನ್ನು ಸಮ್ಮೋಹನಗೊಳಿಸಿದ್ದರೆ, ಚಾಕೊಲೇಟ್‌, ತೈಲ ಕೆಂಪು ಮಿಶ್ರಿತ, ಬರ್ಗಂಡಿ ಶೇಡ್‌ ಜತೆಗೆ ಬಂಗಾರದ ವರ್ಣಗಳಿಂದ ಮಿನುಗುವ ಸ್ಟ್ರೀಕ್ಸ್ ಮಾನಿನಿಯರ ಕೇಶರಾಶಿಯನ್ನು ಬಿಸಿಲ ಕಿರಣಗಳಿಗೆ ಮಿನುಗುಸುತ್ತಿವೆ. ಇದಕ್ಕೆ ಕಾಲೇಜು ಕ್ಯಾಂಪಸ್‌ಗಳು ಹೊರತಾಗಿಲ್ಲ. ಟಿನೇಜ್‌ ಹುಡುಗ-ಹುಡುಗಿಯರನ್ನು ನಾನಾ ಶಾರ್ಟ್ ಹೇರ್‌ಕಟ್‌ಗಳು ಸವಾರಿ ಮಾಡತೊಡಗುತ್ತಿವೆ. ಕೆಲವರು ಗುಂಗುರು ಕೂದಲನ್ನು ಸ್ಪ್ರೇಟ್‌ ಮಾಡಿಸಿದರೇ, ಇನ್ನು ಕೆಲವರು ನೆಟ್ಟಗಿರುವುದನ್ನು ರೆಕ್ಕೆ-ಪುಕ್ಕದಂತೆ ಗುಂಗುರಾಗಿಸುತ್ತಿದ್ದಾರೆ.

Summer Hair Style Trend

ಸಮ್ಮರ್‌ ಹೇರ್‌ಸ್ಟೈಲ್‌

ಬೇಸಿಗೆ ಕಾಲದಲ್ಲಿ ಪ್ರತಿಬಾರಿಯೂ ಸಾಮಾನ್ಯವಾಗಿ ಗಿಡ್ಡನೆಯ ಕೇಶ ವಿನ್ಯಾಸ ಹಾಗೂ ಕಲರಿಂಗ್‌ ಮಾಡುವುದು ಚಾಲ್ತಿಗೆ ಬರುತ್ತವೆ. ಆದರೆ, ಈ ಬಾರಿ ತೀರಾ ಉದ್ದವಲ್ಲದ ಹಾಗೂ ಗಿಡ್ಡವಿರದ ಸ್ಟೆಪ್ಸ್‌, ಲೇಯರ್‌ ಅಥವಾ ಚಾಪ್ಡ್‌ ಹೇರ್‌ಕಟ್‌ಗಳು ಯುವತಿಯರನ್ನು ಸೆಳೆದಿವೆ. ಇನ್ನು ಜೆಲ್‌ ಬಳಸಿ ಆಕಾರ ನೀಡುವ ಡಿಫರೆಂಟ್‌ ಶಾರ್ಟ್ ಸ್ಪೈಕ್‌ ಕಟ್‌ ಹುಡುಗರನ್ನು ಸೆಳೆದಿವೆ ಎನ್ನುತ್ತಾರೆ ಗ್ರೂಮಿಂಗ್‌ ಸ್ಪೆಷಲಿಸ್ಟ್‌ ರಿಚರ್ಡ್.

Summer Hair Style Trend

ಬದಲಾದ ಹೇರ್‌ ಕಲರ್‌ ಕಾನ್ಸೆಪ್ಟ್‌

ಇಂದು ಬಿಳಿ ಕೂದಲಾದಲ್ಲಿ ಮಾತ್ರ ಹೇರ್‌ ಕಲರ್‌ ಹಾಕಬೇಕು ಎಂಬ ಕಾನ್ಸೆಪ್ಟ್‌ ಮಾಯವಾಗಿದೆ. ಇದೀಗ ಎಲ್ಲಾ ವಯಸ್ಸಿನವರು ಹೇರ್‌ ಕಲರ್‌ ಪ್ರಯೋಗಿಸುತ್ತಿರುವುದು ಕಾಮನ್‌ ಆಗಿದೆ. ಕಾಲೇಜು ಹುಡುಗ-ಹುಡುಗಿಯರು ಮಾತ್ರವಲ್ಲ, ಮಧ್ಯ ವಯಸ್ಕ ಪುರುಷರು, ಮಹಿಳೆಯರೂ ಕೂಡ ಕೂದಲಿಗೆ ಕೇವಲ ಕಪ್ಪು ಕಲರ್‌ ಮಾತ್ರವಲ್ಲದೇ ಇತರೇ ಡಾರ್ಕ್‌ ರೆಡ್‌ ಶೇಡ್ಸ್‌ ಕೇಶ ರಂಗಿಗೆ ಮೊರೆ ಹೋಗುತ್ತಿದ್ದಾರೆ.

ಹೀಗಿರಲಿ ಕೇಶ ವಿನ್ಯಾಸ

ಉದ್ದ ಮುಖದವರಿಗೆ ಗಿಡ್ಡನೆಯ ಕೇಶ ವಿನ್ಯಾಸ ಹೊಂದದು. ದುಂಡಗಿರುವವರಿಗೆ ಚಾಪ್ಡ್‌ ಇಲ್ಲವೇ ಅಲೆಗಳಂತೇ ನಿಲ್ಲುವಂತದ್ದು ಹೊಂದುತ್ತದೆ. ಹೃದಯಾಕಾರದ ಮುಖದವರಿಗೆ ಗಿಡ್ಡನೆಯ ಕೇಶ ವಿನ್ಯಾಸ ಓಕೆ. ಚತುರ್ಭುಜ ಮುಖದ ಆಕಾರ ಇರುವವರಿಗೆ ಸ್ಟ್ರೇಟ್‌ ಕಟ್‌ ಮ್ಯಾಚ್‌ ಆಗುತ್ತದೆ. ಎರಡು ಕಿವಿಗಳನ್ನು ಆದಷ್ಟು ಮುಚ್ಚುವ ವಿನ್ಯಾಸವೂ ಓಕೆ. ಇನ್ನು ಮೊಟ್ಟೆಯಾಕಾರದ ಅಥವಾ ಚಿಕ್ಕ ಮುಖದವರಿಗೆ ಕರ್ಲಿ ಹೇರ್‌ ಕಟ್‌ ಹಾಗೂ ವೆವ್ವಿ ಹೇರ್‌ಕಟ್‌ ಆಕರ್ಷಕವಾಗಿ ಕಾಣುತ್ತದೆ. ಇನ್ನು ಕಲರ್‌ ಹಾಕಿಸುವಾಗ ಆದಷ್ಟೂ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಎನ್ನುತ್ತಾರೆ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್‌ ಸಪ್ನಾ.

Summer Hair Style Trend

ಬೇಸಿಗೆಯ ಹೇರ್‌ಸ್ಟೈಲ್‌ ಬದಲಿಸುವವರಿಗೆ 4 ಸಲಹೆಗಳು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್‌ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?

Exit mobile version