ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಆರಂಭವಾಗಿದೆ. ನೋಡಲು ಆಕರ್ಷಕವಾದ ಮಕ್ಕಳ ಫ್ಯಾಷನ್‌ವೇರ್‌ಗಳು (Summer kids Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಲೆಕ್ಕವಿಲ್ಲದಷ್ಟು ವಿನ್ಯಾಸದ ಮನಮೋಹಕ ಉಡುಪುಗಳು ಕಣ್ಮನ ಸೆಳೆಯುತ್ತಿವೆ. ಹಾಗೆಂದು ಪೋಷಕರು ಕಣ್ಣಿಗೆ ಅಂದವೆನಿಸುವ ಉಡುಪುಗಳನ್ನು ಕೊಂಡು ತಂದು ನಂತರ ಮಕ್ಕಳು ಧರಿಸದಿದ್ದಾಗ ಬೇಸರವಾಗಬಹುದು. ಹಾಗಾಗಿ ಮಕ್ಕಳಿಗೆ ಬೇಸಿಗೆಯಲ್ಲಿ ರಂಗು ರಂಗಿನ ಉಡುಪುಗಳನ್ನು ಗ್ರ್ಯಾಂಡ್ ವಿನ್ಯಾಸದವನ್ನು ಖರೀದಿಸುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ ಒಂದೈದು ಸಲಹೆಗಳನ್ನು ಸ್ಟೈಲಿಸ್ಟ್‌ಗಳು ನೀಡಿದ್ದಾರೆ.
ಕಂಫರ್ಟಬಲ್ ಫ್ಯಾಷನ್‌ವೇರ್ ಆಯ್ಕೆ ಮಾಡಿ
ಡಿಸೈನ್ ಹಾಗೂ ಬ್ರಾಂಡ್ ಪ್ರಾಮುಖ್ಯತೆ ಕೊಡುವ ಮೊದಲು ಮಕ್ಕಳಿಗೆ ಇವು ಕಂಫರ್ಟಬಲ್ ಫೀಲ್ ಆಗುತ್ತವೆಯೇ ಎಂಬುದನ್ನು ಮನಗಾಣಿ. ಕಣ್ಣಿಗೆ ಸೆಳೆಯಿತು ಎಂಬ ಕಾರಣಕ್ಕೆ ಕೊಳ್ಳಬೇಡಿ. ಹೆಚ್ಚು ಡಿಸೈನ್ ಇದ್ದಷ್ಟು ಮಕ್ಕಳಿಗೆ ಧರಿಸಲು ಕಿರಿಕಿರಿಯಾಗಬಹುದು. ಹಾಗಾಗಿ ಆದಷ್ಟೂ ಸಿಂಪಲ್ ಡಿಸೈನ್‌ಗೆ ಪ್ರಾಮುಖ್ಯತೆ ನೀಡಿ.
ಬೇಸಿಗೆಯಲ್ಲಿ ಕಾಟನ್ ಫ್ಯಾಬ್ರಿಕ್ವೇರ್ಗೆ ಆದ್ಯತೆ
ಈ ಸಮ್ಮರ್ ಸೀಸನ್‌ನಲ್ಲಿ ಮಕ್ಕಳಿಗೆ ಆಯ್ಕೆ ಮಾಡುವಾಗ ಆದಷ್ಟೂ ಬ್ರಿಥೆಬಲ್ ಫ್ಯಾಬ್ರಿಕ್ ಅಥವಾ ಕಾಟನ್ ಉಡುಪುಗಳಿಗೆ ಆದ್ಯತೆ ನೀಡಿ. ಇವು ಚರ್ಮಕ್ಕೂ ಹಿತ. ಸೆಕೆಯಾಗುವುದಿಲ್ಲ. ಆರೋಗ್ಯಕ್ಕೂ ಉತ್ತಮ. ಇದೀಗ ಕಾಟನ್‌ನ್ನಲ್ಲಿ ನಾನಾ ಡಿಸೈಗಳು ದೊರೆಯುತ್ತಿವೆ. ನಿಮ್ಮ ಮಕ್ಕಳಿಗೆ ಇಷ್ಟವಾಗುವಂತಹ ವಿನ್ಯಾಸದವನ್ನು ಖರೀದಿಸಿ.
ಫ್ರೀ ಸೈಝ್ ಅನ್ನು ಸೆಲೆಕ್ಟ್ ಮಾಡಿ
ಯಾವುದೇ ಕಾರಣಕ್ಕೂ ಫಿಟ್ ಆಗಿರುವ ಫ್ಯಾಷನ್ವೇರ್ ಆಯ್ಕೆ ಮಾಡಿ. ದೊಗಲೆಯಾಗಿದ್ದಷ್ಟು ಉತ್ತಮ. ಇಲ್ಲವಾದಲ್ಲಿ ಸ್ಕಿನ್ ಅಲರ್ಜಿಯಾಗಬಹುದು. ಬೆಳೆಯುವ ಮಕ್ಕಳಿಗೆ ಯಾವುದೇ ಕಾರಣಕ್ಕೂ ತೀರಾ ಬಿಗಿಯಾದ ಉಡುಪು ಹಾಕಕೂಡದು ಹಾಗೂ ಫಿಟ್ಟಿಂಗ್ ಇರುವಂತದ್ದನ್ನು ಆಯ್ಕೆ ಮಾಡಕೂಡದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಪ್ರಿಂಟ್ ಇರುವಂತಹ ಉಡುಪನ್ನು ಖರೀದಿಸಿ
ಚಿಕ್ಕ ಮಕ್ಕಳಿಗೆ ಡಿಸೆಂಟ್ ಆಗಿ ಕಾಣುವ ಸಾದಾ ವರ್ಣದ ಉಡುಪನ್ನು ಖರೀದಿಸಬೇಡಿ. ಮಕ್ಕಳ ಕ್ರಿಯೆಟಿವಿಟಿ ಹೆಚ್ಚಿಸುವ ಫ್ಲೋರಲ್, ಚೆಕ್ಸ್, ಕಾರ್ಟೂನ್, ಜೆಮೆಟ್ರಿಕ್ ಸೇರಿದಂತೆ ನಾನಾ ಪ್ರಿಂಟ್ ಇರುವಂತಹ ಉಡುಪನ್ನು ಖರೀದಿಸಿ. ಇದು ಮೂಡನ್ನು ಫ್ರೆಶ್ ಆಗಿರಿಸುತ್ತದೆ.
ಬೇಸಿಗೆಯಲ್ಲಿ ಲೇಯರ್ ಲುಕ್ ಡ್ರೆಸ್ ಆವಾಯ್ಡ್ ಮಾಡಿ
ಬೇಸಿಗೆಯಲ್ಲಿ ಒಂದರ ಮೇಲೆ ಧರಿಸುವ ಕೋಟ್, ಜಾಕೆಟ್ನಂತಹ ಉಡುಪನ್ನು ಆವಾಯ್ಡ್ ಮಾಡಿ. ಇದು ಮಗುವಿಗೆ ಉಸಿರುಗಟ್ಟಿಸುವುದರೊಂದಿಗೆ ಕಿರಿಕಿರಿಯೂ ಉಂಟು ಮಾಡುತ್ತದೆ. ಗೌನ್ ಆಯ್ಕೆ ಕೂಡ ಬೇಡ. ಆದಷ್ಟೂ ಬ್ರಿಥೆಬಲ್ ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)