ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಬಂದಾಯ್ತು, ಇನ್ನೇನಿದ್ದರೂ ಲೈಟ್ ಹಾಗೂ ಬ್ರೈಟ್ ನೇಲ್ ಕಲರ್‌ಗಳ ಹಾವಳಿ. ಯಾವ ಫ್ಯಾಷನ್ ಪ್ರಿಯ ಹೆಣ್ಮಕ್ಕಳನ್ನು ನೋಡಿದರೂ ಸಾಕು, ಟ್ರೆಂಡಿಯಾಗಿರುವ ನೇಲ್ ಕಲರ್ ಹಾಗೂ ಶೇಡ್‌ಗಳನ್ನು ಹಚ್ಚಿರುವ ಉಗುರುಗಳು ಮನ ಸೆಳೆಯುತ್ತವೆ. ಆ ಮಟ್ಟಿಗೆ ಈ ಬಾರಿ ಭಿನ್ನ-ವಿಭಿನ್ನ ಮಾನೋಕ್ರೋಮಾಟಿಕ್ ಶೇಡ್‌ಗಳು ಹಾಗೂ ಲೈಟ್ ವರ್ಣಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ.
ಟ್ರೆಂಡ್‌ನಲ್ಲಿ ಕಾಲಿಟ್ಟ ನೇಲ್ ಬಣ್ಣಗಳು
ಪಿಸ್ತಾ ಗ್ರೀನ್, ನಿಯಾನ್, ಪ್ಯಾಂಟಾನ್, ರೇಡಿಯಂ, ಪಾಸ್ಟೆಲ್, ಡಾರ್ಕ್ ಪಿಂಕ್, ರಾಯಲ್ ಬ್ಲ್ಯೂ, ಡಿಫರೆಂಟ್ ಶೇಡ್ಸ್‌ನ ಪೀಚ್ ಸೇರಿದಂತೆ ಇಮ್ಯಾಜಿನೇಷನ್‌ಗೂ ಸಿಗದ ವರ್ಣಗಳು ಈ ಬಾರಿಯ ಸಮ್ಮರ್ ನೇಲ್ ಕಲರ್ಸ್ ಕಲೆಕ್ಷನ್‌ನಲ್ಲಿ ಎಂಟ್ರಿ ನೀಡಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಕೆಲವು ಮ್ಯಾಟ್ ಫಿನಿಶಿಂಗ್‌ನಲ್ಲಿ ಬಂದಿದ್ದರೆ, ಮತ್ತೆ ಕೆಲವು ಶೈನಿಂಗ್ ಕಲರ್‌ಗಳಲ್ಲೂ ಲಭ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಸಿಂಪಲ್ ಲುಕ್ ನೀಡುವ ಕಲರ್ಸ್
ನನಗೆ ಅತಿಯಾಗಿರುವ ನೇಲ್ ಡಿಸೈನ್ ಬೇಡ. ನೋಡಲು ಆಕರ್ಷಕವಾಗಿ ಕಾಣಬೇಕು ಹಾಗೂ ಸಿಂಪಲ್ಲಾಗಿರಬೇಕು ಎನ್ನುವವರಿಗೆ ಈ ಸೀಸನ್‌ನ ಸಾಕಷ್ಟು ನೇಲ್ ಕಲರ್‌ಗಳು ಹೊಂದುತ್ತವೆ ಎನ್ನುವ ನೇಲ್ ಆರ್ಟಿಸ್ಟ್ ರಿಚಾ ಪ್ರಕಾರ, ಇವು ಡಿಫರೆಂಟ್ ಆಗಿ ಹಚ್ಚಿದಲ್ಲಿ ಮೋಡಲು ವಿಭಿನ್ನವಾಗಿ ಕಾಣುತ್ತವೆ. ಇದಕ್ಕೆ ಉದಾಹರಣೆ ಮಾನೋಕ್ರೋಮ್ಯಾಟಿಕ್ ನೇಲ್ ಡಿಸೈನ್ ಎನ್ನುತ್ತಾರೆ.
ಕಲರ್‌ಫುಲ್ ನೇಲ್ ಶೇಡ್ಸ್
ಸಾವಿರಗಟ್ಟಲೇ ಕೊಟ್ಟು ನೇಲ್ ಆರ್ಟ್ ಮಾಡಿಸಲು ಸಾಧ್ಯವಾಗದು ಎನ್ನುವವರಿಗೆ ಈ ನೇಲ್ ಶೇಡ್ಸ್ ಹೊಸ ಲುಕ್ ನೀಡುತ್ತವೆ ಎನ್ನಬಹುದು. ಹಚ್ಚುವವರ ಕ್ರಿಯಾತ್ಮಕತೆ ಮೇಲೆ ಡಿಪೆಂಡ್ ಆಗುತ್ತದೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್. ಇನ್ನು ಇದೀಗ ಒಂದೊಂದು ಉಗುರುಗಳಿಗೂ ಒಂದೊಂದು ಬಗೆಯ ಬಣ್ಣ ಹಚ್ಚುವುದು ಕೂಡ ಫ್ಯಾಷನ್ ಆಗಿದೆ. ಇದರೊಂದಿಗೆ ಇದೀಗ ಈ ಬಣ್ಣಗಳನ್ನು ಅಡ್ಡಡ್ಡ, ಉದ್ದುದ್ದವಾಗಿ ಹಚ್ಚುವ ಫ್ಯಾಷನ್ ಕೂಡ ಆರಂಭವಾಗಿದೆಯಂತೆ ಎನ್ನುತ್ತಾರೆ. ಇನ್ನು ಯಾವುದೇ ನೇಲ್ ವರ್ಣಗಳು ಚೆನ್ನಾಗಿ ಕಾಣಬೇಕೆಂದಲ್ಲಿ ಒಂದಿಷ್ಟು ಸಲಹೆಗಳನ್ನು ಪಾಲಿಸಲೇಬೇಕು ಎಂಬುದು ಬ್ಯೂಟಿ ಎಕ್ಸ್ಪಟ್ರ್ಸ್ ಅಭಿಪ್ರಾಯ. ಇದಕ್ಕಾಗಿ ಉಗುರುಗಳಿಗೆ ಆಕಾರ ನೀಡುವುದು ಅಗತ್ಯ ಎನ್ನುತ್ತಾರೆ.
ಮರೆಯಾದ ನೇಲ್ ಶೇಡ್ಸ್
ಬೋಲ್ಡ್ ಕಲರ್‌ಗಳಾದ ಬರ್ಗ್ಯಾಂಡಿ, ರೆಡ್‌ವೈನ್, ಶೇಡಿ ಬ್ಲಾಕ್, ಗೋಲ್ಡನ್ ಟ್ರೆಂಡಿ ಕಲರ್‌ಗಳು ಕಳೆದ ಸಾಲಿಗೆ ಕೊನೆಯಾಗಿವೆ. ಆದರೆ, ಮೆಟಾಲಿಕ್ ಕಲರ್ಸ್ ಈ ಸೀಸನ್‌ನ ನೇಲ್ ಫ್ಯಾಷನ್‌ನಲ್ಲಿಮಾತ್ರವಲ್ಲ, ಈ ಸಾಲಿಗೂ ಮುಂದುವರೆದಿವೆ.
ನೀಲಿ, ಹಸಿರು, ಗೋಲ್ಡ್, ಸಿಲ್ವರ್ ಕಲರ್‌ಗಳು ಕಾಂಟ್ರಾಸ್ಟ್ ಮ್ಯಾಚ್‌ನೊಂದಿಗೆ ಮುಂದುವರೆದಿವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಕ್ಷಾ.
ನೇಲ್ ಕಲರ್ಸ್ ಪ್ರಿಯರಿಗೆ ಟಿಪ್ಸ್
- ನಿಮ್ಮ ಸ್ಕಿನ್ ಟೋನ್ಗೆ ಮ್ಯಾಚ್ ಆಗುವುದನ್ನು ಆಯ್ಕೆ ಮಾಡಿ.
- ಪ್ರತಿ ಬಾರಿ ರಿಮೂವರ್ನಿಂದ ಹಳೆಯದ್ದನ್ನು ಅಳಿಸಿ.
- ಡಬ್ಬಲ್ ಶೇಡ್ಸ್ ಹಚ್ಚಿ, ಹೊಸ ಲುಕ್ ನೀಡಿ.
- ಅಲಂಕಾರಕ್ಕೆ ಸ್ಟಿಕ್ಕರ್ ಕ್ರಿಸ್ಟಲ್ ಬಳಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?