ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ನೇಲ್ ಆರ್ಟ್‌ನಲ್ಲಿ (Summer Nailart Fashion) ಇದೀಗ ಬಗೆಬಗೆಯ ಐಸ್‌ಕ್ರೀಮ್ ನೇಲ್ ಆರ್ಟ್‌ಗಳದ್ದೇ ಕಾರುಬಾರು. ನೋಡಲು ಒಂದಕ್ಕಿಂತ ಒಂದು ಆಕರ್ಷಕವಾಗಿ ಕಾಣುವ ಈ ಡಿಸೈನ್‌ಗಳು ಚಿತ್ರಿಸಲು ಕೊಂಚ ಕಷ್ಟವಾದರೂ ಮೂಡಿಸಿದ ನಂತರ ಕೈಗಳನ್ನು ಸುಂದರವಾಗಿ ಕಾಣಿಸುತ್ತವೆ. ಇನ್ನು ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುವ ನೇಲ್ ಆರ್ಟ್ ಫ್ಯಾಷನ್‌ನಲ್ಲಿ ಬೇಸಿಗೆಯಲ್ಲಿ ಬಹುತೇಕ ಕೂಲ್ ಎನಿಸುವ ಐಸ್‌ಕ್ರೀಮ್ ನೇಲ್ ಆರ್ಟ್ ಚಿತ್ತಾರಗಳು ಟ್ರೆಂಡಿಯಾಗಿವೆ.
ವೆರೈಟಿ ಐಸ್‌ಕ್ರೀಮ್ ಚಿತ್ತಾರಗಳು
ಬಗೆಬಗೆಯ ಕೋನ್, ಐಸ್ ಕ್ಯಾಂಡಿ, ಕುಲ್ಫಿ, ಚಾಕೋಲೇಟ್, ಚಾಕೋ, ಚೆರ್ರಿ, ಪಿಸ್ತಾ, ಕಪ್ ಐಸ್‌ಕ್ರೀಮ್ ಹೀಗೆ ನಾನಾ ಬಗೆಯ ಐಸ್‌ಕ್ರೀಮ್ ವೆರೈಟಿಗಳು ನೇಲ್‌ಗಳ ಮೇಲೆ ಚಿತ್ತಾರ ರೂಪದಲ್ಲಿ ಮೂಡುತ್ತಿವೆ. ಇನ್ನು ಐಸ್‌ಕ್ರೀಮ್ ಕಲರ್‌ಗಳು ಅಷ್ಟೇ ವಿವಿಧ ವಿನ್ಯಾಸದಲ್ಲಿ ಉಗುರುಗಳನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ನೇಲ್ ಆರ್ಟಿಸ್ಟ್ ದಿಯಾ.
ಚಿತ್ತಾರಕ್ಕಾಗಿ ನೇಲ್ ಕಿಟ್
ಇನ್ನು, ನೀವೇ ಈ ಚಿತ್ತಾರಗಳನ್ನು ಮೂಡಿಸಿಕೊಳ್ಳಬೇಕಿದ್ದಲ್ಲಿ ನೇಲ್ ಕಿಟ್ ನಿಮ್ಮ ಬಳಿ ಇರುವುದು ಅಗತ್ಯ. ಇನ್ನು ಲೈಟ್ ಹಾಗೂ ಡಾರ್ಕ್ ಶೇಡ್‌ನ ನೇಲ್ ಕಲರ್‌ಗಳು ನಿಮ್ಮ ಬಳಿ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರ ಮನಸ್ಸಿರಬೇಕು ಎನ್ನುತ್ತಾರೆ ನೇಲ್ ಆರ್ಟ್ ತಜ್ಞೆ ರಿಯಾ. ಅವರ ಪ್ರಕಾರ, ಈ ಕುರಿತಂತೆ ಬ್ಯೂಟಿ ವೆಬ್‌ಸೈಟ್‌ಗಳಿವೆ. ಅಲ್ಲದೇ ಯೂಟ್ಯೂಬ್‌ನಲ್ಲಿ ಟ್ಯೂಷನ್ ಕೂಡ ಪಡೆದು ಚಿತ್ರಿಸಬಹುದು ಎನ್ನುತ್ತಾರೆ ಅವರು.
ಐಸ್‌ಕ್ರೀಮ್ ನೇಲ್ ಆರ್ಟ್ ಪ್ರಿಯರಿಗೆ 5 ಟಿಪ್ಸ್
- ಮೆನಿಕ್ಯೂರ್ ಮಾಡಿಸಿದ ನಂತರ ನೇಲ್ ಆರ್ಟ್ ಮಾಡಿಸಿ.
- ನೇಲ್ ಆರ್ಟ್ ಮಾಡಿಸುವವರ ಉಗುರು ಉದ್ದವಾಗಿರಬೇಕು.
- ಚಿತ್ರಿಸಲು ಉಗುರುಗಳು ಅಗಲವಾಗಿರಬೇಕು.
- ನೀರಿಗೆ ಸೋಕಿಸಿದಲ್ಲಿ ನೇಲ್ ಆರ್ಟ್ ಮಾಸಬಹುದು.
- ಬ್ರಾಂಡೆಡ್ ನೇಲ್ಶೇಡ್ ಬಳಸಿ, ಬೇಗ ಕಲರ್ ಮಾಸುವುದಿಲ್ಲ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಜೆನ್ ಜಿ ಹುಡುಗಿಯರನ್ನು ಸೆಳೆಯುತ್ತಿರುವ ಗ್ಲಾಮರಸ್ ಬಾರ್ಡಾಟ್ ಡ್ರೆಸ್