Site icon Vistara News

Summer Resort Wear Fashion: ಸಮ್ಮರ್ ಹಾಲಿಡೇ ಫ್ಯಾಷನ್‌ನಲ್ಲಿ ಬಂತು ಕಲರ್‌ಫುಲ್‌ ರೆಸಾರ್ಟ್‌ವೇರ್‌

Summer Resort wear fashion

ಶೀಲಾ ಸಿ. ಶೆಟ್ಟಿ ಬೆಂಗಳೂರು
ಸಮ್ಮರ್ ಹಾಲಿಡೇ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಯುವತಿಯರ ಕಲರ್‌ಫುಲ್‌ ಗ್ಲಾಮರಸ್ ರೆಸಾರ್ಟ್‌ವೇರ್‌ಗಳು (Summer Resort Wear Fashion) ಬಿಡುಗಡೆಗೊಂಡಿವೆ. ಅದರಲ್ಲೂ ಎದ್ದು ಕಾಣುವಂತಹ ಶೇಡ್‌ಗಳು ಮಾತ್ರವಲ್ಲ, ಗ್ಲಾಮರಸ್ ಪಾಸ್ಟೆಲ್ ಶೇಡ್‌ನವು ಎಂಟ್ರಿ ನೀಡಿವೆ.

ಬಗೆಬಗೆ ರೆಸಾರ್ಟ್‌ವೇರ್‌

ಗ್ಲಾಮರಸ್ ಉಡುಪುಗಳೆಂದರೂ ಅತಿಶಯೋಕ್ತಿಯಾಗದು. “ಫನ್ ಲವ್ವಿಂಗ್ ಯಂಗ್‌ಸ್ಟರ‍್ಸ್‌ಗಳ ಫೇವರಿಟ್ ಉಡುಗೆಗಳಿವು. ಪಕ್ಕಾ ಕಾನ್ಸೆಪ್ಟ್ ಇವಕ್ಕಿಲ್ಲ! ಮ್ಯಾಚಿಂಗ್ ಮಾಡುವ ಗೊಂದಲವಿಲ್ಲ! ಒಟ್ಟಿನಲ್ಲಿ ಕಲರ್‌ಫುಲ್‌ ಆಗಿರಬೇಕು. ಕಂಡಕಂಡ ಕಡೆ ಫೋಟೊ ತೆಗೆದರೂ ಚೆನ್ನಾಗಿ ಕಾಣಬೇಕು. ಸ್ಟ್ರಿಕ್ಟ್ ಆಗಿ ಪ್ಯಾಂಟ್ ಅದಕ್ಕೆ ಶರ್ಟ್ ಇಲ್ಲವೇ ಟೀ ಶರ್ಟ್ ಶೂ ಹೀಗೆ ಫಾರ್ಮಲ್ ಡ್ರೆಸ್ಸಿಂಗ್‌ನ ಕಾನ್ಸೆಪ್ಟ್ ಇದಕ್ಕಿಲ್ಲ. ರಜೆ ಮಜೆಯ ಉಲ್ಲಾಸವನ್ನು ಇವು ಮತ್ತಷ್ಟು ಹೆಚ್ಚಿಸುತ್ತವೆʼʼ ಎನ್ನುತ್ತಾರೆ ಸ್ಟೈಲಿಸ್ಟ್ ರಚಿತಾ.

ಚಿತ್ರ-ವಿಚಿತ್ರ ಡಿಸೈನ್‌ಗಳು

ಇನ್ನು, ನಿಯಾನ್ ಶೇಡ್‌ಗಳಲ್ಲಿ ಊಹಿಸಲಾಗದ ಚಿತ್ತಾರವನ್ನೊಳಗೊಂಡಿರುವ ರೆಸಾರ್ಟ್‌ವೇರ್‌ಗಳು ಇದೀಗ ಚಾಲ್ತಿಯಲ್ಲಿವೆ. ಉದಾಹರಣೆಗೆ, ಕ್ರಾಪ್ ಫ್ರಾಕ್ಸ್, ಬ್ಯಾಟ್ವಿಂಗ್ಸ್ ಮ್ಯಾಕ್ಸಿ, ಮಿನಿ ಮಿಡಿ, ಕ್ರಾಪ್ ಬಿಕಿನಿ ಟಾಪ್, ಸಿಂಗಲ್ ಪೀಸ್ ಮಿನಿ ಫ್ರಾಕ್ ಹೀಗೆ ಒಂದೇ ಎರಡೇ ನೂರಾರು ವಿನ್ಯಾಸದ ರೆಸಾರ್ಟ್‌ವೇರ್‌ಗಳು ಇಂದು ಲಗ್ಗೆ ಇಟ್ಟಿವೆ. ಇನ್ನು ಸ್ಟೈಲಿಸ್ಟ್ ರಾಶಿ ಅವರ ಪ್ರಕಾರ, ರೆಸಾರ್ಟ್‌ವೇರ್‌ಗಳು ನಮ್ಮ ರಾಷ್ಟ್ರದ ಕಾನ್ಸೆಪ್ಟ್ ಅಲ್ಲ, ವೆಸ್ಟರ್ನ್ ಕಾನ್ಸೆಪ್ಟ್. ಇಲ್ಲಿನ ಡಿಸೈನರ್‌ಗಳು ಇದಕ್ಕೆ ಕೊಂಚ ಹೊಸ ರೂಪ ನೀಡಿ, ಲೋಕಲೈಜ್‌ ಮಾಡಿ ಇದನ್ನು ರೆಸಾರ್ಟ್‌ವೇರ್‌ ಎಂದು ನಾಮಕರಣ ಮಾಡಿ, ಇಲ್ಲಿನ ಯಂಗ್‌ಸ್ಟರ‍್ಸ್‌ಗೆ ಪ್ರಿಯವಾಗುವಂತೆ ರೂಪಿಸಲಾಗಿದೆ. ಹೆಸರು ರೆಸಾರ್ಟ್‌ವೇರ್‌ ಎಂದಿರುವುದಾದರೂ ಹಾಲಿಡೇ ಉಡುಪುಗಳ ಪಟ್ಟಿಗೆ ಇವನ್ನು ಸೇರಿಸಲಾಗಿದೆ ಎನ್ನುತ್ತಾರೆ.

ಇನ್ನು ಸಿನಿ ತಾರೆಯರು ಕೂಡ ರೆಸಾರ್ಟ್‌ವೇರ್‌ ಖ್ಯಾತಿ ಹೊಂದಲು ಕಾರಣ ಎನ್ನಬಹುದು. ಡೈಲಿ ರೂಟಿನ್‌ನಲ್ಲಿ ಧರಿಸುವ ಉಡುಪುಗಳಿಗಿಂತ ಭಿನ್ನವಾಗಿ ಕಾಣುವ ಇವು ಇದೀಗ ಯುವತಿಯರನ್ನು ಆಕರ್ಷಿಸಿವೆ. ಇನ್ನು ಫೋಟೋಗಳಲ್ಲೂ ಕಲರ್‌ಫುಲ್‌ ಆಗಿ ಕಾಣಿಸುವ ಇವು ಮುಖದ ಫ್ರೆಶ್‌ನೆಸ್ ಹೆಚ್ಚಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ.

ಹೀಗಿರಲಿ ನಿಮ್ಮ ರೆಸಾರ್ಟ್‌ವೇರ್‌

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Summer kids Fashion: ಬೇಸಿಗೆಯಲ್ಲಿ ಕಿಡ್ಸ್ ಫ್ಯಾಷನ್‌ವೇರ್ ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

Exit mobile version