ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ ಸ್ವಿಮ್ಮಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬಗೆಯ ವೈಬ್ರೆಂಟ್ ಶೇಡ್‌ನ ಸ್ವಿಮ್ ಸೂಟ್‌ಗಳು, ಬಿಕಿನಿಗಳು ಹಾಗೂ ಫ್ರಾಕ್ ಶೈಲಿಯ ಸ್ವಿಮ್ ಕೋ ಆರ್ಡ್ ಸೆಟ್‌ಗಳು ಮಾರುಕಟ್ಟೆಗೆ (Summer Swimsuit Fashion) ಲಗ್ಗೆ ಇಟ್ಟಿವೆ.
ಗ್ಲಾಮರ್ ಸ್ವಿಮ್ ಸೂಟ್‌ನಿಂದ ಫ್ರಾಕ್ ಶೈಲಿಯವಕ್ಕೆ ಬೇಡಿಕೆ
ಸ್ವಿಮ್‌ಸೂಟ್ ಎಂದರೇ ಮೂಗು ಮುರಿಯುವ ಕಾಲ ಈಗಿಲ್ಲ! ನೋಡಲು ಗೌರಮ್ಮನಂತಿದ್ದರೂ ಈಜುವ ಹವ್ಯಾಸ ಸಾಕಷ್ಟು ಮಂದಿಗೆ ಉಂಟು. ಜೀವನದ ಭಾಗವಾಗಿರುವ ಈ ಹವ್ಯಾಸ ಇದೀಗ ಕೇವಲ ಗಂಡಸರು ಹಾಗೂ ಮಕ್ಕಳ ಕ್ರೇಝ್ ಆಗಿ ಉಳಿದಿಲ್ಲ! ಮಾನಿನಿಯರು ಕೂಡ ಆಕರ್ಷಿತರಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸ್ವಿಮ್ಮಿಂಗ್ ಪ್ರೇಮಿಗಳಿಗೆಂದೇ ವೈಬ್ರೆಂಟ್ ಶೇಡ್ಸ್‌ನ ಸ್ವಿಮ್ ಸೂಟ್‌ಗಳು ಬಿಡುಗಡೆಗೊಂಡಿವೆ. ಎಕ್ಸ್‌ಪೋಸ್ ಮಾಡಲು ಬಯಸದವರಿಗೂ ಕೂಡ ಬಾಡಿ ಕವರ್ ಮಾಡುವ ಕೋ ಆರ್ಡ್ ಸೆಟ್‌ಗಳು ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್.
ಟ್ರೆಂಡ್‌ನಲ್ಲಿರುವ ಸ್ವಿಮ್‌ಸೂಟ್ ಶೇಡ್ಸ್
ಸಿಂಗಲ್ ಪೀಸ್, ಡಬ್ಬಲ್ ಪೀಸ್, ಫ್ರಾಕ್ ಸ್ಟೈಲ್ ಬಿಕಿನಿ, ಫುಲ್ ಕವರ್ಡ್ ಟೈಟ್ಸ್ ಜೊತೆಗಿರುವ ಸ್ವಿಮ್ ಸೂಟ್ಸ್, ಶಾಟ್ರ್ಸ್ ಜೊತೆಗೆ ಟ್ಯಾಂಕ್ ಟೈಪ್, ಹಾಲ್ಟರ್ ನೆಕ್ ಸೆಟ್, ಕೋ ಆರ್ಡ್ ಸೆಟ್ ಸ್ವಿಮ್‌ಸೂಟ್‌ಗಳು ಬಿಕಿನಿ, ಮಿನಿ ಸಿಂಗಲ್ ಪೀಸ್ ಫ್ರಾಕ್ ಸೇರಿದಂತೆ ನಾನಾ ಶೈಲಿಯವು ಕಲರ್ ಬ್ಲಾಕ್ ಶೇಡ್ಸ್, ಬಟರ್ ಪ್ಲೈಯ್ಸ್ ಪ್ರಿಂಟ್ಸ್, ಫ್ಲೋರಲ್ ಪ್ರಿಂಟ್ಸ್, ಮಾನೋಕ್ರೋಮ್ ಸಿಂಗಲ್ ಶೇಡ್, ಡಬ್ಬಲ್-ತ್ರಿಬಲ್ ಶೇಡ್ನವು ಪ್ರಚಲಿತದಲ್ಲಿವೆ.
ತಾರೆಯರ ನೆಚ್ಚಿನ ಸ್ವಿಮ್‌ಸೂಟ್‌ನಲ್ಲಿ ಬಿಕಿನಿಗೆ ಅಗ್ರಸ್ಥಾನ
ತಾರೆಯರು ಗ್ಲಾಮರಸ್ ಲುಕ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಹಾಗೂ ಅವರನ್ನು ಹಾಟ್ ಆಗಿ ಬಿಂಬಿಸುವುದರಿಂದ ಸ್ವಿಮ್‌ಸೂಟ್‌ನಲ್ಲಿ ಬಿಕಿನಿಗೆ ಮೊದಲ ಸ್ಥಾನ. ಅದರಲ್ಲೂ ಇತ್ತೀಚಿನ ನಟಿಯರಾದ ಅನನ್ಯಾ, ಸಾರಾ, ತಾರಾ ಸುತಾರಿಯಾ, ಕೃತಿ, ಜಾನ್ವಿ ಕಪೂರ್ ಸೇರಿದಂತೆ ನಾನಾ ನಟಿಯರು ಸ್ವಿಮ್‌ಸೂಟ್‌ನಲ್ಲಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದನ್ನು ಕಾಣಬಹುದು. ಇಂದಿನ ಸಾಕಷ್ಟು ಹೊಸ ಟ್ರೆಂಡನ್ನು ಇವರುಗಳಿಂದಲೇ ತಿಳಿಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಧೀರಜ್.
ಸ್ವಿಮ್‌ಸೂಟ್ ಪ್ರಿಯರಿಗೆ 5 ಸಲಹೆಗಳು
- ಗ್ಲಾಮರ್ ಪ್ರಪಂಚದವರು ನೀವಾಗಿದ್ದಲ್ಲಿ ಮಾತ್ರ ಗ್ಲಾಮರಸ್ ಬಿಕಿನಿಗೆ ಮೊರೆ ಹೋಗಬಹುದು.
- ಮಕ್ಕಳಿಗಾಗಿ ಇದೀಗ ನಾನಾ ಕಾರ್ಟೂನ್ ಹಾಗೂ ಚಿತ್ತಾರವಿರುವ ಸ್ವಿಮ್‌ಸೂಟ್ ಆಗಮಿಸಿದೆ.
- ಗುಣಮಟ್ಟದ ಸ್ವಿಮ್ಸೂಟ್ಗಳನ್ನು ಖರೀದಿಸಿ. ಇಲ್ಲವಾದಲ್ಲಿ ಚರ್ಮದ ಸಮಸ್ಯೆಯಾಗಬಹುದು.
- ಎಲ್ಲಾ ಬಗೆಯ ಬಾಡಿಟೈಪ್ನವರಿಗೂ ಸ್ವಿಮ್‌ಸೂಟ್ ದೊರೆಯಲಾರಂಭಿಸಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion Shopping: ಸಮ್ಮರ್ ಫ್ಯಾಷನ್‌ವೇರ್ ಶಾಪಿಂಗ್ ಮಾಡುವವರ ಗಮನದಲ್ಲಿರಬೇಕಾದ 5 ಸಂಗತಿಗಳು