ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮಾಳವಿಕಾ ರಾಜ್ ಕಾರ್ಯಕ್ರಮವೊಂದಕ್ಕೆ ಉಟ್ಟಿದ್ದ ಶೀರ್ ಲೆಹೆಂಗಾ ಸೀರೆ ಇದೀಗ ಸೀರೆ ಪ್ರಿಯರನ್ನು ಸೆಳೆದಿದೆ ಮಾತ್ರವಲ್ಲ, ಸಮ್ಮರ್ ಸೀರೆಗಳ ಟಾಪ್ ಲಿಸ್ಟ್‌ಗೆ ಸೇರಿದೆ. ಹೌದು. ಸಮ್ಮರ್ ಸೀಸನ್‌ಗೆ ಹೊಂದುವಂತಹ ಪಾರದರ್ಶಕ ಶೀರ್ ಫ್ಯಾಬ್ರಿಕ್‌ನ ಪಾಸ್ಟೆಲ್ ಶೇಡ್‌ನ ಈ ಲೆಹೆಂಗಾ ಸೀರೆ (Summer Lehenga Saree) ನೋಡಲು ಮನಮೋಹಕವಾಗಿದ್ದು, ಲೈಟ್‌ವೈಟ್ ಆಗಿರುವುದು ಮಾತ್ರವಲ್ಲ, ಟ್ರೆಂಡಿಯಾಗಿದೆ. ಸೀರೆಯ ಒಡಲೆಲ್ಲಾ ಸಿಲ್ವರ್ ಥ್ರೆಡ್ ಬೂಟಾ ಅಥವಾ ಮೊಟಿಫ್‌ಗಳಿಂದ ಸಿಂಗಾರಗೊಂಡಿದೆ. ಬಾರ್ಡರ್ ಕಂಪ್ಲೀಟ್ ಡಿಫರೆಂಟ್ ಆಗಿದ್ದು, ಎಂಬಾಲಿಶ್ಡ್ ಹಾಗೂ ಕಲರ್ ಹ್ಯಾಂಡ್‌ವರ್ಕ್ ಥ್ರೆಡ್‌ನಿಂದ ಸಿದ್ಧಗೊಂಡಿದೆ. ಇದಕ್ಕೆ ಮ್ಯಾಚ್ ಆಗುವಂತೆ ಧರಿಸಿರುವ ಸ್ಲಿವ್‌ಲೆಸ್ ಬ್ಲೌಸ್ ಕೂಡ ಕಂಪ್ಲೀಟ್ ಹ್ಯಾಂಡ್‌ಮೇಡ್‌ನದ್ದಾಗಿದೆ. ಇದರ ಮೇಲೆ ವಿನ್ಯಾಸಗೊಳಿಸಿರುವ ಟುಲಿಪ್ ಹಾಗೂ ಡೈಸಿ ಫ್ಲವರ್‌ಗಳ ವಿನ್ಯಾಸ ಆಕರ್ಷಣೀಯವಾಗಿದೆ.
ಗಾರ್ಡನ್ ಆಫ್ ಈಡೆನ್ ಸೀರೆ
ಸೆಲೆಬ್ರೆಟಿ ಡಿಸೈನರ್ ಸೋನಾಕ್ಷಿ ರಾಜ್ ಅವರ ಲೆಬೆಲ್‌ನ ಗಾರ್ಡನ್ ಆಫ್ ಈಡೆನ್ ಹೆಸರಿನ ಈ ಬ್ರಾಂಡ್ ಸೀರೆ, ಈಗಾಗಲೇ ಸಾಕಷ್ಟು ಸೀರೆ ಪ್ರಿಯರನ್ನು ಸೆಳೆದಿದ್ದು, ಮಿನಿಸ್ಟ್ರೀ ಆಫ್ ಮೆಮೋರೀಸ್ ಫೋಟೋಗ್ರಾಫಿ ಇದಕ್ಕಿದೆ. ಇದೊಂದು ಈ ಸೀಸನ್‌ನ ಬ್ಯೂಟಿಫುಲ್ ಸಮ್ಮರ್ ಸೀರೆ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.
ಸೀಸನ್‌ಗೆ ತಕ್ಕ ಸೀರೆ
ಇನ್ನು ಸಮ್ಮರ್ ಸೀಸನ್‌ನಲ್ಲಿ ಸೀರೆ ಉಡುವುದೇ ಒಂದು ದೊಡ್ಡ ಟಾಸ್ಕ್. ಆದರೆ, ಈ ಸೀಸನ್‌ಗೆ ತಕ್ಕಂತೆ ಹೊಂದುವ ಫ್ಯಾಬ್ರಿಕ್ ಹಾಗೂ ಡಿಸೈನ್‌ನ ಸೀರೆ ಆಯ್ಕೆ ಮಾಡುವುದೇ ಕೊಂಚ ಕಷ್ಟಕರ. ಆದರೆ, ನಟಿ ಮಾಳವಿಕ ರಾಜ್ ಈ ಸೀಸನ್‌ಗೆ ತಕ್ಕಂತೆ ಶೀರ್ ಫ್ಯಾಬ್ರಿಕ್‌ನ ಲೆಹೆಂಗಾ ಸೀರೆಯುಟ್ಟು, ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಫ್ಯಾಷನ್ ಪ್ರಿಯರ ಮನ ಗೆಲ್ಲುವಲ್ಲಿ ಸಾಧ್ಯವಾಗಿದೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಇದೇ ಬಗೆಯ ಸೀರೆಗಳು ಮಾರುಕಟ್ಟೆಯಲ್ಲಿ ವೆಡ್ಡಿಂಗ್ ಸೀಸನ್ ಹಿನ್ನೆಲೆಯಲ್ಲಿ ಬಿಡುಗಡೆಗೊಳ್ಳಲಾರಂಭಿಸಿವೆ ಎನ್ನುತ್ತಾರೆ ಡಿಸೈನರ್ ರಾಶಿ.
ಫ್ರಿಲ್ ಸೀರೆಯಂತೆ ಕಾಣುವ ಲೆಹೆಂಗಾ ಸೀರೆ
ತಕ್ಷಣಕ್ಕೆ ನೋಡಲು ಇದು ಫ್ರಿಲ್ ಸೀರೆಯಂತೆ ಕಾಣುತ್ತದೆ. ಉಟ್ಟಾಗ ಈ ಫ್ರಿಲ್‌ಗಳು ರೆಡಿಮೇಡ್ ಲೆಹೆಂಗಾ ಫ್ರಿಲ್‌ನಂತೆ ಕಾಣುತ್ತವೆ ಎನ್ನುವ ಸ್ಟೈಲಿಸ್ಟ್‌ಗಳು, ಈ ಸೀಸನ್‌ಗೆ ಸೂಟ್ ಆಗುವ ಪಾಸ್ಟೆಲ್ ಶೇಡ್ ಎಂತಹವರನ್ನು ಬೇಕಾದರೂ ಆಕರ್ಷಕವಾಗಿ ಬಿಂಬಿಸಬಲ್ಲವು! ಎನ್ನುತ್ತಾರೆ.
ಲೆಹೆಂಗಾ ಸೀರೆ ಪ್ರಿಯರ ಆಯ್ಕೆಗೆ ಸ್ಟೈಲಿಸ್ಟ್ ಟಿಪ್ಸ್
- ಈ ಸೀಸನ್‌ನಲ್ಲಿ ಲೆಹೆಂಗಾ ಸೀರೆ ಆಯ್ಕೆ ಮಾಡುವುದಾದಲ್ಲಿ ಆದಷ್ಟೂ ಲೈಟ್‌ವೈಟ್ ಫ್ಯಾಬ್ರಿಕ್ನದ್ದು ಕೊಳ್ಳಿ.
- ಲೈಟ್ ಶೇಡ್ ಸೀರೆಗಳ ಆಯ್ಕೆ ಮಾಡಿ.
- ಸ್ಲಿವ್‌ಲೆಸ್ ಬ್ಲೌಸ್ ಹೊಲೆಸಬಹುದು.
- ಗ್ರ್ಯಾಂಡ್ ಲುಕ್ನದ್ದಾದಲ್ಲಿ ವೆಡ್ಡಿಂಗ್ ಹಾಗೂ ಪಾರ್ಟಿ ಎರಡಕ್ಕೂ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Accessories: ಬೇಸಿಗೆಯ ಫಂಕಿ ಜ್ಯುವೆಲರಿ ಲೋಕಕ್ಕೆ ಎಂಟ್ರಿ ಕೊಟ್ಟ ಬಿದಿರಿನ ಕಿವಿಯೋಲೆಗಳು