ಶೀಲಾ ಸಿ. ಶೆಟ್ಟಿ
ಸೀರೆಯ ಕುಚ್ಚಿನಂತೆ ಕಾಣುವ ಟಾಸೆಲ್ಸ್ ಇಯರಿಂಗ್ಸ್ ಇದೀಗ ಸಮ್ಮರ್ ಇಯರಿಂಗ್ಸ್ (Tassels earrings Fashion) ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ. ಬಣ್ಣ ಬಣ್ಣದ ದಾರದಿಂದ ಸಿದ್ಧಪಡಿಸಲಾದ ಬಗೆಬಗೆಯ ಕುಚ್ಚುಗಳನ್ನೊಳಗೊಂಡ ಇವು ಕಿವಿಯೊಲೆಯ ಜಾಗವನ್ನು ಅಲಂಕರಿಸುತ್ತಿವೆ. ತಕ್ಷಣಕ್ಕೆ ನೋಡಲು ಥೇಟ್ ಸೀರೆಯ ಬಾರ್ಡರ್‌ಗೆ ಹಾಕುವ ಕುಚ್ಚಿನ ತದ್ರೂಪದಂತೆ ಕಾಣುವ ಇವು ಸೀರೆಯ ಬಾರ್ಡರ್ ದಾಟಿ ಇದೀಗ ಮಾನಿನಿಯರ ಕಿವಿಯನ್ನು ಸಿಂಗರಿಸುತ್ತಿವೆ.
ಬಣ್ಣ ಬಣ್ಣದ ದಾರದ ಟಾಸೆಲ್ಸ್
ಸೀರೆಯ ಸೆರಗಿಗೆ ಹಾಕಲಾಗುವ ಕುಚ್ಚುಗಳು ಇದೀಗ ಇಯರಿಂಗ್ ರೂಪ ಪಡೆದಿರುವುದು ಹೊಸತೇನಲ್ಲ! ಮ್ಯಾಚಿಂಗ್ ಉಡುಪಿಗೆ ಇವನ್ನು ಧರಿಸುತ್ತಿದ್ದ ಕಾಲವೂ ಇತ್ತು. ಇದೀಗ ಇವೇ ಹೊಸ ರೂಪ ಪಡೆದು ಮರಳಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಚಿತಾ. ಅವರ ಪ್ರಕಾರ, ಮೂಲತಃ ರೇಷ್ಮೆ ಸೀರೆಗಳಿಂದ ಸ್ಪೂರ್ತಿಗೊಂಡ ವಿನ್ಯಾಸಕರು, ಇದೇ ರೀತಿಯ ಸೀರೆ ಹಾಗೂ ಉಡುಪಿಗೆ ಮ್ಯಾಚ್ ಮಾಡುವ ಸಲುವಾಗಿ ಮ್ಯಾಚಿಂಗ್ ಕುಚ್ಚುಗಳ ಇಯರಿಂಗ್ಸ್ ಹಾಗೂ ಹ್ಯಾಂಗಿಂಗ್ಸ್ ಕ್ರಿಯೇಟ್ ಮಾಡಿದರು. ಅದರಲ್ಲೂಹ್ಯಾಂಗಿಂಗ್ಸ್ ಕುಚ್ಚುಗಳು ಹೆಚ್ಚು ಸುಂದರವಾಗಿ ಕಾಣುವುದರಿಂದ ಬೇಡಿಕೆ ಇದಕ್ಕೆ ಹೆಚ್ಚಾಯಿತು. ಇದೀಗ ಕ್ಯಾಶುವಲ್ ಉಡುಪುಗಳ ಜೊತೆಯೂ ಇವು ಮ್ಯಾಚ್ ಆಗುತ್ತಿವೆ ಎನ್ನುತ್ತಾರೆ.
ಹ್ಯಾಂಗಿಂಗ್ಸ್ ರೂಪ
ಸೀರೆಯ ಕುಚ್ಚುಗಳು ಹ್ಯಾಂಗಿಂಗ್ ರೂಪ ಪಡೆದಾಗ ಮೊದಲಿಗೆ ಇದನ್ನು ಅಲ್ಲಗೆಳೆದವರೇ ಹೆಚ್ಚು. ಎಥ್ನಿಕ್ ಉಡುಪುಗಳಿಗಿಂತ ಇದೀಗ ಕ್ಯಾಶುವಲ್ ಉಡುಪುಗಳನ್ನು ಧರಿಸುವವರು ಹೆಚ್ಚಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವು ಮ್ಯಾಚಿಂಗ್‌ಗೆ ಪರ್ಫೆಕ್ಟಾಗಿ ಸಿಗುತ್ತವೆ. ಲೈಟ್‌ವೇಟ್ ಕೂಡ. ಎಷ್ಟು ಹೊತ್ತು ಧರಿಸಿದರೂ ಕೂಡ ಭಾರ ಏನಿಸುವುದಿಲ್ಲ ಎನ್ನುತ್ತಾರೆ ಡಿಸೈನರ್ಸ್.
ಆಕರ್ಷಕ ಟಾಸೆಲ್ಸ್
ಇನ್ನು, ಲಾಂಗ್ ಕಿವಿಯ ಹ್ಯಾಂಗಿಂಗ್ಸ್ ಬೇಕಿದ್ದಲ್ಲಿ ಹೆಚ್ಚು ಬೆಲೆ ತೆರುವುದು ಸಾಮಾನ್ಯ. ಅದರಲ್ಲೂ ಶೋಲ್ಡರ್ ತನಕ ಇರುವ ಹ್ಯಾಂಗಿಂಗ್‌ಗಳಿಗೆ ಬೆಲೆ ಹೆಚ್ಚು. ನೋಡಲು ಇವು ಚೆನ್ನಾಗಿ ಕಾಣುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಬೆಲೆ ಕಡಿಮೆ. ಮೊದಲೇ ಯಾವ ಉಡುಪಿಗೆ ಯಾವ ಕಲರ್‌ನದ್ದು ಧರಿಸಿದರೇ ಎಂಬುದನ್ನು ಯೋಚಿಸಿ ಧರಿಸಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವುದು. ಬದಲಿಗೆ ಇದು ಫೋಟೋಗಳಲ್ಲೂ ಕೂಡ ಚೆನ್ನಾಗಿ ಕಾಣುವುದು. ಹಾಗಾಗಿ ಇಂದು ಫೋಟೋಶೂಟ್ ಮಾಡಿಸುವ ಹುಡುಗಿಯರು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆನ್ನಬಹುದು.
ಮಾಡೆಲ್‌ಗಳ ಫೇವರೇಟ್
ಟಾಸೆಲ್ಸ್ ಹವಾ ಇದೀಗ ರ್ಯಾಂಪ್‌ಗೂ ಕಾಲಿಟ್ಟಿದೆ. ಶೋಲ್ಡರ್ ತನಕ ನೇತಾಡುವ ಈ ಕುಚ್ಚಿನ ಟಾಸೆಲ್ಸ್ ಇಯರಿಂಗ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಟಾಸೆಲ್ಸ್ ಧರಿಸುವವರಿಗೆ ಸಿಂಪಲ್ ಟಿಪ್ಸ್
- ಮ್ಯಾಚಿಂಗ್ ಮಾಡಲು ಬೆಸ್ಟ್ ಇಯರಿಂಗ್ಸ್.
- ಹೇರ್ ಟೈ ಮಾಡಿದ್ದಾಗ ಧರಿಸಿದಲ್ಲಿ ಆಕರ್ಷಕವಾಗಿ ಕಾಣುತ್ತದೆ.
- ಧರಿಸಿದ ನಂತರ ತಲೆ ಬಾಚಕೂಡದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಸಮ್ಮರ್ ಸೀಸನ್‌ನ ಟ್ರೆಂಡಿ ಯೆಲ್ಲೋ ಸೀರೆಯಲ್ಲಿ ನಟಿ ಮೋಕ್ಷಿತಾ ಪೈ