Site icon Vistara News

Temple Jewellery Fashion: ಅಕ್ಷಯ ತೃತೀಯಕ್ಕಾಗಿ ಲೈಟ್‌ವೈಟ್‌ ವಿನ್ಯಾಸದಲ್ಲಿ ಮೂಡಿ ಬಂದ ಟೆಂಪಲ್‌ ಜ್ಯುವೆಲರಿಗಳು

Temple jewellery fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟೆಂಪಲ್‌ ಜ್ಯುವೆಲರಿಗಳು (Temple Jewellery Fashion) ಇದೀಗ ಲೈಟ್‌ವೈಟ್‌ನಲ್ಲಿ ಎಂಟ್ರಿ ನೀಡಿವೆ. ಭಾರಿ ತೂಕ ಟೆಂಪಲ್‌ ಡಿಸೈನ್‌ನ ಆಭರಣಗಳು (Temple Jewellery Fashion) ಇದೀಗ ಕಡಿಮೆ ತೂಕದಲ್ಲೂ ಲಭ್ಯ. ಎಲ್ಲರೂ ಕೊಳ್ಳಬಹುದಾದ ವಿನ್ಯಾಸದಲ್ಲಿ, ಕೈಗೆಟಕಬಹುದಾದ ದರದಲ್ಲಿ, ಅದರಲ್ಲೂ ಲೈಟ್‌ವೈಟ್‌ನಲ್ಲಿ ಇವು ಬಿಡುಗಡೆಗೊಂಡಿವೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ನಾನಾ ಬ್ರಾಂಡ್‌ಗಳು ಟೆಂಪಲ್‌ ಜ್ಯುವೆಲರಿಗಳನ್ನು (Temple Jewellery) ಇದೀಗ ಮಿನಿಮಮ್‌ ತೂಕದಲ್ಲೂ ಸಿದ್ಧಪಡಿಸಿ, ಬಿಡುಗಡೆಗೊಳಿಸಿವೆ.

ಹೌದು. ಮೊದಲೆಲ್ಲಾ ಟೆಂಪಲ್‌ ಡಿಸೈನ್‌ (Temple Jewellery) ಆಭರಣಗಳು ಕೇವಲ ಶ್ರೀಮಂತರ ಆಭರಣ ಎನ್ನಲಾಗುತ್ತಿತ್ತು. ಇದೀಗ ಈ ಹೆವಿ ಡಿಸೈನ್‌ನ ಆಭರಣಗಳು ಮಧ್ಯಮ ವರ್ಗದವರು ಕೊಳ್ಳವಂತೆ ಕಡಿಮೆ ತೂಕದಲ್ಲಿ ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿರುವುದು ಬಹುತೇಕ ಆಭರಣ ಪ್ರಿಯರಿಗೆ ಖುಷಿ ತಂದಿದೆ ಎನ್ನುತ್ತಾರೆ ಆಭರಣ ವಿನ್ಯಾಸಕಾರರು.

ಹೆವಿ ತೂಕದ ಟೆಂಪಲ್‌ ಡಿಸೈನ್‌ ಆಭರಣಗಳ ಬದಲಾದ ತೂಕ

ಟೆಂಪಲ್‌ ಆಭರಣಗಳೆಂದರೇ, ಭಾರಿ ಗಾತ್ರ ಹಾಗೂ ತೂಕದಲ್ಲಿ ಡಿಸೈನ್‌ಗೊಂಡಿರುತ್ತಿದ್ದವು. ಈ ವಿನ್ಯಾಸದ ಆಭರಣ ಖರೀದಿಸಲಾಗದಿದ್ದವರು, ಒನ್‌ ಗ್ರಾಂ ಗೋಲ್ಡ್‌ ಇಲ್ಲವೇ ಸಿಲ್ವರ್‌ ಕೋಟೆಡ್‌ ಗೋಲ್ಡ್‌ ಆಭರಣಗಳನ್ನು ಖರೀದಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಇದೀಗ ದೊಡ್ಡ ಜ್ಯುವೆಲರಿ ಬ್ರಾಂಡ್‌ನವರು ಇದಕ್ಕೆ ಹೊಸ ಮಾರ್ಗ ಕಂಡು ಹಿಡಿದು. ಇವುಗಳ ವಿನ್ಯಾಸ ಕೊಂಚ ಮಿನಿಮೈಸ್‌ ಮಾಡಿ ತೂಕ ಕಡಿಮೆಗೊಳಿಸಿ ಬಿಡುಗಡೆಗೊಳಿಸಿದ್ದಾರೆ. ಇದು ಗ್ರಾಹಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಮಾರಾಟಗಾರರು.

ಸಂಪ್ರದಾಯ ಬಿಂಬಿಸುವ ಆಭರಣಗಳು

ಇಂದಿಗೂ ಟೆಂಪಲ್‌ ಡಿಸೈನ್‌ನ ಆಭರಣಗಳನ್ನು ಕುಟುಂಬದ ಶುಭ ಸಮಾರಂಭ, ಹಬ್ಬ, ಮದುವೆ ಇತ್ಯಾದಿ ದಿನಗಳಂದು ಸಾಂಪ್ರದಾಯಿಕ ಉಡುಪಿನೊಂದಿಗೆ ಧರಿಸುವುದು ಸಾಮಾನ್ಯವಾಗಿದೆ. ಗಂಡುಭೇರುಂಡ, ರಾಧಾಕೃಷ್ಣ, ಗಣೇಶ, ನಟರಾಜ, ನವಿಲಿನ ಸಾಲು, ಶಂಖ- ಚಕ್ರ, ಚಂದ್ರ-ಸೂರ್ಯ-ನಕ್ಷ ತ್ರ ಸೇರಿದಂತೆ ನಾನಾ ಪುರಾತನ ಕಥೆಗಳಲ್ಲಿ ಬರುವ ದೇವತೆಗಳಿಂದಿಡಿದು ಸುತ್ತಮುತ್ತಲ ಪರಿಸರವನ್ನು ಬಿಂಬಿಸುವ ಗಿಡ-ಬಳ್ಳಿ, ಕಮಲ, ರಂಗೋಲಿ ಹೀಗೆ ನಾನಾ ಡಿಸೈನ್‌ಗಳನ್ನು ಒಳಗೊಂಡ ಈ ಜ್ಯುವೆಲರಿಗಳು ಇಂದಿಗೂ ಟ್ರೆಂಡ್‌ನಲ್ಲಿ ಉಳಿದಿವೆ ಎನ್ನುತ್ತಾರೆ ಡಿಸೈನರ್ಸ್.

ಟೆಂಪಲ್‌ ಜ್ಯುವೆಲರಿ ಸೆಟ್‌ಗೆ ಡಿಮ್ಯಾಂಡ್‌

ನೆಕ್ಲೇಸ್‌ ಹಾಗೂ ಇಯರ್​ ರಿಂಗ್ಸ್‌ ಹೊರತುಪಡಿಸಿದರೇ, ಟೆಂಪಲ್‌ ಜ್ಯುವೆಲರಿ ಇಡೀ ಸೆಟ್‌ಗೆ ಹೆಚ್ಚು ಡಿಮ್ಯಾಂಡ್‌ ಇದೆ. ರೇಷ್ಮೆ ಸೀರೆ ಅಥವಾ ಟ್ರೆಡಿಷನಲ್‌ ಉಡುಪಿನೊಂದಿಗೆ ಇವನ್ನು ಧರಿಸಿದಲ್ಲಿ ನೋಡಲು ಟ್ರೆಡಿಷನಲ್‌ ಲುಕ್‌ ದೊರೆಯುತ್ತದೆ. ಹಾಗಾಗಿ ಕುಟುಂಬದ ಸಮಾರಂಭಗಳಿಗೆ ಹೇಳಿ ಮಾಡಿಸಿದ ಜ್ಯುವೆಲರಿಗಳಿವು ಎನ್ನುತ್ತಾರೆ ಆಭರಣ ವಿನ್ಯಾಸಕಾರರು.

ಟೆಂಪಲ್‌ ಜ್ಯುವೆಲರಿ ಕೊಳ್ಳುವಾಗ ಗಮನದಲ್ಲಿಡಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: wedding Fashion: ಸಮ್ಮರ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನ ಹಿಟ್‌ ಲಿಸ್ಟ್‌ಗೆ 3 ಗ್ಲಾಮರಸ್‌ ಶೈಲಿಯ ಲೆಹೆಂಗಾ

Exit mobile version