Site icon Vistara News

Winter Fashion: ವಿಂಟರ್‌ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್‌ ಪೊಂಚೊ

Winter Poncho Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ವಿನ್ಯಾಸದ ವುಲ್ಲನ್‌ ಪೊಂಚೊಗಳು ಈ ವಿಂಟರ್‌ ಸೀಸನ್‌ಗೆ (Winter Fashion) ಮರು ಎಂಟ್ರಿ ನೀಡಿವೆ. ಧರಿಸಿದಾಗ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಎಲ್ಲಾ ಬಗೆಯ ಉಡುಪಿಗಳಿಗೆ ಮ್ಯಾಚ್‌ ಆಗುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.

ಪೊಂಚೊ ವಿನ್ಯಾಸ

ವಿಭಿನ್ನ ಸ್ಟಿಚ್ಚಿಂಗ್‌ ಸ್ಟೈಲ್‌ ಹೊಂದಿರುತ್ತದೆ. ಜತೆಗೆ ತೀರಾ ಕಡಿಮೆ ಸ್ಟಿಚ್ಚಿಂಗ್‌ ಲೈನ್‌ ಇದರಲ್ಲಿರುತ್ತದೆ. ಫ್ರೀ ಸ್ಲೀವ್‌ ಎನ್ನಲಾಗುವ ಈ ಪೊಂಚೊ ಪ್ಯಾಟರ್ನ್‌ನಲ್ಲಿ ಸೈಡ್‌ ಸ್ಟಿಚ್ಚಿಂಗ್‌ ಇರುವುದಿಲ್ಲ. ಕೇವಲ ತಲೆಯ ಭಾಗದಿಂದ ಇದನ್ನು ಹಾಕಿಕೊಂಡರಾಯಿತು ಎನ್ನುತ್ತಾರೆ ಪೊಂಚೊ ವಿನ್ಯಾಸಕರು. ಕೆಲವು ತ್ರಿಕೋನ ಆಕಾರದಲ್ಲಿದ್ದರೇ ಮತ್ತೆ ಕೆಲವು ಆಯತಾಕಾರದಲ್ಲಿರುತ್ತವೆ. ಇನ್ನು ಕೆಲವು ಶೇಪ್‌ಲೆಸ್‌ ಎನ್ನಬಹುದು. ಪೊಂಚೊ ಪ್ರಿಯರು ಆದಷ್ಟೂ ತಮ್ಮ ಪರ್ಸನಾಲಿಟಿ ಹಾಗೂ ಆಕಾರಕ್ಕೆ ತಕ್ಕಂತಹದ್ದನ್ನೇ ಖರೀದಿಸುವುದು ಉತ್ತಮ ಎನ್ನುತ್ತಾರೆ. ಇತ್ತೀಚೆಗೆ ಕೆಲವು ರೆಗ್ಯುಲರ್‌ ವುಲ್ಲನ್‌ ಟಾಪ್‌ನಂತೆಯೇ ಕಾಣುತ್ತವೆ. ಕೆಲವು ಪುಲ್‌ಓವರ್‌ನಂತೆ ಕಾಣುತ್ತವೆ. ವಿನ್ಯಾಸದಲ್ಲೂ ಬದಲಾವಣೆಯಾಗಿದೆ. ನಾನಾ ವರ್ಣಗಳಲ್ಲಿ ಮಿಕ್ಸ್‌ ಮ್ಯಾಚ್‌ ಆಪ್ಷನ್‌ನಲ್ಲಿ ಲಭ್ಯವಿರುವ ಪೊಂಚೊಗಳ ಫಿನಿಶಿಂಗ್‌ ಕೂಡ ಅಷ್ಟೇ ಆಕರ್ಷಕವಾಗಿರುತ್ತದೆ. ಬಹುತೇಕ ನೆಕ್‌ಲೈನ್‌ಗಳು ಅಗಲವಾಗಿರುತ್ತವೆ. ಯಾವುದೇ ಬಟನ್ಸ್‌ ಇರುವುದಿಲ್ಲ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ನೈನಾ ಅರೋರಾ ಧವನ್‌.

ಹ್ಯಾಂಡ್‌ ಮೇಡ್‌ ನಿಟ್ಟೆಡ್‌ ಪೊಂಚೊ

ವುಲ್ಲನ್‌ನ ಪೊಂಚೊಗಳನ್ನು ಹೆಣೆಯುವವರು ಇದ್ದಾರೆ. ಸ್ಟೆಟ್ಟರ್‌ನಂತೆಯೇ ಇವನ್ನು ಹೆಣೆಯಲಾಗುತ್ತದೆ. ವಿನ್ಯಾಸ ಮಾಡುವ ಉಸಾಬರಿಯಿಲ್ಲ. 80ರ ದಶಕದಲ್ಲಿದ್ದ ಈ ಪೊಂಚೊ ಫ್ಯಾಷನ್‌ ಇದೀಗ ಮತ್ತೊಮ್ಮೆ ಮರುಕಳಿಸಿರುವುದು ನಾನಾ ಪ್ರಯೋಗಗಳಿಗೆ ದಾರಿ ಮಾಡಿ ಕೊಟ್ಟಿದೆ. ಈ ಹಿಂದೆಯೂ ಒಮ್ಮೆ ಈ ಫ್ಯಾಷನ್‌ ಕೆಲಕಾಲ ಬಂದಿತ್ತು. ಆದರೆ ಸೀಸನ್‌ ಬದಲಾದಂತೆ ಮರೆಯಾಗಿತ್ತು. ಇದೀಗ ಮುಂಬರುವ ವಿಂಟರ್‌ಗೆ ಸೂಟ್‌ ಆಗುವಂತೆ ನಾನಾ ವಿನ್ಯಾಸದವನ್ನು ಹೆಣೆಯುವವರು ಇದ್ದಾರೆ. ಮನೆಯಲ್ಲಿಯೇ ಸ್ವೆಟ್ಟರ್‌ ಹೆಣೆಯುವವರು ಇದನ್ನು ಹೆಣೆದು ಮಾರಾಟ ಮಾಡಲಾರಂಭಿಸಿದ್ದಾರೆ ಎನ್ನುತ್ತಾರೆ ಡಿಸೈನರ್‌ ಜಯಾ.

ಟಾಪ್‌ ಶೈಲಿಯ ಪೊಂಚೊ

ಟಾಪ್‌ ಶೈಲಿಯವು ಇದೀಗ ಕಾಲಿಟ್ಟಿವೆ. ಒಂದಕ್ಕಿಂತ ಮತ್ತೊಂದು ನೋಡಲು ಆಕರ್ಷಕವಾಗಿವೆ. ಪೊಂಚೊ ಟಾಪ್‌ಗಳು ನೋಡಲು ದೊಗಳೆಯಾಗಿ ಕಂಡರೂ ಫ್ಯಾಷನ್‌ನಲ್ಲಿವೆ.

ಪೊಂಚೊ ಧರಿಸುವ ಫ್ಯಾಷನ್‌ ಪ್ರಿಯರಿಗಾಗಿ..

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Model Fashion Life: ಸ್ಟೈಲಿಶ್ ಸ್ಯಾಕ್ಸೋಫೋನಿಸ್ಟ್ ಭಾರತಿ ಗೋಪಾಲ್‌ ವಿಂಟರ್‌ ಫ್ಯಾಷನ್‌ ಟಿಪ್ಸ್‌ ಹೀಗಿದೆ…

Exit mobile version