Site icon Vistara News

New Year Party Gowns Fashion: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಂತು 3 ಶೈಲಿಯ ಪಾರ್ಟಿ ಗೌನ್ಸ್

New Year Party Gowns Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಸಾಥ್ ನೀಡುವ 3 ಶೈಲಿಯ ಪಾರ್ಟಿ ಗೌನ್‌ಗಳು ಫ್ಯಾಷನ್ ಲೋಕಕ್ಕೆ (New year party Gowns fashion) ಎಂಟ್ರಿ ನೀಡಿವೆ. ಅದರಲ್ಲೂ ಈ ಜನರೇಷನ್ ಯುವತಿಯರಿಗೆ ಪ್ರಿಯವಾಗುವಂತಹ ಗೌನ್‌ಗಳು ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ.

“ಇನ್ನೇನೂ ಹೊಸ ವರ್ಷ ಆಗಮಿಸುತ್ತಿದೆ. ಸೆಲೆಬ್ರೇಷನ್ ಪಾರ್ಟಿಗೆ ಹೊಂದುವಂತೆ ಈಗಾಗಲೇ ನಾನಾ ಶೈಲಿಯ ಗೌನ್‌ಗಳು ಕಾಲಿಟ್ಟಿವೆ. ಅವುಗಳಲ್ಲಿ 3 ಶೈಲಿಯ ಮಾಡರ್ನ್ ವಿನ್ಯಾಸದ ಗೌನ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅದರಲ್ಲೂ ಇವು ಜೆನ್ ಜಿ ಹುಡುಗಿಯರು ಹಾಗೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಮನ ಸೆಳೆದಿವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಗ್ಲಾಮರಸ್ ಲುಕ್ ನೀಡುವುದರೊಂದಿಗೆ ಹಾಟ್ ಲುಕ್ ನೀಡುವ ಸ್ಯಾಟಿನ್ ಬಾಡಿಕಾನ್ ಗೌನ್ಸ್, ಶಿಮ್ಮರಿಂಗ್ ಸಾಫ್ಟ್ ಫ್ಯಾಬ್ರಿಕ್ ಗೌನ್ಸ್ ಹಾಗೂ ಶೈನಿಂಗ್ ಸಿಕ್ವೀನ್ಸ್ ಗೌನ್ಸ್ ನ್ಯೂ ಇಯರ್ ಪಾರ್ಟಿ ಗೌನ್ ಲಿಸ್ಟ್‌ನಲ್ಲಿ ಟಾಪ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ.

ಆಕರ್ಷಕ ಸ್ಯಾಟಿನ್ ಗೌನ್ಸ್

ಧರಿಸಿದರೇ ಬಿಎಂಐಗೆ ತಕ್ಕಂತೆ ಫ್ಲೋ ಆಗುವ ಸ್ಯಾಟಿನ್ ಗೌನ್‌ಗಳು ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ಬಂದಿವೆ. ಕೋಲ್ಡ್ ಶೋಲ್ಡರ್, ಬಾರ್ಡಟ್, ಆಫ್ ಶೋಲ್ಡರ್ ಸ್ಯಾಟಿನ್ ಗೌನ್‌ಗಳು ಹೊಸ ವಿನ್ಯಾಸದಲ್ಲಿ ಆಗಮಿಸಿವೆ. ನ್ಯೂ ಇಯರ್‌ಗೆ ಹೊಂದುವಂತೆ ಶೈನಿಂಗ್ ಕಲರ್ ಶೇಡ್‌ಗಳಲ್ಲಿ, ಸ್ಲಿಟ್ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಹೆಚ್ಚು ಹೆವ್ವಿ ವಿನ್ಯಾಸವಿಲ್ಲದ ಇವು ಈ ಜೆನ್ ಜಿ ಹುಡುಗಿಯರಿಗೆ ಪ್ರಿಯವಾಗುವಂತಿವೆ.

ಶಿಮ್ಮರಿಂಗ್ ಗೌನ್ಸ್

ನೋಡಿದಾಕ್ಷಣ ಕಣ್ಣು ಕೊರೈಸುವ ಮಿರಮಿರ ಮಿಂಚುವ ಶಿಮ್ಮರಿಂಗ್ ಫ್ಯಾಬ್ರಿಕ್‌ನ ಸಿಲ್ವರ್, ಗೋಲ್ಡ್, ಮಜೆಂತಾ ಸೇರಿದಂತೆ ನಾನಾ ಶೇಡ್‌ಗಳ ಶೈನಿಂಗ್ ಗೌನ್‌ಗಳು ಹೊಸ ವರ್ಷದ ಹರ್ಷವನ್ನು ಹೆಚ್ಚಿಸಲು ಬಂದಿವೆ. ಯುವತಿಯರಿಗೆ ಇಷ್ಟವಾಗುವಂತಹ ಸ್ಲೀವ್, ಬಾಡಿ ಫಿಟ್ ವಿನ್ಯಾಸದಲ್ಲಿ, ಕಟೌಟ್ ಡಿಸೈನ್‌ಗಳಲ್ಲಿ ಲಗ್ಗೆ ಇಟ್ಟಿವೆ.

ಶೈನಿಂಗ್ ಸಿಕ್ವೀನ್ಸ್ ಗೌನ್ಸ್

ಪಾರ್ಟಿಯಲ್ಲಿ ನೂರು ಜನರ ಮಧ್ಯೆಯೂ ಎದ್ದು ಕಾಣಬಹುದಾದ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಿರುವ ಸಿಕ್ವೀನ್ಸ್ ಗೌನ್‌ಗಳು ಈ ಬಾರಿ ಲೆಕ್ಕವಿಲ್ಲದಷ್ಟೂ ಮಿಕ್ಸ್ ಮ್ಯಾಚ್ ಶೇಡ್‌ಗಳಲ್ಲಿ ಬಂದಿವೆ. ನೋಡಲು ಸಿಂಪಲ್ ಡಿಸೈನ್‌ನಲ್ಲಿ ಆಗಮಿಸಿರುವ ಇವು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ. ಜನರೇಷನ್ ಹುಡುಗಿಯರ ವಾರ್ಡೋಬ್ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Winter Fashion: ವಿಂಟರ್‌ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್‌ ಪೊಂಚೊ

Exit mobile version